‘SIR ಮೂಲಕ ಓಟ್ ಚೋರಿ’ ಆರೋಪ: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಆಕ್ರೋಶ

ಸಮಗ್ರ ಸುದ್ದಿ, ಚಿತ್ರದುರ್ಗ ಸೆ. 26
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ಎಸ್.ಐ.ಆರ್.ಮೂಲಕ ಬಿಜೆಪಿ. ಓಟ್ ಚೋರಿ ಮಾಡುತ್ತಿದೆ. ಇಡಿ, ಸಿಬಿಐ. ಸಂಸ್ಥೆಗಳನ್ನು ದುರುಪಯೋಗ ಪಡಿಸಿ ಕೊಳ್ಳುತ್ತಿರುವ ಬಿಜೆಪಿ. ಸರ್ಕಾರ ತನಗೆ ಬಾರದ ಮತಗಳನ್ನು ಗುರುತಿಸಿ ಮತ ಪಟ್ಟಿಯಿಂದ ತೆಗದು ಹಾಕುವ ಕುತಂತ್ರ ನಡೆಸುತ್ತಿದೆ ಎಂದು ಕೆ.ಪಿ.ಸಿ.ಸಿ. ವಕ್ತಾರ ಜಿ.ಬಿ.ಬಾಲಕೃಷ್ಣಸ್ವಾಮಿ ಯಾದವ್ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶವನ್ನು ವ್ಯಕ್ತಪಡಿಸಿದರು. 

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ.ರಾಷ್ಟ್ರದಲ್ಲಿ ಎಸ್‍ಐಆರ್ ಮುಖಾಂತರ ಓಟ್ ಚೋರಿ ನಡೆಯುತ್ತಿದೆ.ಬಿಜೆಪಿ ಪಕ್ಷ ಭಾವನಾತ್ಮಕವಾಗಿ ಜನರನ್ನು ಕೆರಳಿಸಿ ಮತ ಹಾಕಿಸಿಕೊಳ್ಳುತ್ತಿದೆ.ಕೇಂದ್ರ ಸರ್ಕಾರ ಇಡಿ ಸಿಬಿಐ ಗಳನ್ನು ದುರುಪಯೋಗಪಡಿಸಿಕೊಂಡು ಅಧಿಕಾರಕ್ಕೆ ಬರುತ್ತಿದೆ.ಬಿಜೆಪಿ ಪಕ್ಷಕ್ಕೆ ಬೀಳದ ಮತಗಳನ್ನು ಪತ್ತೆ ಹಚ್ಚಿ ಮತಪಟ್ಟಿಯಿಂದ ಕಿತ್ತುಹಾಕುವ ಕುತಂತ್ರವಿದು.ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆ ವಿರುದ್ಧ ರಾಹುಲ್ ಗಾಂಧಿಯವರು ಆಕ್ಷೇಪ ಮಾಡುತ್ತಾ ಬಂದಿದ್ದರು ಅದು ಸತ್ಯವಾಗಿದೆ.ಈಗ ಬಿಜೆಪಿ ಪಕ್ಷದ ಮುಖವಾಡ ಕಳಚಿ ದೇಶದ ಜನರಿಗೆ ಗೊತ್ತಾಗುತ್ತಿದೆ.ಬೆಂಗಳೂರಿನ ಪ್ರೀಡಂ ಪಾರ್ಕ್‍ನಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಈಗಾಗಲೇ ಪ್ರತಿಭಟನೆ ನಡೆಸುತ್ತಿದ್ದಾರೆ.ಒಂದು ಕೋಟಿ ಎಪ್ಪತ್ತು ಲಕ್ಷ ಮತದಾರರು ದೇಶದಲ್ಲಿ ಆತಂಕದಲ್ಲಿ ದ್ದಾರೆ ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕು ಮುಖ್ಯ ಎಂದರು. 

ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್‍ಕುಮಾರ್‍ರವರ ಪದಚ್ಯುತಿಯಾಗುವತನಕ ನಮ್ಮ ಹೋರಾಟ ನಿಲ್ಲುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಮತದಾನ ಮುಖ್ಯ ಎನ್ನುವ ಜಾಗೃತಿಯನ್ನು ಪ್ರತಿಭಟನೆ ಮೂಲಕ ಜನಸಾಮಾನ್ಯರಿಗೆ ಮೂಡಿಸಲಾಗುತ್ತದೆ. ಭಾರತದಲ್ಲಿ ಒಂದು ಕೋಟಿ ಎಪ್ಪತ್ತು ಲಕ್ಷ ಮತದಾರರು ಆತಂಕದಲ್ಲಿದ್ದಾರೆ. ಪ್ರತಿಯೊಬ್ಬರು ಮತದಾನದ ಹಕ್ಕನ್ನು ಉಳಿಸಿಕೊಳ್ಳಲಿ ಎನ್ನುವುದು ನಮ್ಮ ಉದ್ದೇಶ ಎಂದು .ಬಾಲಕೃಷ್ಣಸ್ವಾಮಿ ಯಾದವ್ ತಿಳಿಸಿದರು. 

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡಿ ಸಂವಿಧಾನ ಎಲ್ಲರಿಗೂ ಮತದಾನದ ಹಕ್ಕನ್ನು ನೀಡಿದೆ. ಎಸ್‍ಐಆರ್ ಮೂಲಕ ಕೇಂದ್ರ ಸರ್ಕಾರ ಮತದಾನದ ಹಕ್ಕನ್ನು ಕಸಿಯುತ್ತಿದೆ.ರಾಷ್ಟ್ರಮಟ್ಟದಲ್ಲಿ ಎನ್ಮರೇಶನ್ ಫಾರಂ ನೀಡಿ ಮತ ಪಟ್ಟಿಯಲ್ಲಿ ಹೆಸರು ನೋಂದಾಯಿಸುವಂತೆ ಮನವಿ ಮಾಡುತ್ತಿದ್ದಾರೆ. ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರಾದ ಜ್ಞಾನೇಶ್ ಕುಮಾರ್ ರವರ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ಪದಚುತಿಗೊಳಿಸಬೇಕು ಭಾವನಾತ್ಮಕವಾಗಿ ಜನರನ್ನು ಕೆರಳಿಸಿ ಮತ ಹಾಕಿಸಿಕೊಳ್ಳುತ್ತಿರುವ ಕೋಮುವಾದಿ ಬಿಜೆಪಿ. ಎಸ್.ಐ.ಆರ್.ಮೂಲಕ ಅರ್ಹ ಮತದಾರರನ್ನು ಮತಪಟ್ಟಿ ಯಿಂದ ಕಿತ್ತು ಹಾಕುತ್ತಿರುವುದರ ವಿರುದ್ದ ಜನರನ್ನು ಜಾಗೃತಿಗೊಳಿಸುವುದಕ್ಕಾಗಿ ಹಾಗೂ ಕೇಂದ್ರ ಸರ್ಕಾರ ಚುನಾವಣಾ ಆಯೋಗವನ್ನು ಕೈಗೊಂಬೆ ಮಾಡಿಕೊಂಡಿರುವುದನ್ನು ವಿರೋಧಿಸಿ ದಿನಾಂಕ: 28.09.2026 ರಂದು ಚಿತ್ರದುರ್ಗ ನಗರದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಫಾರಂ ನಂ.7 ರಲ್ಲಿ ಸಹಿ ಇಲ್ಲದೆ ಫಾರಂಗಳನ್ನು ಭರ್ತಿ ಮಾಡಿ ಮತದಾರರನ್ನು ಪಟ್ಟಿಯಿಂದ ಡಿಲಿಟ್ ಮಾಡುವಂತೆ ಬಿಜೆಪಿ.ಯವರು ಸಂಚು ನಡೆಸುತ್ತಿದ್ದಾರೆ. ಯಾರು ಮತದಾನದ ಹಕ್ಕಿನಿಂದ ವಂಚಿತರಾಗ ಬಾರದೆಂದು ಜಾಗೃತಿ ಮೂಡಿಸುವುದಕ್ಕಾಗಿ ಸೆ.28 ರಂದು ಬೆಳಿಗ್ಗೆ 11 ಕ್ಕೆ ಜಿಲ್ಲಾ ಕಾಂಗ್ರೆಸ್‍ನಿಂದ ಪ್ರತಿಭಟನೆ ಹೊರಟು ಅಂಬೇಡ್ಕರ್ ವೃತ್ತದ ಮೂಲಕ ಒನಕೆ ಓಬವ್ವ ವೃತ್ತಕ್ಕೆ ಆಗಮಿಸಲಿದೆ. ಈ ಪ್ರತಿಭಟನೆಯಲ್ಲಿ ಎಲ್ಲಾ ಪಕ್ಷದವರು, ಸಂಘಟನೆಯವರು, ಸಂವಿಧಾನದ ಪರವಾಗಿರುವವರು ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು

ಕಂಠೀರವ ಸ್ಟುಡಿಯೋ ಅಧ್ಯಕ್ಷ ಮೆಹಬೂಬ್‍ಪಾಷ ಮಾತನಾಡುತ್ತ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದ ಮೂಲಕ ಎಲ್ಲರಿಗೂ ಮತದಾನದ ಹಕ್ಕು ನೀಡಿದ್ದಾರೆ. ಕೇಂದ್ರ ಸರ್ಕಾರ ಎಸ್.ಐ.ಆರ್.ಮೂಲಕ ನಿಜವಾದ ಮತದಾರರನ್ನು ಮತಪಟ್ಟಿಯಿಂದ ತೆಗೆದು ಹಾಕುವ ಸಂಚು ನಡೆಸುತ್ತಿದೆ. ಇದರ ವಿರುದ್ದ ಪ್ರತಿಯೊಬ್ಬರು ಜಾಗೃತರಾಗ ಬೇಕಿದೆ  ಎಸ್.ಐ.ಆರ್. ದುರ್ಬಳಕೆ ಮಾಡಿಕೊಂಡು ಕೇಂದ್ರ ಸರ್ಕಾರ ಮತದಾನದ ಮಹತ್ವವನ್ನು ಬುಡಮೇಲು ಮಾಡುತ್ತಿದೆ. ಪಶ್ಚಿಮ ಬಂಗಾಳದಲ್ಲಿ 85 ಲಕ್ಷ ಮತದಾರರನ್ನು ಮತ ಪಟ್ಟಿಯಿಂದ ತೆಗೆದು ಹಾಕಿ ಪ್ರಜಾಪ್ರಭುತ್ವಕ್ಕೆ ಬೆಲೆ ಇಲ್ಲದಂತೆ ಮಾಡಿದೆ. ಕೇಂದ್ರ ಚುನಾವಣಾ ಆಯೋಗ ಸ್ವತಂತ್ರ ಸಂಸ್ಥೆ. ಯಾರ ಹಿಡಿತದಲ್ಲಿಯೂ ಇರಬಾರದು. ಎಲ್ಲರಿಗೂ ಸಮಾನತೆ ಸಿಕ್ಕಿರುವುದು ಕಾಂಗ್ರೆಸ್‍ನಲ್ಲಿ ಮಾತ್ರ. ಎಸ್.ಐ.ಆರ್.ಮೂಲಕ ಮತದಾನದ ಹಕ್ಕು ಕಿತ್ತುಕೊಳ್ಳುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ವಿಷಾಧಿಸಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಂಪತ್‍ಕುಮಾರ್, ಡಿ.ಎನ್.ಮೈಲಾರಪ್ಪ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಲಕ್ಷ್ಮಿಕಾಂತ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತನಂದಿನಿಗೌಡ, ಕಂದಿಕೆರೆ ಸುರೇಶ ಭಾಬು, ಓಬಿಸಿ ಅಧ್ಯಕ್ಷ ಎನ್.ಡಿ.ಕುಮಾರ್, ಸುರೇಶ್‍ನಾಯ್ಕ, ಹೆಚ್.ಅಂಜಿನಪ್ಪ, ಮುದಾಸಿರ್ ನವಾಜ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *