ಶಿವದಾಸಿಮಯ್ಯನವರ ತಾತ್ವಿಕತೆ ಅಳವಡಿಸಿಕೊಂಡರೆ ಸಮಾಜ ಪ್ರಬುದ್ಧವಾಗುತ್ತದೆ: ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ.

ಚಿತ್ರದುರ್ಗ ಆ. 09

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಕುಲಗುರು ಶಿವದಾಸಿಮಯ್ಯನವರ ತಾತ್ವಿಕತೆ, ಚಿಂತನೆಗಳನ್ನು ಪ್ರತಿಯೊಬ್ಬರು ನಮ್ಮ ಜೀವನದಲ್ಲಿ ಅಳವಡಿಸಿ ಕೊಂಡರೆ ಸಮಾಜ ಮತ್ತಷ್ಟು ಪ್ರಬುದ್ಧವಾಗಿ ಬೆಳೆಯುತ್ತದೆ ಎಂದು ಶಿವಮೊಗ್ಗದ ಬೆಕ್ಕಿನ ಕಲ್ಮಠದ ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ತಿಳಿಸಿದರು.

ಜಿಲ್ಲಾ ಲಿಂಗಾಯತ ಶಿವಶಿಂಪಿ ಸಮಾಜದವತಿಯಿಂದ ಭಾನುವಾರ ಮದಕರಿ ವೃತ್ತದಲ್ಲಿನ ಮಹರ್ಷಿ ವಾಲ್ಮೀಕಿ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕುಲಗುರು ಶ್ರೀ ಶಿವದಾಶಿಮಯ್ಯ ಜಯಂತಿ, ರಜತ ಮಹೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀಗಳು, ಶಿವದಾಸಿಮಯ್ಯನವರ ಕುರಿತು ಇನ್ನಷ್ಟು ಸಂಶೋಧನೆಗಳು ನಡೆಯಬೇಕಿದೆ. ಔದಾರ್ಯ ಮತ್ತು ಆದರ್ಶ ಕಟ್ಟಿಕೊಂಡಿದ್ದ ದಾರ್ಶನಿಕ ಶಿವದಾಸಿಮಯ್ಯನವರು ಒಂದು ವೇದಿಕೆಗೆ ಸೀಮಿತ ಆಗಬಾರದು, ಯಾರು ಆದರ್ಶಗಳನ್ನು ಕಟ್ಟಿಕೊಂಡಿ ರುತ್ತಾರೋ ಅವರ ಪೃಥ್ವಿ ಇರುವವರೆಗೂ ಇರುತ್ತಾರೆ. ನಮ್ಮೊಳಗೂ ಮತ್ತು ನಮ್ಮ ಹೊರಗು ಶಿವದಾಸಿಮಯ್ಯ ನವರ ತಾತ್ವಿಕತೆಗಳು ಇರಬೇಕು. ಅವರ ಚಿಂತನೆ ಅಳವಡಿಸಿಕೊಂಡರೆ ಸಮಾಜ ಮತ್ತಷ್ಟು ಪ್ರಬುದ್ಧವಾಗಿ ಬೆಳೆಯುತ್ತದೆ. ಶಿಕ್ಷಣ, ಸೌಲಭ್ಯಗಳಿಂದ ವಂಚಿತಗೊಂಡು ತೊಂದರೆ ಗೀಡಾಗಿರುವ ಶಿವಸಿಂಪಿ ಸಮಾಜ ಸಂಘಟಿತ ಗೊಂಡು ಗುರುವಿನ ಮಾರ್ಗದರ್ಶನದಲ್ಲಿ ಗುರಿಯತ್ತ ಮುನ್ನುಗ್ಗಬೇಕು ಎಂದರು.

ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದ ಯೋಗವನ ಬೆಟ್ಟದ ಅಧ್ಯಕ್ಷರು, ಶ್ರೀ ಬೃಹನ್ಮಠ ಮತ್ತು ಎಸ್.ಜೆ.ಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಮಹಾಸ್ವಾಮಿಗಳು ಶಿವಸಿಂಪಿ ಸಮಾಜ ಇತರೆ ಸಮಾಜಕ್ಕಿಂತ ಚಿಕ್ಕ ಸಮಾಜವಾದರೂ, ಚೊಕ್ಕ ಮತ್ತು ಸುಂದರ ಸಮಾಜ, ಶಿವಸಿಂಪಿ ಸಮಾಜ, ಕೊಡುಗೆ ನೀಡುವ ಸಮಾಜವೇ ಹೊರತು, ಬೇಡುವ ಸಮಾಜವಲ್ಲ, ಸಂಸ್ಕೃತಿ, ಆಚಾರ, ವಿಚಾರ, ಶಿಸ್ತುಬದ್ಧ ಜೀವನವನ್ನು ನಡೆಸುವ ಶಿವಸಿಂಪಿ ಸಮಾಜದವರು ಶಿವದಾಸಿಮಯ್ಯ ನವರ ತತ್ವಾದರ್ಶನಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಿವಸಿಂಪಿ ಸಮಾಜವು ಸಾಮಾಜಿಕ ಸಂಘಟನೆ ಜತೆಗೆ ಪರಿವರ್ತನೆ ಆಗಬೇಕು ಶಿವಸಿಂಪಿ ಸಮಾಜದವರು ಸಮಯ ಪ್ರಜ್ಞೆಗೆ ಮಹತ್ವ ಕೊಡಬೇಕು. ಸಮಾಜದಿಂದ ಸಂಘಟಿಸುವ ಯಾವುದೇ ಶಿವಸಿಂಪಿ ಸಮಾಜ ಕ್ಷೇಮಾಭಿವೃದ್ಧಿ ಕಾರ್ಯಕ್ರಮಗಳಿದ್ದರೂ ಪ್ರತಿಕಾರ್ಯಕ್ರಮಕ್ಕೆ ತಾವು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು, ಸಮಾಜದಿಂದ ಹಮ್ಮಿಕೊಳ್ಳವು ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಪ್ರತಿಯೊಬ್ಬರು ಕೈಜೋಡಿಸಬೇಕು ಆಗಲೇ ಸಮಾಜದ ಅಭಿವೃದ್ಧಿ ಯಾಗಲು ಸಾಧ್ಯವೆಂದರು.

ಸಮ್ಮುಖವನ್ನುವಹಿಸಿದ್ದ ತುಮಕೂರು ಜಿಲ್ಲೆಯ ತಂಗನಹಳ್ಳಿಯ ಶ್ರೀ ಅನ್ನಪೂರ್ಣೇಶ್ವರಿ ಸುಕ್ಷೇತ್ರದ ಬಸವ ಮಹಾಲಿಂಗಸ್ವಾಮಿಗಳು ತಮ್ಮ ಆರ್ಶೀವಚನದಲ್ಲಿ ‘ಶಿವಸಿಂಪಿ ಸಮಾಜ ಸಾಮಾಜಿಕ ಸಂಘಟನೆ ಜತೆಗೆ ಸೈದ್ಧಾಂತಿಕ ಮಳೆಯಿಂದ ಪರಿವರ್ತನೆ ಆಗಬೇಕು. ಸಮಾಜ ಬಾಂಧವರ ಮನಸ್ಸು, ಮನಸ್ಸುಗಳ ಬೆಸೆಯುವ ಕೆಲಸ ನಡೆಯಬೇಕು. ಕುಲ ಕುಲಗುರು ಶಿವದಾಸಿಮಯ್ಯನವರ ತಾತ್ವಿಕತೆ, ಚಿಂತನೆಗಳನ್ನು ಪ್ರತಿಯೊಬ್ಬರು ಗಳಿಗೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜ ಮತ್ತಷ್ಟು ಪ್ರಬುದ್ಧವಾಗಿ ಬೆಳೆಯುತ್ತದೆ’ ಶಿವದಾಸಿಮಯ್ಯನವರ ಕುರಿತು ಇನ್ನಷ್ಟು ಸಂಶೋಧನೆ ನಡೆಯಬೇಕು, ಔದಾರ್ಯ ಮತ್ತು ಆದರ್ಶ ಕಟ್ಟಿಕೊಂಡಿದ್ದದಾರ್ಶನಿಕ ಶಿವದಾಸಿಮಯ್ಯನವರು ವೇದಿಕೆಗೆ ಸೀಮಿತ ಆಗಬಾರದು.

ಸಮಾರಂಭದ ಅಧ್ಯಕ್ಷತೆಯನ್ನು ಚಿತ್ರದುರ್ಗ ಜಿಲ್ಲಾ ಲಿಂಗಾಯತ ಶಿವಶಿಂಪಿ ಸಮಾಜದ ಅಧ್ಯಕ್ಷರಾದ ಪಿ.ಎಸ್. ಶಂಭುಲಿಂಗಪ್ಪ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್. ನವೀನ್, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ,ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಮಲ್ಲಿಕಾರ್ಜನ ಮಾಜಿ ಶಾಸಕರುಗಳಾದ ಎಸ್.ಕೆ. ಬಸವರಾಜನ್, ಜಿಲ್ಲಾ ಲಿಂ.ಶಿ.ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಇಂದಿರಾ ಜಯದೇವಮೂರ್ತಿ. ಕಲ್ಬುರ್ಗಿಯ ಕಲ್ಯಾಣ ಕರ್ನಾಟಕ ಶಿವಶಿಂಪಿ ಸಮಾಜದ ಅಧ್ಯಕ್ಷರಾದ ವಿಜಯಕುಮಾರ್ ಹಳಕಟ್ಟಿ ಬೆಂಗಳೂರಿನ ಶಿವಶಿಂಪಿ ಸಮಾಜಗಳ ಒಕ್ಕೂಟದ ಮಾಜಿ ಅಧ್ಯಕ್ಷರಾದ ಗಂಗಾಧರ ಯಾವಗಲ್, ವಿಜಯ ಪುರದ ಶಿವಶಿಂಪಿ ಸಮಾಜದ ಅಧ್ಯಕ್ಷರಾದ ಎಸ್.ಎಂ. ಸಿಂದಗಿ, ಸೊಲ್ಲಾಪುರದ ಶಿವದಾಸಿಮಯ್ಯ ಶಿವಶಿಂಪಿ ಸಮಾಜದ ಟ್ರಸ್ಟಿ, ಶಿವಶಂಕರ (ರಾಜು) ಚೊಳ್ಳೆ ಶಿವದಾಸಿಮಯ್ಯ ಶಿವಶಿಂಪಿ ಸಮಾಜದ ಅಧ್ಯಕ್ಷರಾದ ದಯಾನಂದ ವಿಜಾಪುರೆ ಭಾಗವಹಿಸಿದ್ದರು.

ಇದಕ್ಕೂ ಮುನ್ನಾ ನಗರದ ನೀಲಕಂಠೇಶ್ವರ ದೇವಾಲಯದಿಂದ ಪ್ರಾರಂಭವಾದ ಮೆರವಣಿಗೆಯು ಸಂತೇಪೇಟೆ ವೃತ್ತ, ಆನೆಬಾಗಿಲು, ಚಿಕ್ಕಪೇಟೆ, ಉಚ್ಚಂಗಿಯಲ್ಲಮ್ಮ ದೇವಾಲಯ, ದೊಡ್ಡಪೇಟೆ, ರಂಗಯ್ಯನ ಬಾಗಿಲು, ಮದಕರಿ ವೃತ್ತದಲ್ಲಿನ ಮಹರ್ಷಿ ವಾಲ್ಮೀಕಿ ಭವನದಲ್ಲಿ ತಲುಪಿತ್ತು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಶಿವಶರಣರ ಹೆಸರನ್ನು ಹೇಳುವ ಸ್ಪರ್ದೆ ಹಾಗೂ ವಚನ ಸ್ಪರ್ದೆ ಹಾಗೂ ರಾಜ್ಯ ಮಟ್ಟದ ಪ್ರಬಂಧ ಸ್ಪರ್ದೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಣೆ ಮಾಡಲಾಯಿತು.

ಪ್ರಾರ್ಥನೆಯನ್ನು ಸೌಮ್ಯ ಕರಿಬಸವಸ್ವಾಮಿ, ಚಿತ್ರದುರ್ಗ ಜಿಲ್ಲಾ ಲಿಂಗಾಯತ ಶಿವಶಿಂಪಿ ಸಮಾಜದ ಉಪಾಧ್ಯಕ್ಷರಾದ ಡಿ.ವಿ.ಮುರಗೇಶ್ ಸ್ವಾಗತಿದರೆ, ಕಾರ್ಯದರ್ಶಿ ಇ.ಕೆ. ಮಲ್ಲಿಕಾರ್ಜನ್ ಪ್ರಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ಗೀತಾ ರುದ್ರೇಶ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *