ಸಮಗ್ರ ಸುದ್ದಿ ಚಿತ್ರದುರ್ಗ ಸೆ. 23
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಚಿತ್ರದುರ್ಗ ನಗರದ ಆನೆ ಬಾಗಿಲ ಬಳಿ ಇರುವ ಶ್ರೀ ಅಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿವತಿಯಿಂದ 69ನೇ ವರ್ಷದ ಶ್ರೀ ಪ್ರಸನ್ನ ಗಣಪತಿಯ ಪೂಜಾ ಮಹೋತ್ಸ ವದ ಅಂಗವಾಗಿ ಸೆ. 14 ರಿಂದ ಶ್ರೀ ಪ್ರಸನ್ನ ಗಣಪತಿಯ ಪೂಜಾ ಕಾರ್ಯಕ್ರಮ ನಡೆಯುತ್ತಿದ್ದು, ಬುಧ ವಾರದ ಇಂದು ಶ್ರೀ ಗಣಪತಿ ಅಭೀಷೇಕ ನವಗ್ರಹ ಪುರಸ್ಸರ ಸಹಸ್ರ ಮೋದಕ ಗಣಹೋಮ..
ಪೂರ್ಣಹುತಿ ಕಾರ್ಯಕ್ರಮ ನಡೆಸಲಾಯಿತು. ಸೆ.14 ರಿಂದ ಪ್ರಾರಂಭವಾದ 69ನೇ ವರ್ಷದ ಶ್ರೀ ಪ್ರಸನ್ನ ಗಣಪತಿಯ ಪೂಜಾ ಕಾರ್ಯಕ್ರಮವೂ ಸೆ. 24ರವರೆಗೆ ನಡೆಯಲಿದೆ, ಪ್ರತಿ ದಿನ ಗಣಪತಿಗೆ ನವಗ್ರಹ ಹೋಮ, ಸಹಸ್ರನಾಮ ಕುಂಕುಮಾರ್ಚನೆ, ಮಹಾ ಮಂಗಳಾರತಿ ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆದಿದ್ದು, ಸೆ.15 ರಿಂದ 23ರವರೆಗೆ ಪ್ರತಿ ದಿನ ಸಂಜೆ 6 ಗಂಟೆಯಿಂದ ವಿವಿಧ ರೀತಿಯ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದಿವೆ.
ಸೆ, 23ರ ಇಂದು ಶ್ರೀ ಗಣಪತಿ ಅಭೀಷೇಕ ನವಗ್ರಹ ಪುರಸ್ಸರ ಸಹಸ್ರ ಮೋದಕ ಗಣಹೋಮ. ಬೆಳಿಗ್ಗೆ 8.30ರಿಂದ ಪ್ರಾರಂಭವಾಗಿ ಮಧ್ಯಾಹ್ನ 1.30ಕ್ಕೆ ಪೂರ್ಣಹುತಿ ನಡೆಯಿತು. ಗಣ ಹೋಮವನ್ನು ದೇವಸ್ಥಾನದ ಪ್ರಧಾನ ಅರ್ಚಕರಾದ ವಿದ್ಯಾಸಾಗರ್ ಶರ್ಮ ನೇತೃತ್ವದಲ್ಲಿ ಮುನ್ನೇಕೋಟೆಯ ಪ್ರಾಣೇಶ ಮೂರ್ತಿ, ಅನ್ನಪೂಣೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶಂಕರ್ ಭಟ್ ಇವರ ಮಾರ್ಗದರ್ಶನದಲ್ಲಿ ನಡೆಸಲಾಯಿತು. ಆಗಮಿಸಿದ್ದ ಭಕ್ತಾಧಿಗಳಿಗೆ ಪ್ರಸಾದವನ್ನು ವಿತರಣೆ ಮಾಡಲಾಯಿತು.
ಸಂಜೆ ಕಿರಣ ಮತ್ತು ಕಲಾ ತಂಡ, ನಾಟ್ಯ ರಂಜನಿ ನೃತ್ಯ ಕಲಾ ಕೇಂದ್ರದಿಂದ ಚಿಣ್ಣರ ನೃತ್ಯ ಕಲರವ ಶಾಸ್ತ್ರೀಯ ನೃತ್ಯ ವಿಶೇಷ ನೃತ್ಯ ರೂಪಕ ಮಹಿಷಾಸುರ ಮರ್ಧಿನಿ ಪ್ರದರ್ಶನವಾಯಿತು. ಸೆ, 24ರ ಸಂಜೆ 6 ಗಂಟೆಯಿಂದ ಸಕಲ ದೇವ ಮರ್ಯಾದೆಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಎಸ್.ಗುರುಮೂರ್ತಿಯವರ ಶ್ರೀ ಶಾರದ ಬ್ರಾಸ್ ಬ್ಯಾಂಡ್ ತಂಡದೊಂದಿಗೆ ವಾದ್ಯಗೋಷ್ಟಿಯು ಶ್ರೀ ಪ್ರಸನ್ನ ಗಣಪತಿ ಉತ್ಸವದಲ್ಲಿ ನಡೆಯಲಿದ್ದು, ರಾತ್ರಿ 10.30ಕ್ಕೆ ಚಂದ್ರವಳ್ಳಿ ಕರೆಯಲ್ಲಿ ಗಣಪತಿಯನ್ನು ಉದ್ಘಾಸನೆ ಕಾರ್ಯಕ್ರಮ ನಡೆಯಲಿದೆ.
ಈ ಸಂದರ್ಭದಲ್ಲಿ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಜೆ.ಗೋಪಾಲರಾವ್ ಜಾಧª ಅಧ್ಯಕ್ಷರಾದ ಎಲ್.ಎನ್.ರಾಜಕುಮಾರ್, ಉಪಾಧ್ಯಕ್ಷರಾದ ಎ.ಎಸ್.ನಾರಾಯಣರಾವ್, ಕೆ.ವಿ.ಆನಂದ್, ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಂ. ನಾಗರಾಜ್ ಬೇದ್ರೇ, ಖಂಜಾಚಿ ಸಿ.ಶ್ಯಾಂ ಪ್ರಸಾದ್ ಸ್ಥಪತಿ, ಸಹ ಕಾರ್ಯದರ್ಶಿ ಡಿ.ಆರ್.ಮಂಜುನಾಥ್, ಸಹ ಕಾರ್ಯದರ್ಶಿ ಎನ್.ವಿ.ರಮೇಶ್ ಕುಮಾರ್, ಸಂಘಟನಾ ಕಾರ್ಯದರ್ಶಿ ಜೆ.ಎಸ್.ಶಂಭು, ನಿರ್ದೇಶಕರುಗಳಾದ ಜಿ.ಟಿ.ಗೋಪಾಲಕೃಷ್ಣ ಜಾಧವ್, ಗಜೇಂದ್ರ, ಸಿದ್ದಲಿಂಗೇಶ್ ಜಿ. ಕೆ. ಟಿ. ಯಶವಂತಕುಮಾರ್, ಕಾರ್ತಿಕ್ ಕಠಾರೆ, ವಿದ್ಯಾನಂದ ಲಾಡ್, ಕೃಷ್ಣಜಿರಾವ್ ಮೋರೆ, ಉತ್ಸವ ಸಮಿತಿ ಸದಸ್ಯರಾದ ಎ.ಟಿ.ರಮೇಶ್ ಹಾಗೂ ನಾಗವೀವೇಕ್ ಭಾಗವಹಿಸಿದ್ದರು.