ನವೆಂಬರ್ 03, 2026ರ Horoscope Today: ಮಂಗಳವಾರ ಮೇಷದಿಂದ ಮೀನದವರೆಗೆ 12 ರಾಶಿಗಳ ಫಲಾಫಲಗಳು

ನ 03: ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಶರತ್ ಋತುವಿನ ಆಶ್ವಯುಜ ಮಾಸದ ಕೃಷ್ಣ ಪಕ್ಷದ ಅಷ್ಟಮೀ ತಿಥಿಯ ಈ ಮಂಗಳವಾರದಂದು ಗ್ರಹಗಳ ಚಲನೆಯು ಎಲ್ಲಾ ರಾಶಿಗಳ ಮೇಲೂ ವಿಶಿಷ್ಟವಾದ ಪರಿಣಾಮ ಬೀರುತ್ತಿದೆ. ನವೆಂಬರ್ 03, 2026ರ ಇಂದಿನ ನಿತ್ಯ ಭವಿಷ್ಯದ ಮೂಲಕ ನಿಮ್ಮ ರಾಶಿಗನುಗುಣವಾಗಿ ಹಣಕಾಸು, ಆರೋಗ್ಯ, ವೃತ್ತಿಜೀವನ ಮತ್ತು ಸಂಬಂಧಗಳ ಸಂಪೂರ್ಣ ವಿವರಗಳನ್ನು ಇಲ್ಲಿ ತಿಳಿಯಿರಿ.

ಮೇಷ ರಾಶಿ

ಇಂದು ನಿಮ್ಮ ಅಮೂಲ್ಯ ಸಮಯವನ್ನು ಸ್ನೇಹಿತರ ಕೆಲಸಕ್ಕಾಗಿ ವಿನಿಯೋಗಿಸುವಿರಿ, ಆದರೆ ಅಂದುಕೊಂಡ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳುವುದಿಲ್ಲ. ಎಲ್ಲರೊಂದಿಗೆ ಒಮ್ಮನಸ್ಸಿನಿಂದ ಇರುವುದು ಉತ್ತಮ. ಆರ್ಥಿಕವಾಗಿ ನೀವು ಸಬಲರಾಗುವಿರಿ ಮತ್ತು ನಿರುದ್ಯೋಗಿ ಮಿತ್ರರಿಗೆ ನಿಮ್ಮ ಸಹಾಯ ಹಸ್ತ ಸಿಗಲಿದೆ. ಹೊಸ ವಿಚಾರಗಳತ್ತ ನಿಮ್ಮ ಚಿಂತನೆ ಹರಿಯಲಿದೆ. ಉದ್ಯೋಗದ ನಿಮಿತ್ತ ಮನೆಯಿಂದ ದೂರವಿರಬೇಕಾದ ಪರಿಸ್ಥಿತಿ ಎದುರಾಗಬಹುದು.

  • ಅದೃಷ್ಟದ ಬಣ್ಣ: ಕೆಂಪು
  • ಅದೃಷ್ಟದ ಸಂಖ್ಯೆ: 9
  • ರಾಹುಕಾಲ: ಮಧ್ಯಾಹ್ನ 02:57 ರಿಂದ ಸಂಜೆ 04:24 ರವರೆಗೆ

ವೃಷಭ ರಾಶಿ

ಇಂದು ನಿಮ್ಮ ಮಾತುಗಳ ಮೇಲೆ ಇತರರಿBದ ನಂಬಿಕೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು. ಕೃಷಿ ಕ್ಷೇತ್ರದಲ್ಲಿ ಲಾಭ ಪಡೆಯಲು ಅನುಭವಿಗಳ ಸಲಹೆ ಪಡೆಯುವುದು ಅಗತ್ಯ. ವಿದ್ಯಾರ್ಥಿಗಳಲ್ಲಿ ಓದಿನ ವಿಚಾರವಾಗಿ ಗೊಂದಲವಿರಬಹುದು. ಪುಣ್ಯಕ್ಷೇತ್ರಗಳ ದರ್ಶನವಾಗುವ ಯೋಗವಿದೆ. ದಾಂಪತ್ಯ ಜೀವನದಲ್ಲಿ ಸಾಮರಸ್ಯ ಕಾಪಾಡಿಕೊಳ್ಳಿ. ಮಕ್ಕಳಿಂದ ಸ್ವಲ್ಪ ದೂರವಿರಲು ಬಯಸುವಿರಿ. ವೈಯಕ್ತಿಕ ಕೆಲಸಗಳಲ್ಲಿ ಅಡೆತಡೆಗಳು ಉಂಟಾಗಬಹುದು.

  • ಅದೃಷ್ಟದ ಬಣ್ಣ: ಬಿಳಿ
  • ಅದೃಷ್ಟದ ಸಂಖ್ಯೆ: 6
  • ರಾಹುಕಾಲ: ಮಧ್ಯಾಹ್ನ 02:57 ರಿಂದ ಸಂಜೆ 04:24 ರವರೆಗೆ

ಮಿಥುನ ರಾಶಿ

ವಿದ್ಯಾರ್ಥಿಗಳು ಮಾನಸಿಕ ಭಯವನ್ನು ದೂರ ಮಾಡಿಕೊಂಡರೆ ಉತ್ತಮ ಮುನ್ನಡೆ ಸಾಧಿಸಬಹುದು. ಸಾಲಬಾಧೆಯಿಂದ ಮುಕ್ತಿಗೊಂಡು ಮನಸ್ಸು ನಿರಾಳವಾಗಲಿದೆ. ನಿಮ್ಮ ಯಶಸ್ಸಿಗೆ ಅಡ್ಡಿಪಡಿಸುವವರ ಬಗ್ಗೆ ಎಚ್ಚರವಿರಲಿ. ಹೊಸ ಉದ್ಯೋಗಾವಕಾಶಗಳತ್ತ ನಿಮ್ಮ ಮನಸ್ಸು ಒಲವು ತೋರಲಿದೆ. ಮಕ್ಕಳ ಬಯಕೆಗಳನ್ನು ಈಡೇರಿಸುವಿರಿ. ಸನ್ನಿವೇಶಕ್ಕೆ ತಕ್ಕಂತೆ ಮಾತನಾಡುವುದು ಒಳಿತು. ಅನಿವಾರ್ಯ ಕಾರಣಗಳಿಂದ ಮನೆಗೆ ತೆರಳಲು ವಿಳಂಬವಾಗಬಹುದು.

  • ಅದೃಷ್ಟದ ಬಣ್ಣ: ಹಸಿರು
  • ಅದೃಷ್ಟದ ಸಂಖ್ಯೆ: 5
  • ರಾಹುಕಾಲ: ಮಧ್ಯಾಹ್ನ 02:57 ರಿಂದ ಸಂಜೆ 04:24 ರವರೆಗೆ

ಕರ್ಕಾಟಕ ರಾಶಿ

ನಿಮಗೆ ಬರಬೇಕಾದ ಹಣ ಕೈ ಸೇರುವುದು ಕಷ್ಟವಾಗಬಹುದು. ಧಾರ್ಮಿಕ ಕಾರ್ಯಕ್ರಮಗಳು ಮತ್ತು ಸಂಭ್ರಮಗಳಲ್ಲಿ ಪಾಲ್ಗೊಳ್ಳುವಿರಿ. ಇ Aರ ಮಾತಿನಿಂದ ಮನಸ್ಸಿಗೆ ಬೇಸರವಾಗಬಹುದು. ಆಪ್ತರನ್ನು ಮನೆಗೆ ಬರಮಾಡಿಕೊಂಡು ಸತ್ಕರಿಸುವಿರಿ. ನಕಾರಾತ್ಮಕ ಆಲೋಚನೆಗಳು ನಿಮ್ಮನ್ನು ದುರ್ಬಲಗೊಳಿಸದಂತೆ ನೋಡಿಕೊಳ್ಳಿ. ಮುಂಚಿತವಾಗಿ ನಿಗದಿಯಾಗಿದ್ದ ವಿವಾಹ ಕಾರ್ಯಗಳು ಕಾರಣಾಂತರಗಳಿಂದ ಮುಂದಕ್ಕೆ ಹೋಗಬಹುದು.

  • ಅದೃಷ್ಟದ ಬಣ್ಣ: ಹಾಲಿನಂತಹ ಬಿಳಿ
  • ಅದೃಷ್ಟದ ಸಂಖ್ಯೆ: 2
  • ರಾಹುಕಾಲ: ಮಧ್ಯಾಹ್ನ 02:57 ರಿಂದ ಸಂಜೆ 04:24 ರವರೆಗೆ

ಸಿಂಹ ರಾಶಿ

ನಿಮ್ಮ ಕಾರ್ಯಗಳು ವಿಳಂಬವಾಗಿ ಪೂರ್ಣಗೊಳ್ಳಲಿದ್ದು, ಇ Aರ ಬಳಿ ಟೀಕೆಗೆ ಗುರಿಯಾಗಬೇಕಾದೀತು. ಸ್ತ್ರೀಯರು ಸೌಂದರ್ಯ ಹಾಗೂ ಅಲಂಕಾರಕ್ಕಾಗಿ ಹೆಚ್ಚು ಸಮಯ ಕಳೆಯುವರು. ಪಾಲುದಾರಿಕೆ ವ್ಯವಹಾರದಲ್ಲಿ ಅನುಮಾನದ ವಾತಾವರಣ ಮೂಡಬಹುದು. ಯಂತ್ರೋಪಕರಣಗಳ ವ್ಯಾಪಾರಸ್ಥರಿಗೆ ಉತ್ತಮ ಲಾಭ ಸಿಗಲಿದೆ. ಸ್ವಂತ ವಾಹನ ಖರೀದಿ ಮಾಡುವ ಯೋಗವಿದೆ. ಅನಾರೋಗ್ಯದ ಕುರಿತು ಸೂಕ್ತ ವೈದ್ಯಕೀಯ ಸಲಹೆ ಪಡೆಯುವುದು ಉತ್ತಮ.

  • ಅದೃಷ್ಟದ ಬಣ್ಣ: ಚಿನ್ನದ ಬಣ್ಣ
  • ಅದೃಷ್ಟದ ಸಂಖ್ಯೆ: 1
  • ರಾಹುಕಾಲ: ಮಧ್ಯಾಹ್ನ 02:57 ರಿಂದ ಸಂಜೆ 04:24 ರವರೆಗೆ

ಕನ್ಯಾ ರಾಶಿ

ವಿದ್ಯಾರ್ಥಿಗಳಲ್ಲಿ ಉನ್ನತ ವಿದ್ಯಾಭ್ಯಾಸದ ಆಸಕ್ತಿ ಹೆಚ್ಚಾಗಲಿದೆ. ಸಂಗಾತಿಯ ಸಂಪತ್ತು ಅಥವಾ ಉಳಿತಾಯದ ಹಣವನ್ನು ಇಂದು ಖರ್ಚು ಮಾಡುವ ಸಂದರ್ಭ ಬರಬಹುದು. ಮನಸ್ಸು ಯಾವುದೋ ಗಂಭೀರ ಆಲೋಚನೆಯಲ್ಲಿ ಮುಳುಗಿರುವುದು. ಸಂಬಂಧಗಳಲ್ಲಿ ಅಭದ್ರತೆಯ ಭಾವ ಕಾಡಬಹುದು. ನಿಮ್ಮ ವೃತ್ತಿಜೀವನದ ಯಶಸ್ಸನ್ನು ಕಂಡು ಕೆಲವರು ಅಸೂಯೆಪಡಬಹುದು. ಸಂಗಾತಿಯ ಮೇಲಿನ ಪ್ರೀತಿ ಹೆಚ್ಚಾಗಲಿದೆ. ನಿಮ್ಮ ಅಸಹಾಯಕತೆಯನ್ನು ಎಲ್ಲರ ಬಳಿ ಹೇಳಿಕೊಳ್ಳಬೇಡಿ.

  • ಅದೃಷ್ಟದ ಬಣ್ಣ: ಎಮರಾಲ್ಡ್ ಹಸಿರು
  • ಅದೃಷ್ಟದ ಸಂಖ್ಯೆ: 5
  • ರಾಹುಕಾಲ: ಮಧ್ಯಾಹ್ನ 02:57 ರಿಂದ ಸಂಜೆ 04:24 ರವರೆಗೆ

ತುಲಾ ರಾಶಿ

ನೀವು ಉಪಕಾರ ಮಾಡಿದವರೇ ನಿಮಗೆ ಮೋಸ ಮಾಡುವ ಸಾಧ್ಯತೆಯಿದೆ. ಕೆಲವು ಅನಿರೀಕ್ಷಿತ ಘಟನೆಗಳು ಮನಸ್ಸನ್ನು ವಿಚಲಿಗೊಳಿಸಬಹುದು. ಸ್ಪರ್ಧಾತ್ಮಕ ಕ್ಷೇತ್ರಗಳಲ್ಲಿ ಜಯ ಸಿಗುವುದು ಕಷ್ಟವಾಗಬಹುದು. ಮಾತಿನಲ್ಲಿ ಎಚ್ಚರಿಕೆ ವರಿಸಿ, ಇಲ್ಲವಾದರೆ ಸಮಸ್ಯೆ ಎದುರಿಸಬೇಕಾಗುತ್ತದೆ. ಪಾರದರ್ಶಕ ವ್ಯವಹಾರವು ನಿಮ್ಮ ಮೇಲಿನ ಅನುಮಾನವನ್ನು ದೂರ ಮಾಡುತ್ತದೆ. ನಿಮ್ಮದಲ್ಲದ ತಪ್ಪನ್ನು ಒಪ್ಪಿಕೊಂಡು ದೊಡ್ಡ ಗಲಾಕೆಗಳನ್ನು ನಿಲ್ಲಿಸುವ ಸಂಯಮ ತೋರುವಿರಿ.

  • ಅದೃಷ್ಟದ ಬಣ್ಣ: ತಿಳಿ ನೀಲಿ
  • ಅದೃಷ್ಟದ ಸಂಖ್ಯೆ: 6
  • ರಾಹುಕಾಲ: ಮಧ್ಯಾಹ್ನ 02:57 ರಿಂದ ಸಂಜೆ 04:24 ರವರೆಗೆ

ವೃಶ್ಚಿಕ ರಾಶಿ

ಅತಿಯಾದ ಅಹಂಕಾರದಿಂದ ನಿಮ್ಮ ಆಪ್ತ ಮಿತ್ರರು ದೂರವಾಗಬಹುದು. ಸುಮ್ಮನೆ ಕುಳಿತು ನಾನಾ ರೀತಿಯ ಆಲೋಚನೆಗಳನ್ನು ಮಾಡುವುದರಿಂದ ಪ್ರಯೋಜನವಿಲ್ಲ. ರಾಜಕೀಯ ಅಥವಾ ಆಡಳಿತಾತ್ಮಕ ಭೀತಿ ಎದುರಾಗಬಹುದು. ಬಂಧುಗಳಿಂದ ಉಡುಗೊರೆಗಳು ಸಿಗುವ ಸಾಧ್ಯತೆಯಿದೆ. ಸಭೆ-ಸಮಾರಂಭಗಳಲ್ಲಿ ಭಾಗವಹಿಸುವಿರಿ. ಸ್ನೇಹಿತರಿಗೆ ಸಮಯಕ್ಕೆ ಸರಿಯಾಗಿ ನೆರವಾಗುವಿರಿ. ವ್ಯವಹಾರದಲ್ಲಿ ಮಾನಸಿಕ ನೆಮ್ಮದಿ ಬಹಳ ಮುಖ್ಯ.

  • ಅದೃಷ್ಟದ ಬಣ್ಣ: ಮರೂನ್
  • ಅದೃಷ್ಟದ ಸಂಖ್ಯೆ: 9
  • ರಾಹುಕಾಲ: ಮಧ್ಯಾಹ್ನ 02:57 ರಿಂದ ಸಂಜೆ 04:24 ರವರೆಗೆ

ಧನು ರಾಶಿ

ಹಣಕಾಸಿನ ವಿಚಾರವಾಗಿ ಸ್ನೇಹಿತರೊಂದಿಗೆ ಮನಸ್ತಾಪ ಅಥವಾ ಕಲಹ ಉಂಟಾಗಬಹುದು. ಸಂಗಾತಿಯಿಂದ ಒತ್ತಾಯಪೂರ್ವಕವಾಗಿ ಉಡುಗೊರೆ ಪಡೆಯುವ ಪರಿಸ್ಥಿತಿ ಬರಬಹುದು. ಮಹಿಳೆಯರಿಗೆ ಇಂದಿನ ದಿನವು ಸಂತೋಷದಿಂದ ಕೂಡಿರುತ್ತದೆ. ಒಂದು ಕೆಲಸ ಮುಗಿಯುತ್ತಿದ್ದಂತೆ ಮತ್ತೊಂದು ಜವಾಬ್ದಾರಿ ಎದುರಾಗಲಿದೆ. ನೆರೆಹೊರೆಯವರೊಂದಿಗೆ ಸಣ್ಣಪುಟ್ಟ ಕಲಹಗಳು ಸಂಭವಿಸಬಹುದು. ನೂತನ ವಸ್ತ್ರಗಳನ್ನು ಖರೀದಿಸುವಿರಿ. ಕಷ್ಟದಲ್ಲಿ ನೆರವಾದವರೇ ನಿಮಗೆ ನಿಜವಾದ ಆಪ್ತರಾಗುತ್ತಾರೆ.

  • ಅದೃಷ್ಟದ ಬಣ್ಣ: ಹಳದಿ
  • ಅದೃಷ್ಟದ ಸಂಖ್ಯೆ: 3
  • ರಾಹುಕಾಲ: ಮಧ್ಯಾಹ್ನ 02:57 ರಿಂದ ಸಂಜೆ 04:24 ರವರೆಗೆ

ಮಕರ ರಾಶಿ

ಹಳೆಯ ಜವಾಬ್ದಾರಿಗಳನ್ನು ಮತ್ತೊಮ್ಮೆ ನಿಭಾಯಿಸಬೇಕಾದ ಸಂದರ್ಭ ಬರಲಿದೆ. ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಫಲಿತಾಂಶ ಸಿಗಲಿದೆ. ಆಕಸ್ಮಿಕ ಧನಲಾಭವು ನಿಮ್ಮ ಮನಸ್ಸಿಗೆ ಅಪಾರ ಸಂತೋಷ ತAದುಕೊಡುತ್ತದೆ. ಆರ್ಥಿಕತೆಯನ್ನು ನಿಭಾಯಿಸುವ ಜಾಣ್ಮೆ ಇರಲಿ. ಅನ್ಯ ಆಲೋಚನೆಗಳಿಂದ ರಾತ್ರಿ ನಿದ್ರೆಗೆ ಭಂಗವಾಗಬಹುದು. ಧಾರ್ಮಿಕ ಆಚರಣೆಗಳಲ್ಲಿ ಮನಸ್ಸು ತೊಡಗುವುದು. ನಿಮ್ಮ ವೈಯಕ್ತಿಕ ವಿಷಯಗಳನ್ನು ಎಲ್ಲರ ಬಳಿ ಹಂಚಿಕೊಳ್ಳಬೇಡಿ.

  • ಅದೃಷ್ಟದ ಬಣ್ಣ: ನೀಲಿ
  • ಅದೃಷ್ಟದ ಸಂಖ್ಯೆ: 8
  • ರಾಹುಕಾಲ: ಮಧ್ಯಾಹ್ನ 02:57 ರಿಂದ ಸಂಜೆ 04:24 ರವರೆಗೆ

ಕುಂಭ ರಾಶಿ

ಇತರರಿಗೆ ಬೋಧಿಸುವ ವಿಷಯಗಳನ್ನು ನೀವೇ ಖುದ್ದಾಗಿ ಆಚರಿಸಬೇಕಾದ ಸ್ಥಿತಿ ಎದುರಾಗಬಹುದು. ನಿಮ್ಮ ಸಲಹೆಯನ್ನು ಗಣನೆಗೆ ತೆಗೆದುಕೊಳ್ಳದಿರುವುದು ನಿಮಗೆ ಬೇಸರ ತರಿಸಬಹುದು. ಉದ್ಯೋಗ ಕ್ಷೇತ್ರದಲ್ಲಿ ಮೇಲಾಧಿಕಾರಿಗಳು ನಿಮ್ಮ ಮೇಲೆ ಮುನಿಸಿಕೊಳ್ಳುವ ಸಾಧ್ಯತೆಯಿದೆ. ವ್ಯಾಪಾರ ವೃದ್ಧಿಗೆ ಹೊಸ ವ್ಯವಸ್ಥೆಗಳನ್ನು ಮಾಡಿಕೊಳ್ಳುವಿರಿ. ಮನೆಯ ಕೆಲಸಗಳು ಅರ್ಧಕ್ಕೆ ನಿಲ್ಲಬಹುದು. ಸಾಲದ ಹೊರೆ ನಿಮ್ಮ ದೊಡ್ಡ ಶತ್ರುವಾಗಬಹುದು. ಪ್ರಭಾವಿ ವ್ಯಕ್ತಿಗಳ ಒಡನಾಟ ಸಿಗಲಿದೆ.

  • ಅದೃಷ್ಟದ ಬಣ್ಣ: ಕಪ್ಪು ಅಥವಾ ನೇರಳೆ
  • ಅದೃಷ್ಟದ ಸಂಖ್ಯೆ: 4
  • ರಾಹುಕಾಲ: ಮಧ್ಯಾಹ್ನ 02:57 ರಿಂದ ಸಂಜೆ 04:24 ರವರೆಗೆ

ಮೀನ ರಾಶಿ

ಎಲ್ಲ ರೀತಿಯ ಒತ್ತಡಗಳನ್ನು ಮರೆತು ಇಂದು ನಿಶ್ಚಿಂತೆಯಿಂದ ದಿನ ಕಳೆಯುವಿರಿ. ನೌಕರ ವರ್ಗದಿಂದ ಕೆಲವು ಸಣ್ಣಪುಟ್ಟ ತೊಂದರೆಗಳು ಎದುರಾಗಬಹುದು. ಅಧಿಕಾರಿಗಳಿಂದ ಬರಬಹುದಾದ ಸಮಸ್ಯೆಗಳನ್ನು ಮೊದಲೇ ಗ್ರಹಿಸಿ ಮುನ್ನೆಚ್ಚರಿಕೆ ವಹಿಸುವಿರಿ. ಸಿಕ್ಕ ಅಧಿಕಾರವನ್ನು ಸರಿಯಾಗಿ ಬಳಸಿಕೊಳ್ಳಲು ಚಿಂತನೆ ನಡೆಸುವಿರಿ. ನಿಮ್ಮ ದೀರ್ಘಕಾಲದ ಚಿಂತೆಗಳು ದೂರವಾಗಲಿವೆ. ಹೊಸ ಭೂಮಿ ಅಥವಾ ಆಸ್ತಿ ಖರೀದಿಸುವ ಯೋಚನೆ ಕಾರ್ಯರೂಪಕ್ಕೆ ಬರಬಹುದು.

  • ಅದೃಷ್ಟದ ಬಣ್ಣ: ಹಳದಿ ಅಥವಾ ಸೀ ಹ್ರೀನ್
  • ಅದೃಷ್ಟದ ಸಂಖ್ಯೆ: 3
  • ರಾಹುಕಾಲ: ಮಧ್ಯಾಹ್ನ 02:57 ರಿಂದ ಸಂಜೆ 04:24 ರವರೆಗೆ

ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.

🟢 WhatsApp Group

Join WhatsApp Group

🔵 Facebook Page

Follow Facebook Page

⚫ Twitter / X

Follow on X (Twitter)

🟣 Threads

Follow on Threads

🟠 Instagram

Follow on Instagram

🔵 Telegram

Join Telegram Channel

🟢 WhatsApp Channel

Follow WhatsApp Channel

📰 ಸಮಗ್ರ ಸುದ್ದಿ

ನಿಖರತೆಗೆ ಮತ್ತೊಂದು ಹೆಸರು

📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು

Leave a Reply

Your email address will not be published. Required fields are marked *