ಚಿತ್ರದುರ್ಗ ಮೇ. 12
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಹಿರಿಯ ಮುತ್ಸದ್ದಿ, ಮಾಜಿ ಸಂಸದರು, ಊ. ಹನುಮಂತಪ್ಪರವರ 95ನೇ ಹುಟ್ಟು ಹಬ್ಬವನ್ನು ಇಂದು ನಗರದ ಹೂರ ವಲಯದ ನಿಜಲಿಂಗಪ್ಪ ಸ್ಮಾರಕದ ಬಳಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾದರ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು, ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ನಗರಾಭೀವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಎಂ.ಕೆ ತಾಜ್‍ಪೀರ್, ನಿಜಲಿಂಗಪ್ಪ ಸ್ಮಾರಕ ಟ್ರಸ್ಟ್‍ನ ಷಣ್ಮುಖಪ್ಪ (ಕೆ.ಇ.ಬಿ.) ಸಾಹಿತಿಗಳಾದ ನಿರಂಜನ ದೇವರಮನೆ ಸೇರಿದಂತೆ ಇತರರು ಭಾಗವಹಿಸಿದ್ದರು.

