
ಚಿತ್ರದುರ್ಗ, (ಫೆ.21) : ತಾಲ್ಲೂಕಿನ ದೊಡ್ಡಸಿದ್ದವ್ವನಹಳ್ಳಿ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಚಿರತೆ ಸಾವನ್ನಪ್ಪಿದೆ.
ಇಂದು (ಮಂಗಳವಾರ) ಮುಂಜಾನೆ ಸಮಯದಲ್ಲಿ ಚಿರತೆ ರಸ್ತೆ ದಾಟುವಾಗ ಅಪರಿಚಿತ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದೆ. ವಿಷಯ ತಿಳಿದ ಕೂಡಲೇ ಪೊಲೀಸರು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಿರತೆ ಸಾವನ್ನಪ್ಪಿದ ವಿಷಯ ತಿಳಿದ ಸುತ್ತಮುತ್ತಲಿನ ಗ್ರಾಮಸ್ಥರು ತಂಡೋಪತಂಡವಾಗಿ ಬಂದು ಅಪಘಾತದಲ್ಲಿ ಸಾವನ್ನಪ್ಪಿದ ಚಿರತೆಯನ್ನು ಕಂಡು ತಮ್ಮ ಮೊಬೈಲ್ ನಲ್ಲಿ ಫೋಟೋ ತೆಗೆಯುತ್ತಿದ್ದದ್ದು ಕಂಡುಬಂತು.
ನಿಟ್ಟುಸಿರು ಬಿಟ್ಟ ಗ್ರಾಮಸ್ಥರು : ರಸ್ತೆ ಅಪಘಾತದಲ್ಲಿ ಚಿರತೆ ಸಾವನ್ನಪ್ಪಿದ್ದೇ ಒಳ್ಳೆಯದಾಯಿತು. ಇಲ್ಲವಾದರೆ ಚಿರತೆ ಗ್ರಾಮಕ್ಕೆ ನುಗ್ಗಿದ್ದರೇ ದನಕರುಗಳು ಅಷ್ಟೇ ಅಲ್ಲದೆ ಮನುಷ್ಯನ ಮೇಲೆ ದಾಳಿ ನಡೆಸುವ ಸಾಧ್ಯತೆ ಇತ್ತು. ಇನ್ನೂ ಏನೇನು ಅನಾಹುತ ಆಗುತ್ತಿತ್ತೋ, ದೇವರು ದೊಡ್ಡವನು ರಸ್ತೆ ದಾಟುವಾಗ ಚಿರತೆ ಸಾವನ್ನಪ್ಪಿದ್ದೇ ಒಳ್ಳೆಯದಾಯಿತು ಎಂದು ನೆರೆದಿದ್ದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟರು.
The post ದೊಡ್ಡಸಿದ್ದವ್ವನಹಳ್ಳಿ ಬಳಿ ರಸ್ತೆ ಅಪಘಾತ : ಚಿರತೆ ಸಾವು first appeared on Kannada News | suddione.
from ಚಿತ್ರದುರ್ಗ – Kannada News | suddione https://ift.tt/NA5W1Ky
via IFTTT