
Headless Chicken : ಯಾವುದೇ ಮನುಷ್ಯ ಅಥವಾ ಪ್ರಾಣಿ ತಲೆ ಇಲ್ಲದೆ ಬದುಕಲು ಸಾಧ್ಯವೇ ಇಲ್ಲ. ಆದರೆ ಇಂತಹ ಪವಾಡ ಸುಮಾರು 80 ವರ್ಷಗಳ ಹಿಂದೆ ಸಂಭವಿಸಿದೆ. ಇದು ವಿಚಿತ್ರವೆನಿಸಬಹುದು, ಆದರೆ ಸತ್ಯ. ಅಮೆರಿಕದ ಕೊಲೊರಾಡೋದಲ್ಲಿರುವ ಕೋಳಿಯೊಂದು 18 ತಿಂಗಳು ತಲೆಯಿಲ್ಲದೆ ಬದುಕುವ ಮೂಲಕ ಇತಿಹಾಸ ನಿರ್ಮಿಸಿದೆ.

ಈ ವಿಶಿಷ್ಟ ಕೋಳಿಯ ಹೆಸರು ‘ಮೈಕ್’, ಜನರು ‘ತಲೆಯಿಲ್ಲದ ಕೋಳಿ’ ಅಂತ ಕರೆಯುತ್ತಾರೆ.
ಹೌದು.. ಇದು ಸೆಪ್ಟೆಂಬರ್ 1945 ರ ಘಟನೆ. ಅಮೆರಿಕದ ಕೊಲೊರಾಡೋದ ನಿವಾಸಿಗಳಾದ ಲಾಯ್ಡ್ ಓಲ್ಸನ್ ಮತ್ತು ಅವರ ಪತ್ನಿ ಕ್ಲಾರಾ ಚಿಕನ್ ಶಾಪ್ ಇಟ್ಟುಕೊಂಡಿದ್ದರು. ಪ್ರತಿನಿತ್ಯ ನೂರಾರು ಕೋಳಿಗಳನ್ನು ಕೊಂದು ಅದರ ಮಾಂಸ ಮಾರಾಟ ಮಾಡುತ್ತಿದ್ದರು. ಹೀಗೆ ಒಂದು ದಿನ ಲಾಯ್ಡ್ ಕೋಳಿಯ ತಲೆ ಕತ್ತರಿಸಿದ್ದ, ವಿಚಿತ್ರ ಅಂದ್ರೆ ಅದು ಸಾಯದೇ ನಡೆಯಲು ಪ್ರಾರಂಭವಿಸಿತು. ಈ ದೃಶ್ಯವನ್ನು ನೋಡಿ ಓಲ್ಸನ್ ಕುಟುಂಬ ಆಘಾತಕ್ಕೊಳಗಾಯಿತು.

ಓಲ್ಸನ್ ಮೈಕ್ ಈ ಕೋಳಿಯ ಆರೈಕೆ ಮಾಡಲು ಪ್ರಾರಂಭಿಸಿದ. ಅದಕ್ಕೆ ಟ್ಯೂಬ್ ಮೂಲಕ ನೀರು ಮತ್ತು ಆಹಾರವನ್ನು ನೀಡುತ್ತಿದ್ದ. ಮೈಕ್‌ನ ಶ್ವಾಸನಾಳದಲ್ಲಿ ಸಂಗ್ರಹವಾಗಿದ್ದ ಲೋಳೆಯನ್ನು ತೆಗೆದುಹಾಕಲು ಸಿರಿಂಜ್ ಅನ್ನು ಸಹ ಬಳಸಲಾಯಿತು. ಮೈಕ್‌ನ ಪವಾಡದ ಬಗ್ಗೆ ಸುತ್ತಮುತ್ತಲಿನ ಜನರಿಗೆ ತಿಳಿದಾಗ, ಆ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಯಿತು..

ಈ ಕೋಳಿಯನ್ನು ನೋಡಲು ದೂರದೂರದಿಂದ ಜನರು ಬರಲು ಪ್ರಾರಂಭಿಸಿದರು. ಈ ವಿಶಿಷ್ಟ ಕೋಳಿ ಓಲ್ಸನ್ ಕುಟುಂಬಕ್ಕೆ ಬಹಳಷ್ಟು ಹಣವನ್ನು ಗಳಿಸಿಕೊಟ್ಟಿತು. ಅವರ ಜೀವನವನ್ನು ಸುಧಾರಿಸಿತು. ಏಪ್ರಿಲ್ 1947 ರ ಒಂದು ರಾತ್ರಿ, ಮೈಕ್ ಅರಿಜೋನಾದ ಫೀನಿಕ್ಸ್‌ನಲ್ಲಿ ಪ್ರವಾಸದಲ್ಲಿದ್ದಾಗ, ಅವರಿಗೆ ಉಸಿರಾಟದ ತೊಂದರೆ ಶುರುವಾಯಿತು.
ಓಲ್ಸನ್ ಕುಟುಂಬವು ತಕ್ಷಣವೇ ಸಿರಿಂಜ್ ಅನ್ನು ಹುಡುಕಲು ಪ್ರಯತ್ನಿಸಿತು, ಆದರೆ ದುರದೃಷ್ಟವಶಾತ್ ಅವರ ಬಳಿ ಅದು ಇರಲಿಲ್ಲ. ಪರಿಣಾಮವಾಗಿ, ಮೈಕ್ ಕಫ ಸಂಗ್ರಹವಾಗಿ ಉಸಿರುಗಟ್ಟಿ ಸಾವನ್ನಪ್ಪಿತು. ಓಲ್ಸನ್ ಇದನ್ನು ವರ್ಷಗಳ ಕಾಲ ರಹಸ್ಯವಾಗಿಟ್ಟಿದ್ದರು, ತಾನು ಮೈಕ್ ಅನ್ನು ಬೇರೆಯವರಿಗೆ ಮಾರಾಟ ಮಾಡಿದ್ದೇನೆ ಎಂದು ಜನರಿಗೆ ಹೇಳುತ್ತಿದ್ದರು. ಆದರೆ ನಂತರ ಸತ್ಯ ಹೊರಬಂದಿತು.
ಮೈಕ್ ಸ್ಮರಣಾರ್ಥ ಕೊಲೊರಾಡೋದ ಫ್ರೂಟಾ ಪಟ್ಟಣದಲ್ಲಿ ‘ಮೈಕ್ ದಿ ಹೆಡ್‌ಲೆಸ್ ಚಿಕನ್ ಫೆಸ್ಟಿವಲ್’ ಅನ್ನು ವಾರ್ಷಿಕವಾಗಿ ಆಚರಿಸಲಾಗುತ್ತದೆ. ವಿಜ್ಞಾನಿಗಳ ಪ್ರಕಾರ, ಕೋಳಿಯ ಮೆದುಳು ಹಿಂಭಾಗದಲ್ಲಿದೆ. ಓಲ್ಸನ್ ಮೈಕ್ ನ ಶಿರಚ್ಛೇದ ಮಾಡಿದಾಗ, ಅವನ ಮೆದುಳು ಮತ್ತು ಗಂಟಲಿನ ಒಂದು ಭಾಗ ಹಾಗೆಯೇ ಉಳಿದು, ಇದು ಕೋಳಿಗೆ ಬದುಕುಳಿಯಲು ಅವಕಾಶ ಮಾಡಿಕೊಟ್ಟಿತು. ಅದೃಷ್ಟವಶಾತ್, ರಕ್ತದ ಹರಿವು ಕೂಡ ಬೇಗನೆ ನಿಂತುಹೋಯಿತು, ಆದ್ದರಿಂದ ಅತಿಯಾದ ರಕ್ತಸ್ರಾವದಿಂದ ಸಾಯಲಿಲ್ಲ ಎಂದು ಹೇಳುತ್ತಾರೆ.
Source:Zee kannada News
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1