ಗೃಹಲಕ್ಷ್ಮೀ-ಗೃಹಜ್ಯೋತಿ ಮರು ಅರ್ಜಿ ವಿಚಾರಕ್ಕೆ ಆಪ್ ಆಕ್ರೋಶ; ಹೋರಾಟದ ಎಚ್ಚರಿಕೆ.

ಚಿತ್ರದುರ್ಗ ಜೂ. 17

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ರಾಜ್ಯ ಸರ್ಕಾರ ತನ್ನ ಗ್ಯಾರೆಂಟಿಗಳಿಗಾಗಿ ಸಾರ್ವಜನಿಕರು ಕಟ್ಟಿದ ತೆರಿಗೆಯ ಹಣವನ್ನು ಬಳಕೆ ಮಾಡುತ್ತಿರು ವುದು ಸರಿಯಲ್ಲ, ಈಗ ಗ್ಯಾರೆಂಟಿ ಯೋಜನೆಗಳಾದ ಗೃಹಲಕ್ಷ್ಮೀ ಹಾಗೂ ಗೃಹಜ್ಯೋತಿ ಯೋಜನೆಗಳಿಗೆ ಮರು ಅರ್ಜಿಯನ್ನು ಸಲ್ಲಿಸಲು ಹೇಳಿರುವುದು ಸರಿಯಲ್ಲ ಸರ್ಕಾರ ಭ್ರಷ್ಠಾಚಾರ ನಿರ್ಮೂಲನೆಗೆ ಈಗ ಪಣ ತೊಟ್ಟಿರುವುದು ಭೂತನ ಬಾಯಲ್ಲಿ ಭಗವದ್ಗಿತೆ ಕೇಳಿದಂತೆ ಎಂದು ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷರಾದ ಜಗದೀಶ್ ದೂರಿದ್ದಾರೆ.

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಸಾರ್ವಜನಿಕರ ಮೇಲೆ ಹೆಚ್ಚಿನ ತೆರಿಗೆಯನ್ನು ಹಾಕುವುದರ ಮೂಲಕ ಅದರಿಂದ ಬಂದಂತಹ ಹಣವನ್ನು ಪಂಚ ಗ್ಯಾರಂಟಿಗಳಿಗೆ ಬಳಕೆ ಮಾಡುತ್ತಿರುವುದು ಸರಿಯಲ್ಲ.ಕಳೆದ 03 ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಅದನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಆದರೆ ಈಗ ಬಂದಿರುವ ನೂತನ ಮುಖ್ಯಮಂತ್ರಿಗಳು ಯಾರಾದರೂ ಅಧಿಕಾರಿಗಳು ಲಂಚ ಕೇಳಿದರೆ ನನಗೆ ಫೋನ್ ಮಾಡಿ ಎಂದು ಫೋನ್ ನಂಬರ್ ನೀಡಿದ್ದಾರೆ.. ಆದರೆ ಇದು ಹಾಸ್ಯಾಸ್ಪದವಾಗಿದೆ.ತಮ್ಮ ಕೈಯಲ್ಲಿಯೇ ಆಡಳಿತ ಇಟ್ಟುಕೊಂಡು ಅಧಿಕಾರಿಗಳನ್ನು ನಿಯಂತ್ರಣದಲ್ಲಿ ಇಡಲು ಆಗದೇ ಭ್ರಷ್ಟಾಚಾರ ತಡೆಯುವಲ್ಲಿ ಕಾಂಗ್ರೆಸ್ ಸರ್ಕಾರ ಪೂರ್ಣ ವಿಫಲವಾಗಿದೆ ಎಂದು ದೂರಿದರು.

ರಾಜ್ಯದಲ್ಲಿ ಧಾರ್ಮಿಕ ಮತ್ತು ಆರ್ಥಿಕವಾಗಿ ದಿವಾಳಿತನವಾಗಿದೆ. ಗ್ಯಾರೆಂಟಿಯಿಂದ ಆರ್ಥಿಕವಾಗಿ ದಿವಾಳಿಯಾದರೆ.. ಧರ್ಮಸ್ಥಳದ ಪ್ರಕರಣದ ಹಿನ್ನೆಲೆಯಲ್ಲಿ ಧಾರ್ಮಿಕವಾಗಿ ದಿವಾಳಿತನವಾಗಿದೆ.ಹಿಂದೂಗಳ ಭಾವನೆಗೆ ಧಕ್ಕೆ ತರುವಂತಹ ಕಾರ್ಯವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ.. ಯಾವುದೇ ಸಾಕ್ಷಿಗಳಿಲ್ಲದೇ ಧರ್ಮಸ್ಥಳ ಪ್ರಕರಣವನ್ನು ಎಸ್‍ಐಟಿಗೆ ವಹಿಸಿರುವುದು ಸರಿಯಲ್ಲ.. ಇದರಿಂದ ಹಿಂದೂಗಳ ಭಾವನೆಗೆ ಅಘಾತವನ್ನುಂಟು ಮಾಡಿದ್ದಾರೆ.ಈಗ ಹೊಸದಾಗಿ ಬಂದಿರುವ ಮುಖ್ಯಮಂತ್ರಿಗಳು ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಗೆ ಹೊಸದಾಗಿ ಅರ್ಜಿಯನ್ನು ಹಾಕುವಂತೆ ಹೇಳುವುದರ ಮೂಲಕ ಫಲಾನುಭವಿಗಳಲ್ಲಿ ಗೊಂದಲವನ್ನು ಉಂಟು ಮಾಡಿದ್ದಾರೆ ಎಂದರು.

ಕಳೆದ 03 ವರ್ಷಗಳಿಂದ ನಡೆಯುತ್ತಿರುವ ಯೋಜನೆಗೆ ರಾಜ್ಯದಲ್ಲಿ ಲಕ್ಷಾಂತರ ಜನ ಫಲಾನುಭವಿಗಳು ಇದ್ದಾರೆ. ಆದ್ದರಿಂದ ಈಗ ಪುನಃ ಅರ್ಜಿಯನ್ನು ಪಡೆಯುವುದು ಎಷ್ಟು ಸರಿ ? ತಮ್ಮ ಅಧಿಕಾರಿಗಳಿಂದ ಅನರ್ಹ ಫಲಾನುಭವಿಗಳನ್ನು ಹೊರತೆಗೆದು ಆರ್ಹ ಫಲಾನುಭವಿಗಳಿಗೆ ಯೋಜನೆಯನ್ನು ಮುಂದುವರಿಸ ಬಹುದಾಗಿದೆ.ಆದರೆ ಈ ರೀತಿ ಮಾಡದೇ ಈ ಯೋಜನೆಯನ್ನು ಸ್ಥಗಿತಗೊಳಿಸುವ ಹಿನ್ನೆಲೆಯಲ್ಲಿ ಸರ್ಕಾರ ಕುಂಟನೆಪವನ್ನು ಹೇಳುತ್ತಾ ಫಲಾನುಭವಿಗಳ ದಾರಿ ತಪ್ಪಿಸುತ್ತಿದೆ.ಇದೇ ರೀತಿ ಮುಂದುವರೆದರೆ ನಮ್ಮ ಪಕ್ಷದ ವತಿಯಿಂದ ಹೋರಾಟವನ್ನು ರೂಪಿಸಲಾಗುವುದು ಎಂದು ಸರ್ಕಾರವನ್ನು ಎಚ್ಚರಿಸಿದರು.

ಗೋಷ್ಟಿಯಲ್ಲಿ ಆಮ್ ಆದ್ಮಿ ಪಾರ್ಟಿಯ ರಾಮಣ್ಣ, ಲೋಕೇಶ್, ಸುಧಾಕರ್, ನಾಗರಾಜು ಉಪಸ್ಥಿತರಿದ್ದರು.

Follow the ಸಮಗ್ರ ಸುದ್ದಿ Telegram Channel: https://t.me/SamagraSuddi

ಸಮಗ್ರ ಸುದ್ದಿ channel on WhatsApp:

https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *