ಶಾಲಿವಾಹನ ಶಕವರ್ಷ 1949ರ ಪ್ರಮುಖ ದಿನವಾದ ಇಂದಿನ ದಕ್ಷಿಣಾಯನ, ವರ್ಷ ಋತುವಿನ ಭಾದ್ರಪದ ಮಾಸದ ಶುಕ್ಲ ಪಕ್ಷದ ಪೂರ್ಣಿಮಾ ತಿಥಿಯ ಶನಿವಾರದಂದು ದ್ವಾದಶ ರಾಶಿಗಳ ಫಲಾಫಲಗಳು ಹಾಗೂ ಇಂದಿನ ಪ್ರಮುಖ ವಿಶೇಷತೆಗಳ ಸಂಪೂರ್ಣ ವಿವರ ಇಲ್ಲಿದೆ.
ಇಂದು ಕಾಯುವಿಕೆ ಕಷ್ಟ, ದೇವರ ಕಾರ್ಯ, ನಿರಪೇಕ್ಷಿತ ಸಹಾಯ, ಅನಾರೋಗ್ಯದಿಂದ ಭಯ, ಯಂತ್ರಗಳ ಬಳಕೆ, ಹೊಸ ಜವಾಬ್ದಾರಿಯಿಂದ ಒತ್ತಡ ಹಾಗೂ ಸಾಲದ ಹಣ ವಾಪಸ್ ಬರುವ ಯೋಗಗಳು ಈ ದಿನದ ವಿಶೇಷತೆಯಾಗಿವೆ.
ಇಂದಿನ ಸಂಕ್ಷಿಪ್ತ ಪಂಚಾಂಗ
- ಶಕೆ ಮತ್ತು ಸಂವತ್ಸರ: ಶಾಲಿವಾಹನ ಶಕೆ ೧೯೪೯, ಪರಾಭವ ಸಂವತ್ಸರ
- ಅಯನ ಹಾಗೂ ಋತು: ದಕ್ಷಿಣಾಯನ, ವರ್ಷ ಋತು
- ಮಾಸ ಹಾಗೂ ಪಕ್ಷ: ಚಾಂದ್ರಮಾನ ಭಾದ್ರಪದ ಮಾಸ, ಶುಕ್ಲ ಪಕ್ಷ
- ತಿಥಿ ಹಾಗೂ ವಾರ: ಪೂರ್ಣಿಮಾ ತಿಥಿ, ಶನಿವಾರ
- ನಕ್ಷತ್ರ ಹಾಗೂ ಯೋಗ: ಉತ್ತರಾಭಾದ್ರ ನಕ್ಷತ್ರ, ಗಂಡ ಯೋಗ
- ಕರಣ: ಬವ ಕರಣ
- ಸೂರ್ಯೋದಯ ಹಾಗೂ ಸೂರ್ಯಾಸ್ತ: ಬೆಳಿಗ್ಗೆ 06:09 – ಸಂಜೆ 06:11
- ಅಶುಭ ಕಾಲ:
- ರಾಹು ಕಾಲ: 09:10 – 10:41
- ಯಮಗಂಡ ಕಾಲ: 13:41 – 15:11
- ಗುಳಿಕ ಕಾಲ: 06:10 – 07:41
ದ್ವಾದಶ ರಾಶಿಗಳ ಫಲಗಳು
1. ಮೇಷ ರಾಶಿ
ಕಷ್ಟವಾದರೂ ಸಂತೋಷದಿಂದ ಕೆಲಸವನ್ನು ಪೂರ್ಣಗೊಳಿಸುವಿರಿ. ಪ್ರೇಮದ ವಿಚಾರದಲ್ಲಿ ಆಸಕ್ತಿ ಹೆಚ್ಚಾಗಿದ್ದು, ಪ್ರೇಮಿಯನ್ನು ನೋಡಲು ಹಂಬಲಿಸುವಿರಿ. ಮಹಿಳಾ ಉದ್ಯೋಗಿಗಳಿಗೆ ಸೂಕ್ತ ಸ್ಥಾನಮಾನ ಲಭಿಸಲಿದೆ. ಎಲ್ಲಿಯೋ ಮಾಡಿದ ಹೂಡಿಕೆಯಿಂದ ನಷ್ಟವಾಗುವ ಸಾಧ್ಯತೆಯಿದೆ. ಯಾರ ಮೇಲೂ ದೂರು ನೀಡುವುದು ಬೇಡ. ಭೂವಿಚಾರದ ಕಾನೂನು ಸಮರದಲ್ಲಿ ಆಸಕ್ತಿ ಹೆಚ್ಚಾಗಬಹುದು. ಆರ್ಥಿಕವಾಗಿ ಸಬಲರಾಗಲು ವಿವಿಧ ಮೂಲಗಳನ್ನು ಹುಡುಕುವಿರಿ.
2. ವೃಷಭ ರಾಶಿ
ಬೇರೆಯವರು ಖುಷಿಪಡುವಂತೆ ಸವಿಮಾತನಾಡುವಿರಿ. ಆರ್ಥಿಕ ಸಹಾಯವು ಸಿಗದೇ ಸ್ವಲ್ಪ ಕಷ್ಟಪಡಬೇಕಾದೀತು. ಮನಸ್ಸು ಚಂಚಲವಾಗಿ ಕೆಲಸದಲ್ಲಿ ಏಕತೆ ಇರುವುದಿಲ್ಲ. ಚರ ಆಸ್ತಿಯನ್ನು ಕಳೆದುಕೊಳ್ಳುವ ಸಂಭವವಿದೆ. ಯಾರಾದರೂ ವ್ಯಕ್ತಿ ನಿಮಗೆ ಸ್ಪೂರ್ತಿಯಾಗಬಹುದು. ಶೈಕ್ಷಣಿಕ ಕೆಲಸದಲ್ಲಿ ವಿರಾಮವಿರದು. ಬಂಧುಗಳ ಭೇಟಿಯು ಮನಸ್ಸಿಗೆ ಸುಖವನ್ನು ತರಲಿದೆ. ಸಂಗಾತಿಯ ನಡುವೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡಬಹುದು.
3. ಮಿಥುನ ರಾಶಿ
ಆಪ್ತರು ನಿಮಗೆ ಬರುವ ಸಂಕಟದಲ್ಲಿ ಜೊತೆಯಾಗಿ ನಿಲ್ಲುವರು. ಇ A ಇನ್ನೊಬ್ಬರಿಗೆ ಸಹಾಯ ಮಾಡುವ ಮನಸ್ಸು ಹೆಚ್ಚಾಗುವುದು. ನಿರೀಕ್ಷಿಸಿದಷ್ಟು ಸಂಪತ್ತು ಸಿಗದೇ ಹೋಗಬಹುದು. ಯಾರದೋ ತಪ್ಪಿಗೆ ನೀವು ಬಲಿಯಾಗಬೇಕಾದ ಪರಿಸ್ಥಿತಿ ಬರಬಹುದು. ಐಷಾರಾಮಿ ವಸ್ತುಗಳನ್ನು ಖರೀದಿಸಿದರೂ ಮನಸ್ಸಿಗೆ ಪೂರ್ಣ ಸಂತೃಪ್ತಿ ಸಿಗದು. ಮನೋರಂಜನೆಯಲ್ಲಿ ಹೆಚ್ಚು ಸಮಯ ಕಳೆಯುವಿರಿ. ಯಂತ್ರಗಳ ಮಾರಾಟದಿಂದ ಅಲ್ಪ ಲಾಭವಿರಲಿದೆ.
4. ಕರ್ಕಾಟಕ ರಾಶಿ
ನಿಮಗೆ ಬರಬೇಕಾದ ಹಣವು ಅನಿರೀಕ್ಷಿತ ರೀತಿಯಲ್ಲಿ ಬಂದರೂ ಅದು ಇನ್ನೊಂದು ಮಾರ್ಗದಲ್ಲಿ ಖಾಲಿಯಾಗುವುದು. ನಿಮಗೆ ಇಷ್ಟವಿಲ್ಲದವರನ್ನು ಮನಸ್ಸಿನಿಂದ ಹೊರಹಾಕಿ. ಆತುರದಲ್ಲಿ ಗೃಹನಿರ್ಮಾಣವನ್ನು ಮಾಡಿಕೊಂಡು ನಂತರ ಸಿಟ್ಟಾಗುವಿರಿ. ವಾಹನ ಚಾಲನೆ ಮಾಡುವಾಗ ನಕಾರಾತ್ಮಕ ಯೋಚನೆಗಳು ಕಾಡಬಹುದು. ಸದುದ್ದೇಶದ ಸಂಬಂಧಗಳು ನಿಮಗೆ ಯಶಸ್ಸು ತಂದುಕೊಡುವುದು. ಇಂದು ಹೆಚ್ಚು ಶ್ರಮವಹಿಸಿ ಕೆಲಸ ಮಾಡಬೇಕಾಗುತ್ತದೆ.
5. ಸಿಂಹ ರಾಶಿ
ನಿಮ್ಮ ಕರ್ತವ್ಯಗಳನ್ನು ಮರೆಯುವ ಸಾಧ್ಯತೆಯಿದ್ದು, ಯಾರಾದರೂ ಅದನ್ನು ನೆನಪಿಸಬೇಕಾಗುತ್ತದೆ. ಹೊಸ ಹೂಡಿಕೆ ಮಾಡಿ ಹೊಸ ಚಿಂತೆಯನ್ನು ತಂದುಕೊಳ್ಳುವಿರಿ. ಇಷ್ಟಮಿತ್ರರ ಜೊತೆ ಸಂತೋಷದಿಂದ ಸಮಯ ಕಳೆಯುವಿರಿ. ಅಸೂಯೆಯ ಕಾರಣದಿಂದ ಯಾವುದೇ ಸಂತೋಷವನ್ನು ಪೂರ್ಣವಾಗಿ ಅನುಭವಿಸಲಾರಿರಿ. ನಿಮಗೆ ಬರಬೇಕಾದ ಬಾಕಿ ಹಣವನ್ನು ಕೇಳಿ ಪಡೆದುಕೊಳ್ಳುವಿರಿ. ನಿಮ್ಮ ಜವಾಬ್ದಾರಿಯ ಸ್ಥಾನವನ್ನು ಬೇರೆಯವರಿಗೆ ಬಿಟ್ಟುಕೊಡಬೇಕಾಗಬಹುದು.
6. ಕನ್ಯಾ ರಾಶಿ
ವಿದೇಶಕ್ಕೆ ಸಂಬಂಧಪಟ್ಟ ವ್ಯವಹಾರಗಳಲ್ಲಿ ಪಾಲುದಾರಿಕೆ ಸಿಗುವ ಸಾಧ್ಯತೆಯಿದೆ. ಒಂದೇ ಕೆಲಸದಲ್ಲಿ ಮಗ್ನರಾಗಿ ಮಾಡಬೇಕಾದ ಇತರ ಪ್ರಮುಖ ಕೆಲಸಗಳನ್ನು ಮರೆಯಬಹುದು. ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗುವ ಬಯಕೆ ಮೂಡುವುದು. ಹೊಸ ವಸ್ತುಗಳು ನಿಮಗೆ ಖುಷಿಯನ್ನು ನೀಡೀತು. ಪ್ರೇಮ ಸಂಬಂಧವು ಸ್ವಲ್ಪ ದಾರಿತಪ್ಪಬಹುದು. ನಿಮ್ಮಲ್ಲಿರುವ ಅಲ್ಪ ಹಣವನ್ನು ಸೇರಿಸಿ, ಕೊಡಬೇಕಾದವರಿಗೆ ಸಾಲ ತೀರಿಸುವಿರಿ.
7. ತುಲಾ ರಾಶಿ
ನಿಮ್ಮದಾದ ಸಂಪತ್ತನ್ನು ಇನ್ನೊಬ್ಬರಿಗೆ ಕೊಡಬೇಕಾದ ಪರಿಸ್ಥಿತಿ ಬರಬಹುದು. ನಿಮ್ಮ ವ್ಯಕ್ತಿತ್ವಕ್ಕೆ ಕಳಂಕ ತರಲು ಶತ್ರುಗಳು ಯತ್ನಿಸಬಹುದು. ಬೆನ್ನುನೋವಿನ ಸಮಸ್ಯೆಯು ನಿಮ್ಮ ಕೆಲಸಗಳಿಗೆ ಅಡ್ಡಿಯಾಗಬಹುದು. ಉದ್ಯೋಗಕ್ಕೆ ತಾತ್ಕಾಲಿಕ ವಿರಾಮ ನೀಡಿ ಹೊರಗೆ ಸುತ್ತಾಟ ನಡೆಸುವಿರಿ. ಸಂಗಾತಿಯ ಜೊತೆ ಹಳೆಯ ನೆನಪುಗಳನ್ನು ಮೆಲುಕುಹಾಕುವಿರಿ. ಅಪರೂಪಕ್ಕೆ ಸಿಕ್ಕ ಆಹಾರವನ್ನು ಮಿತವಾಗಿ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ.
8. ವೃಶ್ಚಿಕ ರಾಶಿ
ನಿಮ್ಮ ಮಕ್ಕಳ ವರ್ತನೆ ಹಾಗೂ ನಡವಳಿಕೆಯನ್ನು ಸರಿಯಾಗಿ ತಿಳಿದುಕೊಳ್ಳುವ ಅವಶ್ಯಕತೆ ಇದೆ. ವ್ಯಾಪಾರದಲ್ಲಿ ನಷ್ಟವಾದರೂ ತಾಳ್ಮೆಯಿಂದ ಪರಿಸ್ಥಿತಿಯನ್ನು ಎದುರಿಸಿ ಮುನ್ನಡೆಯಿರಿ. ಮೂರನೇ ವ್ಯಕ್ತಿಗಳ ಒತ್ತಡಕ್ಕೆ ಮಣಿದು ನಿಮ್ಮ ನಿರ್ಧಾರಗಳನ್ನು ಬದಲಾಯಿಸುವಿರಿ. ವಿದೇಶ ಪ್ರವಾಸ ಮಾಡುವ ಮನಸ್ಸಾಗುವುದು. ವಿವಾಹಕ್ಕೆ ಸಂಬಂಧಿಸಿದ ಮಾತುಕತೆಗಳಿಗೆ ಸಕಾರಾತ್ಮಕ ಸ್ಪಂದನೆ ಸಿಗದು. ಸ್ವಾಲಂಬಿಯಾಗುವುದು ಸದ್ಯಕ್ಕೆ ಕಷ್ಟವೆನಿಸಬಹುದು.
9. ಧನು ರಾಶಿ
ಧಾರ್ಮಿಕ ಕಾರ್ಯಗಳಿಗೆ ಮುಂಚೂಣಿಯಲ್ಲಿ ನಿಂತು ಮುಂಡಾಳುತ್ವ ವಹಿಸುವಿರಿ. ನಿಮ್ಮ ಬಳಿ ಇತರರು ಸಹಾಯ ಅಥವಾ ಸಾಲ ಕೇಳಿ ಬರಬಹುದು. ವೈದ್ಯಕೀಯ ವೃತ್ತಿಪರರಿಗೆ ವಿಶೇಷ ಪ್ರಶಂಸೆ ಸಿಗಲಿದೆ. ಸರ್ಕಾರಿ ಉದ್ಯೋಗಿಗಳ ಸ್ಥಾನ ಬದಲಾವಣೆಯಾಗುವ ಸಂಭವವಿದೆ. ಎಲ್ಲವೂ ನನಗೆ ತಿಳಿದಿದೆ ಎಂಬ ಅಹಂ ಭಾವ ಬೇಡ. ಮನೆಯ ವಾತಾವರಣದಲ್ಲಿ ನೆಮ್ಮದಿ ಕಾಣುವಿರಿ. ನಿಮ್ಮ ವೈಯಕ್ತಿಕ ವಸ್ತುಗಳನ್ನು ಸ್ನೇಹಿತರಿಗೆ ದಾನವಾಗಿ ನೀಡುವಿರಿ.
10. ಮಕರ ರಾಶಿ
ಸಂಗಾತಿಯ ನೋವು ಅಥವಾ ಸಮಸ್ಯೆಗಳನ್ನು ಆಲಿಸುವಷ್ಟು ತಾಳ್ಮೆ ಇಂದು ಇರುವುದಿಲ್ಲ. ಸರಿಯಾದ ಸಮಯಕ್ಕೆ ವೈದ್ಯರ ಬಳಿ ತೆರಳಿ ಆರೋಗ್ಯವನ್ನು ಸರಿಪಡಿಸಿಕೊಳ್ಳಿ. ನಿಮ್ಮ ಕಠಿಣ ನಿಯಮಗಳು ಕುಟುಂಬದವರಿಗೆ ಇಷ್ಟವಾಗಲಿಕ್ಕಿಲ್ಲ. ನಿಮ್ಮ ಜವಾಬ್ದಾರಿಯನ್ನು ಸಂಗಾತಿಯು ಅಚ್ಚುಕಟ್ಟಾಗಿ ನಿರ್ವಹಿಸುವರು. ಕಚೇರಿಯ ಒತ್ತಡದ ಕೆಲಸವನ್ನು ಮನೆಗೂ ತಂದುಕೊಳ್ಳುವಿರಿ. ಸಂಗಾತಿಯನ್ನು ಹೊರಗೆ ಸುತ್ತಾಡಲು ಕರೆದೊಯ್ಯುವಿರಿ.
11. ಕುಂಭ ರಾಶಿ
ನಿಮ್ಮ ನೇರ ಮಾತುಗಳು ಕೇಳುಗರಿಗೆ ಬೇಸರ ಅಥವಾ ಹಿಂಸೆ ಉಂಟುಮಾಡಬಹುದು. ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡಬಹುದು. ಸತತ ಪ್ರಯಾಣ ಹಾಗೂ ಸುತ್ತಾಟದಿಂದ ದೈಹಿಕ ಆಯಾಸವಾಗಲಿದೆ. ನಿಮ್ಮ ವೈಯಕ್ತಿಕ ಆಸೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವಿರಿ. ಹಣಕಾಸಿನ ವಿಚಾರದಲ್ಲಿ ತೀವ್ರ ಚಿಂತೆ ಕಾಡಲಿದೆ. ಹೊಸ ಕೆಲಸವನ್ನು ಆರಂಭಿಸಲು ಧೈರ್ಯ ಸಾಲದು. ಭೂ ವ್ಯವಹಾರದಲ್ಲಿ ನಿಶ್ಚಿತ ಲಾಭ ಪ್ರಾಪ್ತವಾಗಲಿದೆ.
12. ಮೀನ ರಾಶಿ
ಮಕ್ಕಳೊಂದಿಗೆ ಪ್ರವಾಸ ಹಾಗೂ ಸುತ್ತಾಟಕ್ಕೆ ತೆರಳುವಿರಿ. ಎಷ್ಟೇ ಕಷ್ಟಪಟ್ಟರೂ ಅಂದುಕೊಂಡದ್ದನ್ನು ಸಾಧಿಸುವುದು ಕಷ್ಟವಾದೀತು. ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಲು ಅವಕಾಶ ಸಿಗಲಿದೆ. ವ್ಯಾಪಾರದಲ್ಲಿ ಆರ್ಥಿಕ ಲಾಭಕ್ಕಿಂತ ಗ್ರಾಹಕರ ವಿಶ್ವಾಸ ಗಳಿಸುವುದು ಇಂದು ನಿಮಗೆ ಮುಖ್ಯವೆನಿಸುತ್ತದೆ. ಶುಭ ಕಾರ್ಯಗಳಲ್ಲಿ ಭಾಗಿ ಆಗುವಿರಿ. ಮಾತನ್ನು ಕಡಿಮೆ ಮಾಡಿ ಕೆಲಸದಲ್ಲಿ ಗಮನಹರಿಸಿ. ಮಹಿಳಾ ಉದ್ಯೋಗಿಗಳಿಗೆ ಉನ್ನತ ಸ್ಥಾನಮಾನ ಲಭಿಸಲಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Whats App Channel: https://whatsapp.com/channel/0029VbDbOsBD8SE2H0L3d40j