ಒಳ ಮೀಸಲಾತಿ ಜಾರಿಯಲ್ಲಿ ತಾರತಮ್ಯ ಆರೋಪ: ಮಾದಿಗ ಸಮುದಾಯಕ್ಕೆ ಅನ್ಯಾಯವೆಂದು ಸಾಮಾಜಿಕ ಸಂಘರ್ಷ ಸಮಿತಿ ಆಕ್ರೋಶ.

ಚಿತ್ರದುರ್ಗ ಏ. 28

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಸರ್ಕಾರ ಜಾರಿ ಮಾಡಿರುವ ಒಳ ಮೀಸಲಾತಿಯ ಪ್ರಮಾಣ ಉತ್ತಮವಾಗಿದ್ದರೂ ನೇಮಕಾತಿಯಲ್ಲಿ ತಾರತಮ್ಯ ಮಾಡಲಾಗಿದೆ.15ಕ್ಕಿಂತ ಕಡಿಮೆ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆದಾಗ ಒಳ ಮೀಸಲಾತಿ ಅನ್ವಯವಾಗುವುದಿಲ್ಲ. ಇದರಿಂದ ಒಳ ಮೀಸಲಾತಿಗೆ ಸಂಬಂಧಪಟ್ಟ ಸಮುದಾಯಗಳಿಗೆ ಅನ್ಯಾಯವಾಗಲಿದೆ ಇದನ್ನು ನಾವು ಖಂಡಿಸುತ್ತೇವೆ ಎಂದು ಸಾಮಾಜಿಕ ಸಂಘರ್ಷ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.


ಚಿತ್ರದುರ್ಗದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತಾಡಿ ಮಾತನಾಡಿದ ಸಾಮಾಜಿಕ ಸಂಘರ್ಷ ಸಮಿತಿಯ ಪ್ರೋ. ಸಿಕೆ ಮಹೇಶ್, ಏ. 24ರಂದು ರಾಜ್ಯ ಸರ್ಕಾರವು ತನ್ನ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿಗೆ ಸಂಬಂಧಿಸಿದಂತೆ ಕೈಗೊಂಡ ನಿರ್ಣಯವು ಕಾನೂನುಬಾಹಿರವಲ್ಲದೇ, ಮಾನ್ಯ ಸರ್ವೋಚ್ಚ ನ್ಯಾಯಾಲಯ ಒಳ ಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯ ಸಮಾನತೆ ತತ್ವಗಳಾಧಾರದ ಮೇಲೆ ನೀಡಿದ ತೀರ್ಪಿಗೆ ವಿರುದ್ಧವಾದ ನಿರ್ಣಯವಾಗಿದೆ.

ಒಳ ಮೀಸಲಾತಿಯನ್ನು ಅನುಷ್ಠಾನಕ್ಕೆ ತರುವುದು ರಾಜ್ಯಗಳಿಗೆ ಅಧಿಕಾರವಿದೆ ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಅಂತಹ ಒಳ ಮೀಸಲಾತಿಯನ್ನು ಜಾರಿಗೆ ತರುವಾಗ ಆಯಾ ಸಮುದಾಯಗಳು / ಗುಂಪುಗಳ ಅಸಮರ್ಪಕ ಪ್ರಾತಿನಿಧ್ಯ ಮತ್ತು ಅಂತರ್ ಹಿಂದುಳಿದಿರುವಿಕೆ ಪರಿಗಣಿಸಿ ಸೂಕ್ತ ಪ್ರಾತಿನಿಧ್ಯವನ್ನು ಕಲ್ಪಿಸಬೇಕೆಂದು ನಿರ್ದೇಶಿಸುತ್ತದೆ. ಆದರೆ ಈ ಯಾವುದೊಂದು ಮಾನದಂಡಗಳನ್ನು ಕರ್ನಾಟಕ ಸರ್ಕಾರವು ಪಾಲಿಸಿಲ್ಲ. ಒಳ ಮೀಸಲಾತಿ ಜಾರಿ ವಿಚಾರದಲ್ಲಿ ರೋಸಟರ್ ಬಿಂದು ವ್ಯಕ್ತ/ಗೋಚರವಾದರೆ ಒಳ ಮೀಸಲಾತಿ ಎಂಬುದು ಅವ್ಯಕ್ತ ರೋಸ್ಟರ್ ಬಿಂದು ಇಲ್ಲದ ಒಳ ಮೀಸಲಾತಿ ಪದಕ್ಕೆ ಯಾವುದೇ ಅರ್ಥವಿರುವುದಿಲ್ಲ. ಆದ್ದರಿಂದ ಕರ್ನಾಟಕದಲ್ಲಿ ವಾಸ್ತವವಾಗಿ ಕರ್ನಾಟಕದಲ್ಲಿ ಒಳ ಮೀಸಲಾತಿ ಎಂಬುದು ಜಾರಿಯೇ ಆಗಿಲ್ಲ ಎಂದು ದೂರಿದರು. 


ಸರ್ಕಾರ ಒಳಮೀಸಲಾತಿ ಜಾರಿ ಮಾಡಿದರೂ ಸಹ ಅದರಿಂದ ಮಾದಿಗ ಸಮುದಾಯಕ್ಕೆ ನ್ಯಾಯ ಸಿಕ್ಕಿಲ್ಲ, ನ್ಯಾಯಾಲಯ ಆದೇಶ ನೀಡಿದ ಮೂರು ವರ್ಷದ ನಂತರ ಇದನ್ನು ಜಾರಿ ಮಾಡಿದ್ದಾರೆ. ಜಾರಿ ಮಾಡುವಲ್ಲೂ ಸಹ ತಾರತಮ್ಯವೆಸಗುವುದರ ಮೂಲಕ ಮಾದಿಗ ಸಮುದಾಯಕ್ಕೆ ಸರ್ಕಾರ ಅನ್ಯಾಯ ಮಾಡಿದ್ದು, ಈ ಒಳಮೀಸಲಾತಿ ಸಮಸ್ಯೆಯನ್ನು ಜೀವಂತಾಗಿಡುವ ಹುನ್ನಾರ ನಡೆಸಿದೆ. ಸರ್ಕಾರದಿಂದ ಯಾವುದೇ ಹುದ್ದೆ ನೇಮಕಾತಿ ಆರಂಭವಾದರೂ ರೋಸ್ಟರ್ ಬಿಂಧು ಮಾದರಿಯಲ್ಲಿಯೇ ನೇಮಕಾತಿ ಆದಾಗ ಮಾತ್ರ ನಮ್ಮ ಸಮುದಾಯಕ್ಕೆ ನ್ಯಾಯ ಸಿಗಲು ಸಾಧ್ಯವಿದೆ. ಕೆಲವೊಂದು ಮೇಲ್ವರ್ಗದ ಸಮುದಾಯದವರು ಮಾದಿಗ ಸಮುದಾಯ ನಿರ್ಣಯ ತೆಗೆದುಕೊಳ್ಳುವ ಹುದ್ದೆಯಲ್ಲಿ ಇರಬಾರದೆಂದು ಅವರು ಡಿ ಗ್ರೂಪ್‍ನಲ್ಲಿರಬೇಕೆಂಬ ದುರುದ್ದೇಶದಿಂದ ಈ ರೀತಿ ವಂಚನೆ ಮಾಡಲಾಗಿದೆ. ಯಾವುದೇ ಕಾರಣಕ್ಕೂ ನಾವು ಇದನ್ನು ಒಪ್ಪದೆ ಖಂಡಿಸುತ್ತೇವೆ. ಮುಂದಿನ ದಿನಗಳಲ್ಲಿ ಸರ್ಕಾರ ಯಾವುದೇ ಒಂದು ಹುದ್ದೆ ನೇಮಕಾತಿ ಪ್ರಕ್ರಿಯೆ ನಡೆಸಿದರೂ ಅದಕ್ಕೆ ಒಳಮೀಸಲಾತಿ ಅನ್ವಯ ಆಗುವಂತೆ ಆದೇಶ ಜಾರಿ ಮಾಡುವಂತೆ  ಒತ್ತಾಯಿಸಿದರು.


ಸಾಮಾಜಿಕ ಸಂಘರ್ಷ ಸಮಿತಿಯ ಮಲ್ಲಕಾರ್ಜನ್ ಹಿರೇಹಳ್ಳಿ ಮಾತನಾಡಿ, ಸರ್ಕಾರ ಒಳಮೀಸಲಾತಿ ಹಂಚಿಕೆ ಪ್ರಮಾಣ ನಮಗೆ ಸಂತಸ ತಂದಿದೆ. ಅದರೆ ನೇಮಕಾತಿ ಪ್ರಕ್ರಿಯೆಯಲ್ಲಿ ತಾರತಮ್ಯ ಮಾಡಲಾಗಿದೆ.ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಸ್ಪಷ್ಟವಾಗಿ ತಿಳಿಸಿರುವ ಹಿನ್ನೆಲೆಯಲ್ಲಿ 15ಕ್ಕಿಂತ ಕಡಿಮೆ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆದಲ್ಲಿ ಒಳಮೀಸಲಾತಿ ಅನ್ವಯವಾಗುವುದಿಲ್ಲ. ಇದರ ಬಗ್ಗೆ ಸರಿಯಾಗಿ ತಿಳಿಯದ ನಮ್ಮ ಸಮುದಾಯದವರು ಒಳಮೀಸಲಾತಿ ಜಾತಿ ಆಗೇಬಿಟ್ಟಿತು  ನಾವೆಲ್ಲಾ ಕೆಲಸ ಪಡೆದುಕೊಂಡೆ ವೆಂಬ ಭ್ರಮೆಯಲ್ಲಿ ಇದ್ದಾರೆ. ಆದರೆ ಸರ್ಕಾರ ಜಾರಿ ಮಾಡಿರುವ ಒಳಮೀಸಲಾತಿ ಸಂವಿಧಾನ ತತ್ವಕ್ಕಾಗಲಿ ಅಂಬೇಡ್ಕರ್ ಅವರ ಸಿದ್ದಾಂತಕ್ಕಾಗಲಿ ಅನುಗುಣವಾಗಿಲ್ಲ ಎಂದ ಅವರು. ಒಂದು ನೇಮಕಾತಿ ಪ್ರಕ್ರಿಯೆಯಲ್ಲಿ ಬಹುತೇಕ ಎ ಮತ್ತು ಬಿ. ದರ್ಜೆ ಹುದ್ದೆಗಳು 15ಕ್ಕಿಂತ ಕಡಿಮೆ ಇರುತ್ತದೆ. ಸಿ. ಮತ್ತು ಡಿ. ದರ್ಜೆ ಹುದ್ದೆಗಳು 15ಕ್ಕಿಂತ ಮೇಲ್ಪಟ್ಟಿದ್ದು ಅಲ್ಲಿ ಮಾತ್ರವೇ ಒಳ ಮೀಸಲಾತಿಗೆ ಅವಕಾಶವಿರುತ್ತದೆ ಎಂದಿದ್ದಾರೆ.


ಸರ್ಕಾರ ತೋರಿಕೆಗೆ ಮಾತ್ರ ಒಳ ಮೀಸಲಾತಿಯನ್ನು ಜಾರಿ ಮಾಡಿದೆ. ಮಾದಿಗ ಸಮುದಾಯದವರು ಬರೀ ‘ಡಿ’ ದರ್ಜೆ ಮತ್ತು ಅದಕ್ಕಿಂತ ಕೆಳಗಿನ ಹುದ್ದೆಗಳಲ್ಲಿ ಮಾತ್ರ ಇರಬೇಕೆಂದು ಈ ರೀತಿ ಮಾಡಿದ್ದಾರೆ.ಇದನ್ನು ಸರಿಯಾಗಿ ತಿಳಿಯದ ನಮ್ಮ ಸಮುದಾಯದವರು ಸರ್ಕಾರ ಒಳ ಮೀಸಲಾತಿ ಜಾರಿ ಮಾಡಿದ್ದಕ್ಕೆ ವಿಜಯೋತ್ಸವವನ್ನು ಆಚರಿಸಿ ಸಂಭ್ರಮಿಸಿದ್ದಾರೆ. ಅವರು ಸರ್ಕಾರದ ಆದೇಶಗಳನ್ನು ಸರಿಯಾದ ರೀತಿಯಲ್ಲಿ ಓದಿಕೊಂಡಿಲ್ಲ.ಸರ್ಕಾರ ಒಳ ಮೀಸಲಾತಿ ಜಾರಿ ನೆಪದಲ್ಲಿ ಇದನ್ನು ಜೀವಂತವಾಗಿಡುವಂತಹ ಕಾರ್ಯವನ್ನು ಮಾಡಲು ಮುಂದಾಗಿದೆ ಎಂದು ದೂರಿದರು. ಪದೇ ಪದೇ ಅಂಬೇಡ್ಕರ್ ಹೆಸರೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಮಾಜಕಲ್ಯಾಣ ಸಚಿವ ಮಹದೇವಪ್ಪನವರು ಅಂಬೇಡ್ಕರ್ ವಿಚಾರಧಾರೆಯನ್ನು ಗಾಳಿಗೆ ತೂರಿದ್ದಾರೆ. ಉನ್ನತ ಶಿಕ್ಷಿತವಂತರನ್ನು ತಯಾರಿಸುವ ಸಾಮಾನ್ಯ ವಿಜ್ಞಾನಗಳ ವಿಶ್ವವಿದ್ಯಾಲಯಗಳಲ್ಲಿ ಕೃಷಿ ತಾಂತ್ರಿಕ ಮತ್ತು ವೈದ್ಯಕೀಯ ವಿಶ್ವವಿದ್ಯಾಲಯಗಳಲ್ಲಿ ವಿಭಾಗ ಒಂದರಲ್ಲಿ ವರ್ಷಕ್ಕೆ ಗರಿಷ್ಠ ಮೂರು, ನಾಲ್ಕು ಹುದ್ದೆಗಳು ಮಾತ್ರ ಕ್ರಿಯೇಟ್ ಆಗುತ್ತವೆ. ಅಲ್ಲಿ ಒಳ ಮೀಸಲಾತಿ ಅನ್ವಯವಾವಾಗದೆ ಕೇವಲ ಮೆರಿಟ್ ಆಧಾರದ ಮೇಲೆ ನೇಮಕ ಮಾಡಿಕೊಳ್ಳುಲಾಗುತ್ತದೆ ಎಂದರು.


ಯಾವುದೇ ಹುದ್ದೆ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾದರೂ ರೋಸ್ಟರ್ ಬಿಂದು ಮಾದರಿಯಲ್ಲಿ ಹುದ್ದೆಗಳನ್ನು ನೇಮಕಾತಿ ಮಾಡಿದಾಗ ಮಾತ್ರ ಮಾದಿಗ ಸಮುದಾಯಕ್ಕೆ ನ್ಯಾಯ ಸಿಗಲು ಸಾಧ್ಯವಿದೆ.. ಸದಾಶಿವ ಆಯೋಗದ ವರದಿ ಹಾಗೂ ನಾಗಮೋಹನ್ ದಾಸ್ ಆಯೋಗದ ವರದಿಗಳು ಉತ್ತಮವಾಗಿವೆ… ಆದರೆ ಸರ್ಕಾರ ಜಾರಿ ಮಾಡಿರುವ ಒಳ ಮೀಸಲಾತಿ ಸಂವಿಧಾನ ಮತ್ತು ಅಂಬೇಡ್ಕರ್ ಸಿದ್ಧಾಂತಕ್ಕೆ ವಿರೋಧವಾಗಿದೆ.ಅಂಬೇಡ್ಕರ್ ರವರು ನಿರ್ಣಯ ತೆಗೆದುಕೊಳ್ಳುವಂತಹ ಸ್ಥಾನದಲ್ಲಿ ನಮ್ಮ ಸಮುದಾಯದವರು ಇದ್ದಾಗ ಮಾತ್ರ ನಮ್ಮ ಜನಾಂಗ ನ್ಯಾಯ ಕೊಡಿಸಲು ಸಾಧ್ಯವಿದೆ ಎಂದ ಅವರು   ಆದರೆ ‘ಡಿ’  ಗ್ರೂಪ್‍ನಲ್ಲಿ ಇದ್ದಾಗ ಯಾವುದೇ ನ್ಯಾಯ ಒದಗಿಸಲು ಸಾಧ್ಯವಿಲ್ಲ ಇದನ್ನು ಅರಿಯದ ನಮ್ಮ ಸಮುದಾಯದವರು ಪ್ರಚಾರದಲ್ಲಿ ಇರಬೇಕೆಂದು ಆತುರವಾಗಿ ಒಳ ಮೀಸಲಾತಿ ಜಾರಿಯಾದ ದಿನದಂದೇ ಸಿಹಿ ಹಂಚಿ ಸಂಭ್ರಮಿಸಿದ್ದಾರೆ ಎಂದು ಟೀಕಿಸಿ ಸರ್ಕಾರ ಯಾವುದೇ ಆದೇಶ ಹೊರಡಿಸಿದಾಗ ಅದನ್ನು ಸರಿಯಾದ ರೀತಿಯಲ್ಲಿ ಪರಿಶೀಲಿಸದೇ ಸಂಭ್ರಮಿಸುವುದು ಸರಿಯಲ್ಲ ಎಂದು ಕಿವಿ ಮಾತು ಹೇಳಿ.ಮಾದಿಗ ಜನಾಂಗವು ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಅವರ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯದಲ್ಲಿ ಒಂದು ಅಸಮರ್ಪಕ ಪ್ರಾತಿನಿಧ್ಯ ಮತ್ತು ಮತ್ತೊಂದು ಅಂತರ್ ಹಿಂದುಳಿದಿರುವಿಕೆಯನ್ನು ಸರ್ಕಾರ ನೇಮಿಸಿದ ಎಲ್ಲಾ ಆಯೋಗಗಳು ಒತ್ತಿ ಹೇಳಿವೆ ಆದರೆ ಕರ್ನಾಟಕ ಸರ್ಕಾರ ಇದನ್ನೆಲ್ಲಾ ಗಾಳಿಗೆ ತೂರಿದೆ ಎಂದು ದೂರಿದರು.


ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಸಿ.ಎ.ಚಿಕ್ಕಣ್ಣ ದುರುಗೇಶ್, ಕೆ.ಕುಮಾರ್, ರಾಮು ಗೋಸಾಯಿ, ಸುಧಾಕರ್, ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *