ಚಿತ್ರದುರ್ಗ ಜೆಡಿಎಸ್‌ಗೆ ನೂತನ ಅಧ್ಯಕ್ಷರ ಪದಗ್ರಹಣ ಫೆ.23ಕ್ಕೆ: ಕೆ. ಮಂಜುನಾಥ್, ಸಣ್ಣ ತಿಮ್ಮಪ್ಪ ಅಧಿಕಾರ ಸ್ವೀಕಾರ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಫೆ. 21

ಜಿಲ್ಲಾ ಜೆಡಿಎಸ್ ಘಟಕಕ್ಕೆ ನೂತನವಾಗಿ ಅಧ್ಯಕ್ಷರು ಹಾಗೂ ತಾಲ್ಲೂಕು ಅಧ್ಯಕ್ಷರು ಆಯ್ಕೆಯಾಗಿದ್ದು ಇವರ ಪದಗ್ರಹಣ ಸಮಾರಂಭವೂ ಫೆ. 23ರ ಸೋಮವಾರ ಬೆಳಿಗ್ಗೆ 11ಕ್ಕೆ ನಗರದ ಜೆಡಿಎಸ್, ಕಚೇರಿಯಲ್ಲಿನ ಹೆಚ್,ಡಿ,ದೇವೇಗೌಡ ಭವನದ ಹಮ್ಮಿಕೊಳ್ಳಲಾಗಿದೆ ಎಂದು ಚಿತ್ರದುರ್ಗ ಜಿಲ್ಲಾ ಜೆ ಡಿ ಎಸ್ ಘಟಕದ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಡಿ. ಗೋಪಾಲ ಸ್ವಾಮಿ ನಾಯಕ ತಿಳಿಸಿದ್ದಾರೆ.

ಜಿಲ್ಲಾ ಜೆಡಿಎಸ್ ಘಟಕಕ್ಕೆ ನೂತನ ಅಧ್ಯಕ್ಷರಾಗಿ ಕೆ. ಮಂಜುನಾಥ ಮತ್ತು ಚಿತ್ರದುರ್ಗ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಸಣ್ಣ ತಿಮ್ಮಪ್ಪ ನೇಮಕವಾಗಿದ್ದಾರೆ.

ಫೆ. 23ರ ರ ಸೋಮುವಾರ ಬೆಳಗ್ಗೆ 11 ಗಂಟೆಗೆ ಪದಗ್ರಹಣ ಸಮಾರಂಭ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ ಕಾಂತರಾಜ್, ಜಿಲ್ಲಾ ಜೆ ಡಿಎಸ್‍ಘಟಕದ ಮಾಜಿ ಅಧ್ಯಕ್ಷರಾದ ಡಿ ಯಶೋಧರ್, ಎಂ ಜಯಣ್ಣ, ಜಿಲ್ಲಾ ಜೆಡಿಎಸ್ ಕಾರ್ಯಧ್ಯಕ್ಷ ರಾದ ಜಿಬಿ ಶೇಖರ್, ಮಠದ ಹಟ್ಟಿವೀರಣ್ಣ ನಗರಸಭೆಯ ಮಾಜಿ ಸದಸ್ಯರಾದ ಚಂದ್ರಶೇಖರ್, ನಸುರುಲ್ಲಾ, ದೀಪಕ್, ತಿಪ್ಪೇಸ್ವಾಮಿ, ಪ್ರತಾಪ್‍ಜೋಗಿ, ಅಬ್ಬು ಲಲಿತಾ ಕೃಷ್ಣಮೂರ್ತಿ ಗೀತಮ್ಮ ನಿಜಲಿಂಗಪ್ಪ, ಲಿಂಗ ರಾಜು, ಮಂಜುನಾಥ ಜಾಲಿಕಟ್ಟೆ ರುದ್ರಣ್ಣ ಚಿದಾನಂದ ಮತ್ತು ಜಿಲ್ಲೆಯ ನೂತನ ತಾಲ್ಲೂಕು ಘಟಕದ ಅಧ್ಯಕ್ಷರು ಮತ್ತು ಪರಾಜಿತ ಅಭ್ಯರ್ಥಿಗಳಾದ ರವೀಂದ್ರಪ್ಪ ರವೀಶ್, ವೀರಭದ್ರಪ್ಪ, ಶಿವಶಂಕರ ಯಾದವ್ ಶಿವಪ್ರಸಾದ್ ಗೌಡ ಮತ್ತು ಪಕ್ಷದ ವಿವಿಧ ಘಟಕದ ಪದಾಧಿಕಾರಿಗಳು ಪಕ್ಷದ ಕಾರ್ಯಕರ್ತರು ಭಾಗವಹಿಸುವಂತೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *