ಚಿತ್ರದುರ್ಗ: ವೇತನ ಹೆಚ್ಚಳ, ಸಾಮಾಜಿಕ ಭದ್ರತೆ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಅಂಗನವಾಡಿ ನೌಕರರ ಬೃಹತ್ ಪ್ರತಿಭಟನೆ.

ಚಿತ್ರದುರ್ಗ ಜು. 10

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ ಆದರೂ 2018 ರಿಂದ ಗೌರವಧನದಲ್ಲಿ ಒಂದು ಪೈಸೆಯೂ ಹೆಚ್ಚಿಸಿಲ್ಲ. ಅಂಗನವಾಡಿ ನೌಕರರನ್ನು ಇನ್ನೂ ಕಾರ್ಮಿಕರಾಗಿ ಇರುವ ಹಕ್ಕುಗಳನ್ನು ಪರಿಗಣಿಸದೇ ಕಾನೂನುಗಳ ವ್ಯಾಪ್ತಿಗೂ ತರಲಾಗಿಲ್ಲ ಮೊಟಕುಗೊಳಿಸ ಲಾಗುತ್ತಿದೆ. ಅಲ್ಲದೆ 50 ವರ್ಷ ಯೋಜನೆಯ ಬಲವರ್ಧನೆಗಾಗಿ ದುಡಿದ ಅಂಗನವಾಡಿ ನೌಕರರಿಗೆ 45ನೇ ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸ್ಸಿನಂತೆ ಕನಿಷ್ಠ ಕೂಲಿ ಜಾರಿ ಮಾಡಲಿಲ್ಲ ರಾಜ್ಯ ಸರ್ಕಾರವಾದರೂ ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದಂತೆ ಕಾರ್ಯಕರ್ತೆಗೆ 15,000 ಸಹಾಯಕಿಯರಿಗೆ 10,000 ವೇತನ ಹೆಚ್ಚಳಮಾಡಬೇಕು ಮತ್ತು ನಮ್ಮ ಹಕ್ಕುಗಳ ಉಳಿವಿಗಾಗಿ ಸಾಮಾಜಿಕ ಭದ್ರತೆಗಾಗಿ, ಇನ್ನಿತರೆ ಬೇಡಿಕೆಗಳಿಗಾಗಿ ಒತ್ತಾಯಿಸಿ ಇಂದು ಅಂಗನವಾಡಿ ನೌಕರರು ಹೋರಾಟ ನಡೆಸಿದರು.

ಚಿತ್ರದುರ್ಗ ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆಯನ್ನು ನಡೆಸಿದ ಅಂಗನವಾಡಿ ಕಾರ್ಯಕರ್ತೆ ಯರು ಮತ್ತು ಸಹಾಯಕಿಯರು, ಲಕ್ಷಾಂತರ ಫಲಾನುಭವಿಗಳು ಸೌಲಭ್ಯದಿಂದ ಸೇರಿದಂತೆ ಹೆಚ್ಚುವರಿ ಕೆಲಸದ ಒತ್ತಡ ಕಾರ್ಯಕರ್ತೆಯರ ಮೇಲೆ ಹೇರಲಾಗುತ್ತಿದೆ. ರಾಜ್ಯ ಸರ್ಕಾರದ ಚುನಾವಣೆ ಭರವಸೆಯಂತೆ 2026-ಮಾರ್ಚ್-23-24 ರ ಸಭೆಯ ಚರ್ಚೆಯಂತೆ 15,000 ಕಾರ್ಯಕರ್ತೆ 10,000 ಸಹಾಯಕಿಗೆ ಜಾರಿ ಮಾಡಬೇಕು. ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಐಏಉ-Uಏಉ ವಿಸ್ತರಣೆ ಆಗಬೇಕು. 2026 ಮಾರ್ಚ್-24 ರ ಸಭೆಯ ತೀರ್ಮಾನದಂತೆ 10,000 ಕೇಂದ್ರಗಳಲ್ಲಿ ಐಏಉ-Uಏಉ ಪ್ರಾರಂಭಿಸಲು ಅನುದಾನ ನೀಡಬೇಕು. 3-6 ವರ್ಷದ ಮಕ್ಕಳಿಗೆ ಆರಂಭಿಕ ಬಾಲ್ಯ ಆರೈಕೆ, ಶಿಕ್ಷಣ ಮತ್ತು ಅಭಿವೃದ್ಧಿ ಹಕ್ಕನ್ನು ಕಾನೂನಿನ ಮೂಲಕ ಖಾತರಿಪಡಿಸಬೇಕು. 2011 ರಿಂದ ನಿವೃತ್ತಿ ಆದವರಿಗೆ ಗ್ರಾಚ್ಯುಟಿ ಪಾವತಿಸಬೇಕು ಎಂದು ಒತ್ತಾಯಿಸಲಾಯಿತು.

3-6 ವರ್ಷದ ಮಕ್ಕಳಿಗೆ ಸಮವಸ್ತ್ರ, ಪುಸ್ತಕಗಳು ಮತ್ತು ಆಟಿಕೆಗಳನ್ನು ಒದಗಿಸಬೇಕು. 3 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ ಎಲ್ಲಾ ಅಂಗನವಾಡಿಗಳನ್ನು ಅಂಗನವಾಡಿ-ಕಮ್-ಶಿಶುಪಾಲನಾ ಕೇಂದ್ರಗಳಾಗಿ ಪರಿವರ್ತಿಸಬೇಕು. ಃಐಔ, SIಖ ಹಾಗೂ ಇತರೆ ಸಮೀಕ್ಷಾ ಕೆಲಸಗಳಿಂದ ಮುಕ್ತಗೊಳಿಸಬೇಕು. ಅಂಗನ ವಾಡಿ ನೌಕರರನ್ನು ಬಿಎಲ್‍ಓ ಕೆಲಸದಿಂದ ಸಂಪೂರ್ಣ ಕೈಬಿಡಬೇಕು. 50 ವರ್ಷ ಮೇಲ್ಪಟವರನ್ನು, ಸಹಾಯಕಿ ಇಲ್ಲದಿದ್ದಾರೆ ಐಏಉ-Uಏಉ ಗೆ ಆಯ್ಕೆಯಾದ, ತೀವ್ರ ಖಾಯಿಲೆ ಇರುವವರನ್ನು ಃಐಔ ಯಿಂದ ಬಿಡುಗಡೆ ಮಾಡಬೇಕು ಇಲಾಖೇತರ ಯಾವುದೇ ಕೆಲಸಗಳನ್ನು ನೀಡಬಾರದು. ‘ಪೋಷಣ್ ಟ್ರ್ಯಾಕರ್’ ಹೆಸರಿನಲ್ಲಿ ಕಿರುಕುಳ ನಿಲ್ಲಿಸಬೇಕು. ಮೊಬೈಲ್, ಡೇಟಾ ಹಾಗೂ ನಿರ್ವಹಣಾ ವೆಚ್ಚಗಳನ್ನು ಮರುಪಾವತಿ ಸಬೇಕು. ಡಿಜಿಟಲೀಕರಣವನ್ನು ಮೇಲ್ವಿಚಾರಣೆ ಅಥವಾ ಕಿರುಕುಳದ ಸಾಧನವಾಗಿ ಬಳಸಬಾರದು. ಡಿಜಿಟಲ್ ಕೆಲಸಕ್ಕಾಗಿ ಉತ್ತಮ ಗುಣಮಟ್ಟದ ಟ್ಯಾಬ್ಲೆಟ್‍ಗಳು ಮತ್ತು ಡೇಟಾ ಪ್ಯಾಕ್‍ಗಳನ್ನು ಒದಗಿಸಬೇಕು. ಈಖS ಮತ್ತು ಇ-ಏಙಅ ಕಡ್ಡಾಯ ಎನ್ನುವುದನ್ನು ಹಿಂಪಡೆಯಬೇಕು ಎಂದು ಆಗ್ರಹಿಸಲಾಯಿತು.

ಕೇಂದ್ರ ಸರ್ಕಾರ IಅಆS ಗೆ ನೀಡುತಿದ್ದ ಅನುದಾನವನ್ನು ಬೆಲೆಯೇರಿಕೆಗೆ ತಕ್ಕ ಹಾಗೆ ಹೆಚ್ಚಳ ಮಾಡದೆ ನಿರಂತರವಾಗಿ ಕಡಿಮೆ ಮಾಡುತ್ತಿದೆ. ಅಲ್ಲದೆ 2017 ರಿಂದ ಪೌಷ್ಠಿಕ ಆಹಾರಕ್ಕೆ ನೀಡಬೇಕಾದ ಘಟಕ ವೆಚ್ಚ ಹೆಚ್ಚಳ ಮಾಡದೇ ಅಂಗನವಾಡಿ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿದೆ. ಮತ್ತೊಂದೆಡೆ ರಾಷ್ಟ್ರೀಯ ಶಿಕ್ಷಣ ನೀತಿ 2020 ಜಾರಿ ಮಾಡಿದ್ದರಿಂದ 3 ರಿಂದ 6 ವರ್ಷದ ಮಕ್ಕಳನ್ನು ಅಂಗನವಾಡಿಗಳಿಂದ ದೂರವಿಟ್ಟು ಸರ್ಕಾರಿ ಶಾಲೆಗಳಲ್ಲಿ ಐಏಉ-Uಏಉ ಪ್ರಾರಂಭಿಸಲಾಗುತ್ತಿದೆ. ಇದರಿಂದ ಅಂಗನವಾಡಿ ಕೇಂದ್ರದಲ್ಲಿ ಫಲಾನುಭವಿಗಳ ಸಂಖ್ಯೆ ಇಳಿಮುಖವಾಗುತ್ತಿದೆ. ರಾಜ್ಯದಲ್ಲಿ 10 ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಐಏಉ-Uಏಉ ತೆಗೆಯುವುದಾಗಿ 23-24-ಮಾರ್ಚ್-2026 ರ ಸಭೆಯಲ್ಲಿ ಹೇಳಿದ ರಾಜ್ಯ ಸರ್ಕಾರವೂ ಅದಕ್ಕೆ ಬೇಕಾದ ಅನುದಾನ ಬಿಡುಗಡೆ ಮಾಡಲಿಲ್ಲ. ಶಾಲಾಪೂರ್ವ ಶಿಕ್ಷಣ ವ್ಯವಸ್ಥೆಗೆ ಸೇರಿಸಲಾಗುತ್ತಿದೆ. ಅಲ್ಲದೆ ಪಲಾನುಭವಿಗಳಿಗೆ ನೀಡುವ ಪೌಷ್ಠಿಕ ಆಹಾರ ಸ್ಥಳೀಯ ತಾಜಾ ಆಹಾರದ ಬದಲಿಗೆ ಸಂಸ್ಕರಿಸಿದ ಪ್ಯಾಕೇಟ್ ಆಹಾರ, ನಗದು ವರ್ಗಾವಣೆ, ಕೇಂದ್ರಿಕೃತ ಕಾರ್ಪೋರೇಟ್ ಅಡಿಗೆ ಮನೆಗಳು ಹಾಗೂ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ಹೆಸರಲ್ಲಿ ಕೂಸಿನ ಮನೆಗಳ ಮೂಲಕ IಅಆS ಖಾಸಗೀಕರಣ ಮಾಡಲು ಮುಂದಾಗಿದೆ. ಈಖS, ಇ-ಏಙಅ, ಪೋಷಣ್ ಟ್ರ್ಯಾಕರ್, ಆನ್‍ಲೈನ್ ಕೆಲಸಗಳನ್ನು ಗುಣಮಟ್ಟದ ಮೊಬೈಲ್, 5ಉ ಡಾಟಾ ಕೇಂದ್ರಗಳಿಗೆ WI-ಈI ನೀಡದೇ ಕೆಲಸ ಮಾಡಲು ಒತ್ತಡ ಹೇರಲಾಗುತ್ತಿದೆ. ಔಖಿP ಹಾಕುವುದರಿಂದ ಲಕ್ಷಾಂತರ ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ರಾಜ್ಯ ಸರ್ಕಾರ ಹೊಸದಾಗಿ ತೆರೆದಿರುವ 3,950 ಕೇಂದ್ರಗಳಿಗೆ ರಾಜ್ಯ ಸರ್ಕಾರವೇ ಮೂಲಭೂತ ಸೌಲಭ್ಯ, ಆಹಾರ ಸರಬರಾಜು ಒದಗಿಸಬೇಕು ಬೇರೆ ಕೇಂದ್ರಗಳಿಗೆ ಫಲಾನುಭವಿಗಳ ಸ್ಥಳಾಂತರಿಸಬಾರದು ಎಂದರು.

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷರಾದ ಇಂದಿರಮ್ಮ, ಖಜಾಂಚಿ ಬಿ.ಬೋರಮ್ಮ, ಸಹ ಕಾರ್ಯದರ್ಶಿ ಅನುಸೂಯಮ್ಮ, ಪ್ರಧಾನ ಕಾರ್ಯದರ್ಶಿ ನಿರ್ಮಲಮ್ಮ ಸಂಘದ ಮುಖಂಡರಾದ ಟಿ.ತಿಪ್ಪೇಸ್ವಾಮಿ, ಡಿ.ಎಂ. ಮಲಿಯಪ್ಪ, ಜೆ.ಎನ್.ಗಂಗಮ್ಮ, ಸಿಬ, ಜಿ.ಗಂಗಮ್ಮ, ಮಂಜುಳಾ. ಪುಟ್ಟಮ್ಮ ಸಿ. ಜಯಮ್ಮ ಭಾಗವಹಿಸಿದ್ದರು.

Follow the ಸಮಗ್ರ ಸುದ್ದಿ Telegram Channel: https://t.me/SamagraSuddi

ಸಮಗ್ರ ಸುದ್ದಿ channel on WhatsApp: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *