ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಸದಾ ಬೆಂಬಲ: ಗುರುಭವನ ನಿರ್ಮಾಣಕ್ಕೂ ಸಹಕಾರ ನೀಡುವುದಾಗಿ ಶಾಸಕ ವಿರೇಂದ್ರ ಪಪ್ಪಿ ಭರವಸೆ.
ಚಿತ್ರದುರ್ಗ ಜೂ. 13
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ತಾಲ್ಲೂಕಿನಲ್ಲಿ ಸರ್ಕಾರದ ಶಾಲೆಗಳ ಅಭೀವೃದ್ದಿಗಾಗಿ 44 ಕೋಟಿ ರೂ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಇದು ಅನುಮೋದನೆಗೊಂಡರೆ ತಾಲ್ಲೂಕಿನ ಸರ್ಕಾರಿ ಶಾಲೆಗಳ ರೀಪೇರಿ, ಹೂಸ ಕೊಠಡಿಗಳ ನಿರ್ಮಾಣ, ಕೊಠಡಿಗಳನ್ನು ಮೇಲ್ದರ್ಜೆಗೆ ಏರಿಸುವ ಕಾರ್ಯವನ್ನು ಮಾಡಲಾಗುವುದು ಎಂದು ಶಾಸಕರಾದ ಕೆ.ಸಿ.ವಿರೇಂದ್ರ ಪಪ್ಪಿ ತಿಳಿಸಿದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು, ಚಿತ್ರದುರ್ಗ ತಾಲ್ಲೂಕು ಘಟಕದ ನೂತನ ನಿರ್ದೆಶಕರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವೂ ಶನಿವಾರ ಮಧ್ಯಾಹ್ನ ನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಏರ್ಪಡಿಸಿದ್ದು, ಇದನ್ನು ಉದ್ಘಾಟಿಸಿ ಪದಾಧಿಕಾರಿಗಳು ಪದಗ್ರಹಣವನ್ನು ನೇರವೇರಿಸಿ ಮಾತನಾಡಿದ ಶಾಸಕರು, ಶಿಕ್ಷಕರಾದವರು ಸಮಾಜವನ್ನು ತಿದ್ದುವ ಕಟ್ಟುವ ಕೆಲಸವನ್ನು ಮಾಡುವಂತ ವ್ಯಕ್ತಿಗಳಾಗಿದ್ದಾರೆ. ಶಿಕ್ಷಕರಲ್ಲಿ ವೈಮನಸ್ಸು ಬರಬಾರದು ಚುನಾವಣೆ ನಡೆದರೆ ದ್ವೇಷಕ್ಕೆ ಕಾರಣವಾಗುತ್ತದೆ ಎಂಬ ಉದ್ದೇಶದಿಂದ ಸಂಘದಲ್ಲಿ ಚುನಾವಣೆಯನ್ನು ನೆಡೆಸದೆ ಅವಿರೋಧವಾಗಿ ಆಯ್ಕೆ ಮಾಡುವುದರ ಮೂಲಕ ಎಲ್ಲರು ಒಟ್ಟಾಗಿ ಇರುವಂತ ಕಾರ್ಯವನ್ನು ಮಾಡಲಾಗಿದೆ. ಪ್ರಜಾಪ್ರಭುತ್ವದಲ್ಲಿ ಚುನಾವಣೆ ಅನಿವಾರ್ಯ ಆದರೆ ಕೆಲ ಸಮಯದಲ್ಲಿ ಅವಿರೋಧ ಆಯ್ಕೆಯೂ ಅಗತ್ಯವಾಗುತ್ತದೆ, ರಾಜ್ಯದಲ್ಲಿ ಚಿತ್ರದುರ್ಗ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಚುನಾವಣೆ ನಡೆಯದೇ ಅವಿರೋಧ ಆಯ್ಕೆ ಪ್ರಥಮವಾಗಿದೆ ಎಂದರು.
ಈಗ ಆಯ್ಕೆಯಾಗಿರುವ ಪದಾಧಿಕಾರಿಗಳು ಶಿಕ್ಷಕರು ಸಮಸ್ಯೆಯನ್ನು ಅರಿತು ಅದರ ಪರಿಹಾರದ ಕಡೆಗೆ ಗಮನವನ್ನು ನೀಡಿ ನಾನು ಯಾವೂತ್ತು ಸಹಾ ನಿಮ್ಮ ಜೊತೆಯಲ್ಲಿ ಇದ್ದೇನೆ ನಿಮ್ಮ ಯಾವುದೇ ಸಮಸ್ಯೆ ಬಂದರು ಸಹಾ ಅದರ ಪರಿಹಾರಕ್ಕೆ ಮುಂದೆ ಇರುತ್ತೇನೆ, ಇದೇ ರೀತಿ ಸಂಘವೂ ಸಹಾ ಶಿಕ್ಷಕರ ಸಮಸ್ಯೆ ಪರಿಹಾರದಲ್ಲಿ ಮುಂದೆ ಇರಬೇಕಿದೆ, ಶಿಕ್ಷಕರ ಸಮಸ್ಯೆಯ ಬಗ್ಗೆ ಧ್ವನಿಯನ್ನು ಎತ್ತಬೇಕಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ ಗುರುಭವನ ನಿರ್ಮಾಣ ಮಾಡುವಂತೆ ಬೇಡಿಕೆಯನ್ನು ಇಡಲಾಗಿದೆ ಇದರ ಬಗ್ಗೆ ನನ್ನ ಪೂರ್ಣವಾದ ಸಹಕಾರ ಬೆಂಬಲ ಇದೆ, ನಾನು ಹಾಗೂ ಜಿಲ್ಲೆಯ ಇತರೆ ಚುನಾಯಿತ ಪದಾಧಿಕಾರಿಗಳ ಸಹಕಾರದೊಂದಿಗೆ ಮುಂದಿನ ದಿನದಲ್ಲಿ ನಿರ್ಮಾಣ ಮಾಡಲಾಗುವುದು ಎಂದ ಅವರು ಚಿತ್ರದುರ್ಗ ತಾಲ್ಲೂಕಿನಲ್ಲಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ, ಶೀಥೀಲಗೊಂಡ ಕೊಠಡಿಗಳ ಪುನರ್ ನಿರ್ಮಾಣಕ್ಕೆ ಹಾಗೂ ಮೇಲ್ದಜೆಗೇ ಏರಿಸಲು ಸುಮಾರು 44 ಕೋಟಿ ರೂ,ವೆಚ್ಚದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ, ಇದು ಬಂದಲ್ಲಿ ತಾಲ್ಲೂಕಿನ ಎಲ್ಲಾ ಶಾಲಾ ಕೊಠಡಿಗಳು ಉತ್ತವಾಗಲಿವೆ. ಎಂದು ಶಾಸಕ ವಿರೇಂದ್ರ ಪಪ್ಪಿ ತಿಳಿಸಿದರು.

ಚಿತ್ರದುರ್ಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಧ ಮಾಲತೇಶ ಮುದ್ದಜ್ಜಿ ಮಾತನಾಡಿ, ಪ್ರಾಥಮಿಕ ಶಾಲಾ ಚಿತ್ರದುರ್ಗ ತಾಲ್ಲೂಕು ಶಿಕ್ಷಕರ ಸಂಘಕ್ಕೆ ಚುನಾವಣೆಯನ್ನು ನಡೆಸದೆ ಅವಿರೋಧವಾಗಿ ಆಯ್ಕೆಯನ್ನು ಮಾಡುವಂತೆ ಶಾಸಕರು ನಿರ್ದೆಶನದ ಮೇರೆಗೆ ಸಂಘಕ್ಕೆ ಅವಿರೋಧ ಆಯ್ಕೆಯನ್ನು ಮಾಡಲಾಗಿದೆ, ಈಗ ನೂತನವಾಗಿ ಅಸ್ಥಿತ್ವಕ್ಕೆ ಬಂಧಿರುವ ಸಂಘವೂ ಮುಂದಿನ ದಿನದಲ್ಲಿ ಉತ್ತಮವಾದ ಕೆಲಸವನ್ನು ಮಾಡಲಿ ಶಿಕ್ಷಕರ ಸಮಸ್ಯೆಯನ್ನು ಪರಿಹಾರ ಮಾಡುವ ನಿಟ್ಟನಲ್ಲಿ ಕ್ರಮ ತೆಗೆದುಕೊಳ್ಳಲಿ ಎಂದ ಅವರು ಪ್ರಾಥಮಿಕ ಶಾಲಾ ಶಿಕ್ಷಕರು ತಾವು ಕಲಿಸಿದ ಮಕ್ಕಳು ಉನ್ನತವಾದ ಸ್ಥಾನವನ್ನು ಪಡೆದಾಗ ಅವರಿಗೆ ಆಗುವ ಸಂತೋಷ ಅಷ್ಟಿಷ್ಟಲ್ಲ, ತಂದೆ-ತಾಯಿಯವರಿಗಿಂತಲೂ ಹೆಚ್ಚಾಗಿ ಸಂತೋಷವನ್ನು ಪಡುವವರು ಶಿಕ್ಷಕರಾಗಿದ್ದಾರೆ.
ಚಿತ್ರದುರ್ಗ ತಾಲ್ಲೂಕಿನಲ್ಲಿ 1100 ಪ್ರಾಥಮಿಕ ಶಾಲಾ ಶಿಕ್ಷಕರಿದ್ದರೂ ಸಹಾ ಕಾರ್ಯಕ್ರಮಕ್ಕೆ ಕಡಿಮೆ ಸಂಖ್ಯೆಯಲ್ಲಿ ಬಂದಿರುವುದು ಸರಿಯಲ್ಲ ಇದು ನಿಮ್ಮ ಸಂಘ ನಿಮ್ಮದೇ ಕಾರ್ಯಕ್ರಮ ಸಂಘದಲ್ಲಿ ಏನಾದರೂ ಕಾರ್ಯಕ್ರಮ ನಡೆದರೆ ಎಲ್ಲರು ಭಾಗವಹಿಸುವುದು ಅದ್ಯ ಕರ್ತವ್ಯವಾಗಿದೆ. ಸರ್ಕಾರ ಶಿಕ್ಷಕರುಗಳಿಗೆ ತಮ್ಮ ಕೆಲಸದ ಜೊತೆಗೆ ಇತರೆ ಕೆಲಸವನ್ನು ಸಹಾ ವಹಿಸುತ್ತಿದೆ ಇದರಿಂದ ಶಿಕ್ಷಕರುಗಳಿಗೆ ಭೋಧನೆಯನ್ನು ಮಾಡಲು ಕಷ್ಟವಾಗುತ್ತಿದೆ ಈ ಹಿನ್ನಲೆಯಲ್ಲಿ ಅವರನ್ನು ಅನ್ಯ ಕಾರ್ಯಕ್ರಮಗಳಿಂದ ದೂರ ಇರಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಂಘದ ಹಿಂದಿನ ಪದಾಧಿಕಾರಿಗಳು ನೂತನ ಸಂಘದ ಪಧಾಧಿಕಾರಿಗಳು ಅಧಿಕಾರವನ್ನು ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿದೇಶಕರಾದ ಮಂಜುನಾಥ್, ಮಹಾಂತೇಶ, ಶಿವಕುಮಾರ್, ಮಹೇಶ್ ಮಹಾಂತೇಶ್, ಶ್ರೀನಿವಾಸ್, ರಾಜಪ್ಪ, ರಮೇಶ್, ಕೆಂಚಪ್ಪ, ವಿಮಲಾಕ್ಷಮ್ಮ, ಶಿವಣ್ಣ, ಚಿದಾನಂದಪ್ಪ, ಸೇರಿದಂತೆ ಇತರರು ಭಾಗವಹಿಸಿದ್ದರು.
ಗಂಗಾಧರ ತಂಡ ಪ್ರಾರ್ಥಿಸಿದರೆ, ಲತಾ ಸ್ವಾಗತಿಸಿದರು, ಗುರುನಾಥ್ ಪ್ರಸ್ತಾವಿಕವಾಗಿ ಮಾತನಾಡಿದರು, ಬಸವರಾಜು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Follow the ಸಮಗ್ರ ಸುದ್ದಿ Telegram Channel: https://t.me/SamagraSuddi
ಸಮಗ್ರ ಸುದ್ದಿ channel on WhatsApp: