ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಏ. 21
ಮೂರುವರೆ ದಶಕದ ಹೋರಾಟದ ಫಲವಾಗಿ ನಮಗೆ ಈ ಸೌಲಭ್ಯ ದೊರೆಯುತ್ತಿದೆ ಹೀಗಾಗಿ ಹೋರಾಟಕ್ಕೆ ಮುಂದಾಗದೇ ಸರ್ಕಾರ ಮನವೊಲಿಸಿ ಸೌಲಭ್ಯ ಪಡೆಯಬೇಕಿದೆ ಅವಕಾಶ ವಂಚಿತ ನಮ್ಮ ಸಮುದಾಯಕ್ಕೂ ಮಾನದಂಡ ಇಲ್ಲದೆ ಹಲವು ಸಮುದಾಯಗಳು ಹುದ್ದೆಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದು ಅವರೊಂದಿಗೆ ಪೈಪೋಟಿ ಮಾಡಲು ನಮ್ಮಿಂದ ಸಾಧ್ಯವಿಲ್ಲ. ಆದ್ದರಿಂದ ಒಳ ಮೀಸಲಾತಿ ಜಾರಿಯಾಗಲೇಬೇಕು.56432 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಬಾಕಿ ಉಳಿದಿದ್ದು. ಅದು ಕೂಡ ಒಳ ಮೀಸಲಾತಿ ಅನ್ವಯವೇ ಭರ್ತಿಗೆ ಕ್ರಮವಹಿಸಬೇಕು ಎಂದು ಸರ್ಕಾರವನ್ನು ಮಾಜಿ ಸಚಿವ ಎಚ್. ಆಂಜನೇಯ ಆಗ್ರಹಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ. 24ರಂದು ಮುಖ್ಯಮಂತ್ರಿಗಳು ವಿಶೇಷ ಸಚಿವ ಸಂಪುಟ ಸಭೆಯನ್ನು ಕರೆದಿದ್ದು ಒಳ ಮೀಸಲಾತಿಯನ್ನು ಜಾರಿ ಮಾಡುವ ವಿಶ್ವಾಸ ಮೂಡಿದೆ.ಪರಿಶಿಷ್ಟ ಜಾತಿ ಸಮುದಾಯಕ್ಕೆ ಹೈಕೋರ್ಟ್ ಸೂಚನೆಯ ಮೇರೆಗೆ ಶೇ 17 % ಮೀಸಲಾತಿಯ ಬದಲು ಈ ಹಿಂದೆ ಇದ್ದಂತಹ ಶೇ 15% ರಷ್ಟು ಮೀಸಲಾತಿ ದೊರೆಯಲಿದೆ. ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆಯನ್ನು ಕೆಪಿಎಸ್‍ಸಿ ಮೂಲಕ ನೇಮಿಸಿಕೊಳ್ಳಲು ಮುಂದಾಗಿದ್ದು ಅವುಗಳನ್ನು ಮುಂದೂಡಲಾಗಿದೆ… ಆದರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನೇಮಕಾತಿ ಪ್ರಕ್ರಿಯೆ ಮಾಡಿಕೊಳ್ಳುವ ಮುನ್ಸೂಚನೆ ಇದ್ದು ಸಮುದಾಯಕ್ಕೆ ವಂಚನೆಯಾಗುವ ಲಕ್ಷಣವಿದೆ ಆದ್ದರಿಂದ ಅದನ್ನು ತಡೆದು ಒಳ ಮೀಸಲಾತಿ ಜಾರಿ ಬಳಿಕವೇ ನೇಮಕಾತಿ ಕೈಗೊಳ್ಳಬೇಕು.ಇತರೆ ಸಮೂದಾಯದ ನಿರುದ್ಯೋಗಿಗಳಿಗೆ ತೊಂದರೆಯಾಗುವುದನ್ನು ಮನಗಂಡು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಒಳ ಮೀಸಲಾತಿ ಜಾರಿಗೊಳಿಸಿ ಅದರನ್ವಯ ಎಲ್ಲಾ ಸರ್ಕಾರಿ ಹುದ್ದೆಗಳ ಭರ್ತಿಗೆ ಕ್ರಮ ವಹಿಸಬೇಕೆಂದು ಸಮುದಾಯದ ಪರವಾಗಿ ಮನವಿ ಮಾಡಿದರು.
ಶಿಕ್ಷಣದಲ್ಲಿ ಮೀಸಲಾತಿ ಇದೆ. ಭಡ್ತಿಯಲ್ಲೂ ಒಳ ಮೀಸಲಾತಿ ಜಾರಿಯಾಗಲಿ. ಈಗಾಗಲೇ ಒಳ ಮೀಸಲಾತಿ ಜಾರಿ ಮಾಡಿ ಒಂದು ವರ್ಷ ಕಳೆದಿರುವ ಆಂಧ್ರಪ್ರದೇಶ ಮತ್ತು ತೆಲಂಗಾಣ ಮಾದರಿಯನ್ನು ಅನುಸರಿಸಿ ಸಾಮಾಜಿಕ ನ್ಯಾಯ ನೀಡುವ ಮೂಲಕ ಮಾದಿಗ ಸಮುದಾಯದವರು ಬದುಕು ಕಟ್ಟಿಕೊಳ್ಳಲು ಅನುವು ಮಾಡಿಕೊಡಬೇಕೆಂದ ಅವರು. ರಾಜ್ಯದಲ್ಲಿ ಒಳ ಮೀಸಲಾತಿ ಜಾರಿಯಾಗದೇ ಸರ್ಕಾರ ಯಾವುದೇ ಹೊಸ ಸರ್ಕಾರಿ ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆಸಬಾರದು. ಒಂದು ವೇಳೆ ಒಳ ಮೀಸಲಾತಿ ಇಲ್ಲದೆ ನೇಮಕಾತಿ ಮಾಡಿದರೆ ಅದು ಸಮುದಾ ಯಕ್ಕೆ ಮಾಡುವ ದೊಡ್ಡ ವಂಚನೆಯಾಗುತ್ತದೆ. ಆಂಜನೇಯ ಆತಂಕ ವ್ಯಕ್ತಪಡಿಸಿದ್ದಾರೆ. ವಿವಿಧ ಆಯೋಗಗಳ ವರದಿಯಂತೆ ಮಾದಿಗ ಸಮುದಾಯಕ್ಕೆ 6% ಒಳ ಮೀಸಲಾತಿ ನೀಡಬೇಕು. ಉಳಿದ ಪಾಲನ್ನು ಇತರ ಉಪಜಾತಿಗಳಿಗೆ ಹಂಚಿಕೆ ಮಾಡಲಿ. ಜೊತೆಗೆ ಅಲೆಮಾರಿ ಸಮುದಾಯಕ್ಕೆ ಕಡ್ಡಾಯವಾಗಿ 1% ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.
”ನಮ್ಮ ಸಮಾಜ ಕಳೆದ 35 ವರ್ಷಗಳಿಂದ ಒಳ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದೇವೆ. ದೇಶದ ಇತರೆ ರಾಜ್ಯಗಳಲ್ಲಿ ಅನುಷ್ಠಾನವಾಗಿ ಒಂದು ವರ್ಷ ಕಳೆದಿದ್ದರೂ, ನಮ್ಮ ರಾಜ್ಯದಲ್ಲಿ ಮಾತ್ರ ಕಾರಣಗಳನ್ನು ಹೇಳಿ ಮುಂದೂಡಲಾಗುತ್ತಿದೆ. ಕೂಡಲೇ ಒಳ ಮೀಸಲಾತಿ ಜಾರಿ ಮಾಡಿ ನಮ್ಮ ಸಮುದಾಯದ ಯುವ ಸಮೂಹಕ್ಕೆ ನ್ಯಾಯ ಒದಗಿಸಬೇಕು,” ಎಂದು ಆಂಜನೇಯ ಆಗ್ರಹಿಸಿ ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ನಾಳೆ ಮಾದಿಗ ಸಮುದಾಯದ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಗುವುದು ಎಂದು ತಿಳಿಸಿದರು.

