ನೋಯ್ಡಾದ ಜೇವರ್‌ನಲ್ಲಿ ನಿರ್ಮಾಣವಾಗುತ್ತಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ವಿಮಾನ ನಿಲ್ದಾಣದ ಕಾರ್ಯಾಚರಣೆ ಶೀಘ್ರದಲ್ಲೇ ಆರಂಭವಾಗಲಿರುವ ಹಿನ್ನೆಲೆಯಲ್ಲಿ, ಒಟ್ಟು 2442 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಈ ನೇಮಕಾತಿಯಲ್ಲಿ ಗ್ರೌಂಡ್ ಸ್ಟಾಫ್, ಕಾರ್ಗೋ ಎಕ್ಸಿಕ್ಯೂಟಿವ್ ಮತ್ತು ಲೋಡರ್ ಹುದ್ದೆಗಳಿದ್ದು, ವಿಶೇಷವೆಂದರೆ ಯಾವುದೇ ಏವಿಯೇಷನ್ ಡಿಪ್ಲೊಮಾ ಅಥವಾ ವಿಶೇಷ ತರಬೇತಿಯ ಅಗತ್ಯವಿಲ್ಲದೆ ನೇರವಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ ಮತ್ತು ಅರ್ಹತೆ:
- ಗ್ರೌಂಡ್ ಸ್ಟಾಫ್ ಮತ್ತು ಕಾರ್ಗೋ ಎಕ್ಸಿಕ್ಯೂಟಿವ್:
- ವಿದ್ಯಾರ್ಹತೆ: 12ನೇ ತರಗತಿ (ಪಿಯುಸಿ) ಪಾಸ್.
- ವಯೋಮಿತಿ: 18 ರಿಂದ 30 ವರ್ಷದೊಳಗಿನ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ.
- ವೇತನ: 25,000 ದಿಂದ 35,000 ರೂ.
- ಲೋಡರ್ ಹುದ್ದೆ:
- ವಿದ್ಯಾರ್ಹತೆ: 10ನೇ ತರಗತಿ ಪಾಸ್.
- ವಯೋಮಿತಿ: 20 ರಿಂದ 40 ವರ್ಷದೊಳಗಿನ ಪುರುಷರಿಗೆ ಮಾತ್ರ ಅವಕಾಶ.
- ವೇತನ: 15,000 ದಿಂದ 25,000 ರೂ.
ಆಸಕ್ತ ಅಭ್ಯರ್ಥಿಗಳು ಜೂನ್ 15, 2026 ರೊಳಗೆ ಅಧಿಕೃತ ವೆಬ್‌ಸೈಟ್ www.niasjewar.com ಮೂಲಕ ತಮ್ಮ ಇಮೇಲ್ ಮತ್ತು ಮೊಬೈಲ್ ಸಂಖ್ಯೆಯನ್ನು ಬಳಸಿ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. ಅರ್ಜಿಯ ಜೊತೆಗೆ ಅಗತ್ಯ ಭಾವಚಿತ್ರ ಮತ್ತು ಸಹಿಯನ್ನು ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿದೆ. ವಿಮಾನಯಾನ ಕ್ಷೇತ್ರದಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಲು ಬಯಸುವ ಹೊಸಬರಿಗೆ (Freshers) ಇದೊಂದು ಅತ್ಯುತ್ತಮ ವೇದಿಕೆಯಾಗಿದ್ದು, ಕೊನೆಯ ದಿನಾಂಕದ ಮುಂಚಿತವಾಗಿ ಅರ್ಜಿ ಸಲ್ಲಿಸಿ ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಸೂಚಿಸಲಾಗಿದೆ.
ಮತ್ತಷ್ಟು ಉದ್ಯೋಗ ಮತ್ತು ಶೈಕ್ಷಣಿಕ ಮಾಹಿತಿಗಾಗಿ ಓದುತ್ತಿರಿ samagrasuddi.co.in



