ಚಿತ್ರದುರ್ಗ ಆ. 11
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ರಾಜೀವಗಾಂಧಿಯವರ ದೂರದೃಷ್ಟಿಯಿಂದ ದೇಶ ಇಷ್ಟೊಂದು ಮುಂದುವರೆಯಲು ಸಾಧ್ಯವಾಗಿದೆ, ಮೊಬೈಲ್, ಕಂಪ್ಯೂಟರ್, 18 ವರ್ಷಕ್ಕೆ ಯುವ ಜನತೆಗೆ ಮತದಾನ, ಅಧಿಕಾರ ವಿಕೇಂದ್ರೀಕರಣ ಸೇರಿದಂತೆ ವಿವಿಧ ರೀತಿಯ ಆವಿಷ್ಕಾರಗಳನ್ನು ಆವರ ಅಧಿಕಾರದ ಆವಧಿಯಲ್ಲಿ ಮಾಡಿದ್ದರಿಂದ ಇಂದು ನಾವುಗಳು ಇವುಗಳ ಉಪಯೋಗವನ್ನು ಮಾಡುತ್ತಿದ್ದೇವೆ ಎಂದು ಸಚಿವರು, ಚಿತ್ರದುರ್ಗ ಜಿಲ್ಲಾ ಪಕೃತಿ ವಿಕೋಪ ಪರಿಹಾರ ಕಾರ್ಯಗಳ ಉಸ್ತುವಾರಿ ಸಚಿವರಾದ ಟಿ.ರಘುಮೂರ್ತಿ ತಿಳಿಸಿದರು.
ಆಲ್ ಇಂಡಿಯಾ ರಾಜೀವ್‍ಗಾಂಧಿ ಜ್ಯೋತಿ ಯಾತ್ರಾ ಸಮಿತಿಯವತಿಯಿಂದ ತಮಿಳುನಾಡಿನ ಶ್ರೀಪೆರಂಬೂರಿ ನಿಂದ ಆ.9 ರಂದು ಪ್ರಾರಂಭವಾದ ಈ ಜ್ಯೋತಿ ಯಾತ್ರಾ ಆ.20 ರಂದು ನವದೆಹಲಿಯಲ್ಲಿರುವ ದಿ|| ರಾಜೀವ್ ಗಾಂಧಿಜೀ ರವರ ವೀರಭೂಮಿ ತಲುಪಲಿದೆ. ದಾರಿ ಮಧ್ಯದಲ್ಲಿ ಮಂಗಳವಾರ ಚಿತ್ರದುರ್ಗಕ್ಕೆ ಭೇಟಿ ನೀಡಿದಾಗ ಅದನ್ನು ಸ್ವಾಗತಿಸಿ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಆಂಧ್ರಪ್ರದೇಶದ ವೆಂಕಟೇಶ್ ಅವರ ನೇತೃತ್ವದ ‘ರಾಗಾ ಫಾರ್ ರೈಸ್ ಆಫ್ ಇಂಡಿಯಾ’ ಯಾತ್ರೆಯು 52 ದಿನಗಳಿಂದ 1,000 ಕಿಲೋಮೀಟರ್ ಪೂರೈಸಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸಾಗುತ್ತಿದೆ. ಹಾಗೆಯೇ ಆಗಸ್ಟ್ 9ರಂದು ಕ್ವಿಟ್ ಇಂಡಿಯಾ ಚಳವಳಿಯ ಸವಿನೆನಪಿನಲ್ಲಿ ಪೆರಂಬದೂರಿನಿಂದ ಆರಂಭವಾದ ‘ರಾಜೀವ್ ಗಾಂಧಿ ಜ್ಯೋತಿ ಸದ್ಭಾವನಾ ಯಾತ್ರೆ’ಯು ಆಗಸ್ಟ್ 20ರಂದು ದೆಹಲಿಯ ವೀರಭೂಮಿ ತಲುಪಲಿದೆ. ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ 82ನೇ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಲಾಗಿರುವ ಈ ಯಾತ್ರೆಯನ್ನು ಪಕ್ಷದ ಕಚೇರಿಯಲ್ಲಿ ಗೌರವಪೂರ್ವಕವಾಗಿ ಸ್ವಾಗತಿಸಿ ಕಳುಹಿಸಿಕೊಡಲಾಗಿದೆ. ಆಧುನಿಕ ತಂತ್ರಜ್ಞಾನ, ಇಂಟರ್ನೆಟ್, ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ಹಾಗೂ 18 ವರ್ಷಕ್ಕೆ ಮತದಾನದ ಹಕ್ಕು ನೀಡಿದ ಹೆಗ್ಗಳಿಕೆ ರಾಜೀವ್ ಗಾಂಧಿ ಅವರಿಗೆ ಸಲ್ಲುತ್ತದೆ ಎಂದು ಸಚಿವರು ಸ್ಮರಿಸಿದರು.
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಆಧ್ಯಕ್ಷರಾದ ಪಿ.ರಘು ಮಾತನಾಡಿ, ರಾಜೀವ ಗಾಂಧಿಯವರ ದೇಶದ ಬಗ್ಗೆ ಹಲವಾರು ಕನಸು ಕಂಡಿದ್ದರು, ಅದನ್ನು ಸಕಾರ ಮಾಡಲು ಶ್ರಮವನ್ನು ಹಾಕಿದರು, ನಮ್ಮ ದೇಶ ಪ್ರಗತಿಯನ್ನು ಕಾಣ ಬೇಕಾದರೆ ಯುವ ಜನಾಂಗದಿಂದ ಮಾತ್ರ ಸಾಧ್ಯ ಎಂದು ತಿಳಿದಿದ್ದು ಅವರಿಗೆ ದೇಶದ ನಿರ್ಮಾಣದಲ್ಲಿ ಮಹತ್ತರವಾದ ಪಾತ್ರವನ್ನು ನೀಡಲು 18 ವರ್ಷಕ್ಕೆ ಮತದಾನದ ಹಕ್ಕನ್ನು ನೀಡಿದರು, ದೇಶದಲ್ಲಿ ಜಾತಿ ವ್ಯವಸ್ಥೆಯನ್ನು ದೂರ ಇಟ್ಟಿದ್ದರು ದೇಶದಲ್ಲಿ ಜಾತಿ ಇರಬಾರದೆಂದು ಆಸೆಯನ್ನು ಪಟ್ಟಿದ್ದರು, ಬಡವರ ಪರವಾಗಿ ಕಾಂಗ್ರೆಸ್ ಪಕ್ಷ ಕೆಲಸವನ್ನು ಮಾಡುತ್ತಿದೆ, ದೇಶವನ್ನು ಸ್ವಾತಂತ್ರ್ಯ ಗೊಳಿಸುವಲ್ಲಿ ಮಹತ್ತರವಾದ ಪಾತ್ರವನ್ನು ಕಾಂಗ್ರೆಸ್ ಹೊಂದಿದೆ ಎಂದರು.
ಡಿಸಿಸಿ ಅಧ್ಯಕ್ಷ ತಾಜ್‍ಪೀರ್ ಮಾತನಾಡಿ ಆರ್. ದೊರೈವೆಲು ಅವರ ನೇತೃತ್ವದಲ್ಲಿ ರಾಜೀವ್ ಜ್ಯೋತಿ ಯಾತ್ರಾ ಸಮಿತಿಯು ಭಯೋತ್ಪಾದನ ವಿರೋಧಿ ಸಂದೇಶವನ್ನು ಮತ್ತು ರಾಷ್ಟ್ರವನ್ನು ನಿರ್ಮಿಸಲು ಮತ್ತು ದೇಶದ ಏಕತೆಯನ್ನು ಬಲಪಡಿಸಲು ರಾಜೀವ್ ಗಾಂಧಿಯವರ ಕೊಡುಗೆಯನ್ನು ಹರಡುತ್ತದೆ. ರಾಜೀವ್ ಜ್ಯೋತಿ ಸದ್ಭಾವನಾ ಯಾತ್ರೆಯು ಸಹೋದರತ್ವ, ಏಕತೆ ಮತ್ತು ಭಯೋತ್ಪಾದನೆಯ ವಿರುದ್ಧ ದೃಢವಾದ ಕ್ರಮದ ಸಂದೇಶವನ್ನು ಹರಡುತ್ತದೆ. ಜನರಲ್ಲಿ ಜಾಗೃತಿ ಮೂಡಿಸುತ್ತೇವೆ. ನಮ್ಮ ದೇಶದಲ್ಲಿ ಭಯೋತ್ಪಾದನೆಯ ಅಪಾಯಕಾರಿ ಚಟುವಟಿಕೆಗಳ ನಮಗೆ ಶಾಂತಿ ಬೇಕು, ನಾವು ವಿಶ್ವ ಶಾಂತಿಗಾಗಿ ಪ್ರಾರ್ಥಿಸುತ್ತಿದೆ ಎಂದರು.
35 ನೇ ವರ್ಷದ ರಾಜೀವ್ ಗಾಂಧಿ ಜ್ಯೋತಿ ಸದ್ಭಾವನಾ ಯಾತ್ರೆಯ ನೇತೃತ್ವವನ್ನು ವಹಿಸಿಕೊಂಡಿರುವ ಆಲ್ ಇಂಡಿಯಾ ಆರ್.ಜಿ.ಜೆ.ವೈ ಸಮಿತಿಯ ಅಧ್ಯಕ್ಷರಾದ ಆರ್.ದೊರೈವೆಲು ಮಾತನಾಡಿ, ಕಳೆದ 35 ವರ್ಷಗಳಿಂದ ನಡೆಯುತ್ತಿರುವ ರಾಜೀವ್ ಜ್ಯೋತಿ ಸದ್ಭಾವನಾ ಯಾತ್ರೆಯನ್ನು ನಡೆಸಲಾಗುತ್ತಿದೆ ಈ ಸಲದ ಯಾತ್ರೆಯನ್ನು ಆಗಸ್ಟ್ 09 ರಂದು ಶ್ರೀಪರುಂಬುದೂರಿನಿಂದ ಆರಂಭವಾಯಿತು. ಅಗಲಿದ ನಾಯಕ ಮಾಜಿ ಪ್ರಧಾನಿ ರಾಜೀವ್ ಗಾಂಧಿಜಿ ಅವರಿಗೆ ಗೌರವ ಸಲ್ಲಿಸಲು 2026 ರ ಆಗಸ್ಟ್ 19 ರಂದು ನವದೆಹಲಿಗೆ ಯಾತ್ರೆ ತಲುಪಲಿದೆ. ಇದೇ ಸಂದರ್ಭದಲ್ಲಿ ರಾಜೀವಗಾಂಧಿಯವರ 82 ನೇ ಜನ್ಮ ವಾರ್ಷಿಕೋತ್ಸವವನ್ನು ಆಚರಿಸಲಾಗುವುದು. ಯಾತ್ರೆಯೂ ಕರ್ನಾಟಕ, ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಹರಿಯಾಣ, ನವದೆಹಲಿಯ ವಿವಿಧ ಪಟ್ಟಣಗಳು ಮತ್ತು ನಗರಗಳ ಮೂಲಕ ಹಾದು ಹೋಗಲಿದ್ದು, ಕರ್ನಾಟಕದಿಂದ 150 ಕಾಂಗ್ರೆಸ್ ಕಾರ್ಯಕರ್ತರ ತಂಡವು 2026 ರ ಆಗಸ್ಟ್ 20 ರಂದು ನವದೆಹಲಿಯ ವೀರ್ ಭೂಮಿಗೆ ತಲುಪಲಿದೆ ಎಂದರು.
ಈ ಜ್ಯೋತಿಯನ್ನು ಪರುಂಬುದೂರಿನಲ್ಲಿ ಭಾರತ ಬಿಟ್ಟು ತೊಲಗಿ ಚಳವಳಿಯ ದಿನದಂದು “ಭಯೋತ್ಪಾದನೆ ತ್ಯಜಿಸಿ” ಎಂಬ ಘೋಷಣೆಯೊಂದಿಗೆ ಜ್ಯೋತಿಯನ್ನು ಉದ್ಘಾಟಿಸಿದರು. ಆ. 10 ರಂದು ಕರ್ನಾಟಕಕ್ಕೆ |ಆಗಮಿಸಿದ ಯಾತ್ರೆಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ, ಗೃಹ ಸಚಿವ ಪ್ರಿಯಾಂಕಾ ಖರ್ಗೆ,ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ವಸತಿ ಸಚಿವ ಬಿ.ಝಡ್. ಝಮೀರ್ ಅಹ್ಮದ್ ಖಾನ್ ಇಂಧನ ಸಚಿವ ಕೆ. ಜೆ. ಜಾರ್ಜ್ ಜಿ ಸಿ ಚಂದ್ರಶೇಖರ್ ರಿಜ್ವಾನ್ ಅರ್ಷದ್ ಶಾಸಕ ಎಂ ಕೃಷ್ಣಪ್ಪ , ಪ್ರಿಯಾಂಕ್ ಖರ್ಗೆ , ಸೌಮ್ಯ ರೆಡ್ಡಿ ಶಾಸಕ ಪ್ರಿಯಾ ಕೃಷ್ಣ, ಶಾಸಕ ಎಚ್ ಆರ್ ಗವಿಯಪ್ಪ ಮತ್ತು ಎಲ್ಲಾ ಶಾಸಕರು ಮತ್ತು ಕಾಂಗ್ರೆಸ್ ನಾಯಕರು ಸ್ವಾಗತಿಸಿದರು. ಅ. 19 ಆಗಸ್ಟ್ 2026 ರಂದು ನವದೆಹಲಿ 24 ಅಕ್ಟರ್ ರಸ್ತೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋನಿಯಾ ಗಾಂಧಿ ರಾಹುಲ್ ಗಾಂಧಿ ಅಜಯ್ ಮಾಕೆನ್ ಜಿ, ರಣದೀಪ್ ಸಿಂಗ್ ಸುರ್ಜೇವಾಲಾ, ಪ್ರಿಯಾಂಕಾ ಗಾಂಧಿ ವಾದ್ರಾ , ಕೆ.ಸಿ ವೇಣುಗೋಪಾಲ, ಎಚ್. ಕೆ. ಪಾಟೀಲ್ ಬಿ.ಕೆ.ಹರಿಪ್ರಸಾದ್, ಮತ್ತು ಎಲ್ಲಾ ಸಂಸದರು, ಶಾಸಕರು ಮತ್ತು ಎಲ್ಲಾ ನಾಯಕರು. ಜ್ಯೋತಿ ಸ್ವೀಕರಿಸಲಿದ್ದಾರೆ.
ರಾಜೀವ್ ಗಾಂಧಿ ಜ್ಯೋತಿ ಸದ್ಭಾವನಾ ಯಾತ್ರೆಯ ಜೊತೆಯಲ್ಲಿ ಕೆ.ಪಿ.ಸಿ.ಸಿ. ಕಾರ್ಮಿಕ ಘಟಕದ ಅಧ್ಯಕ್ಷ ಪುಟ್ಟಸ್ವಾಮಿ ಗೌಡ ಐ. ಎನ್. ಟಿ. ಯು. ಸಿ. ಅಧ್ಯಕ್ಷೆ ಲಕ್ಷ್ಮೀವೆಂಕಟೇಶ್ ಗೀತಾ, ಕುಮಾರಸ್ವಾಮಿ ಸೇರಿದಂತೆ ಭಾಗವಹಿಸಿದ್ದರು. ಚಿತ್ರದುರ್ಗಕ್ಕೆ ನಿನ್ನೆ ಸಂಜೆ ಆಗಮಿಸಿದ ಜ್ಯೋತಿಯನ್ನು ಜಾಕಿರ್ ಹುಸೇನ್ ಮಠದ ಬಳಿ ಸ್ವಾಗತಿಸಿದರು ಇಂದು ಬೆಳಿಗ್ಗೆ ಅಲ್ಲಿಂದ ಚಿತ್ರದುರ್ಗ ನಗರದ ವಿವಿಧ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ನಗರದ ಆಂಬೇಡ್ಕರ್ ವೃತ್ತಕ್ಕೆ ಆಗಮಿಸಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆಯನ್ನು ನೇರವೇರಿಸಿ ಅಲ್ಲಿಂದ ಕಾಂಗ್ರೆಸ್ ಕಚೇರಿಯವರೆಗೂ ಪಾದಯಾತ್ರೆಯ ಮೂಲಕ ಜ್ಯೋತಿಯನ್ನು ತೆಗೆದುಕೊಂಡು ಹೋಗಲಾಯಿತು.
ಈ ಸಂದರ್ಭದಲ್ಲಿ ಡಿಸಿಸಿ ಕಾರ್ಯಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ ಕುಮಾರ್, ಮೈಲಾರಪ್ಪ, ಓಬಿಸಿ ಅಧ್ಯಕ್ಷ ಎನ್.ಡಿ.ಕುಮಾರ್, ಗ್ಯಾರೆಂಟಿ ಪ್ರಾಧಿಕಾರದ ಅಧ್ಯಕ್ಷ ಶಿವಣ್ಣ, ತಾಲ್ಲೂಕು ಆಧ್ಯಕ್ಷ ಪ್ರಕಾಶ್, ಚೋಟು, ವೆಂಕಟೇಶ್, ಕುಮಾರಗೌಡ, ಮುದಸಿರ್, ಮೊಹನ್ ಕುಮಾರ್, ನಾಗರಾಜ್, ಲಕ್ಷೀಕಾಂತ, ನಜ್ಮತಾಜ್, ಖಾಸಿಂ ಆಲಿ, ರವಿಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.