ಚಿತ್ರದುರ್ಗ ಜೂ. 22
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಕರ್ನಾಟಕ ವಿದ್ಯುತ್‍ಚ್ಛಕ್ತಿ ನಿಯಂತ್ರಣ ಆಯೋಗವು ವಿದ್ಯುತ್ ವಿತರಣಾ ಪರವಾನಿಗೆಯನ್ನು ಯಾವುದೇ ಖಾಸಗಿ ಕಂಪನಿಗೆ ಅಥವಾ ಟಾಟಾ ಪವರ್ ಕಂಪನಿಗೆ ನೀಡಬಾರದೆಂದು ಆಗ್ರಹಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದವತಿಯಿಂದ ಪ್ರತಿಭಟನೆಯನ್ನು ನಡೆಸಿ ಜಿಲ್ಲಾಧಿಕಾ ರಿಗಳ ಮೂಲಕ ಕರ್ನಾಟಕ ವಿದ್ಯುತ್‍ಚ್ಛಕ್ತಿ ನಿಯಂತ್ರಣ ಆಯೋಗ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಯಿತು.

ನಗರದ ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಪಾದಯಾತ್ರೆಯನ್ನು ನಡೆಸಿದ ರೈತರು ದಾರಿಯುದ್ದಕ್ಕೂ ಸರ್ಕಾರದ ಈ ಕ್ರಮದ ವಿರುದ್ದ ಘೋಷಣೆಗಳನ್ನು ಕೂಗಿದರು. ಸರ್ಕಾರ ಯಾವುದೇ ಕಾರಣಕ್ಕೂ ಕರ್ನಾಟಕ ವಿದ್ಯುತ್‍ಚ್ಛಕ್ತಿ ನಿಯಂತ್ರಣವನ್ನು ಖಾಸಗಿ ಕಂಪನಿಗೆ ಅಥವಾ ಟಾಟಾ ಪವರ್ ಕಂಪನಿಗೆ ನೀಡಬಾರದೆಂದು ಆಗ್ರಹಿಸಿದರು.
ವಿದ್ಯುತ್ ಚ್ಛಕ್ತಿ ವಿತರಣಾ ವ್ಯವಸ್ಥೆಯನ್ನು ಖಾಸಗಿಯವರಿಗೆ ನೀಡಿದರೆ ಮುಂದೆ ರೈತರು ಕೃಷಿ ಮಾಡಲು ಬಳಸುವ ನೀರಾವರಿ ಪಂಪ್‍ಸೆಟ್‍ಗಳಿಗೆ ಈಗ ನೀಡುತ್ತಿರುವ ವಿದ್ಯುತ್ ರದ್ದಾಗುವ ಸಾಧ್ಯತೆ ಇರುತ್ತದೆ ಹಾಗೂ ನೀರಾವರಿ ಪಂಪ್‍ಸೆಟ್‍ಗಳಿಗೆ ಮೀಟರ್ ವ್ಯವಸ್ಥೆ ಜಾರಿ ಮಾಡಿ ಶುಲ್ಕ ನಿಗದಿ ಮಾಡುತ್ತಾರೆ ಇದು ರೈತರ ಮೇಲೆ ಹೊರೆಯಾಗಿ ರೈತರು ಆತ್ಮಹತ್ಯೆದಾರಿ ಹಿಡಿಯಬೇಕಾಗುತ್ತದೆ. ಟಾಟಾ ಪವರ್ ಕಂಪನಿಗೆ ಆಗಲಿ ಇನ್ಯಾವುದೇ ಖಾಸಗಿ ಕಂಪನಿಗೆ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ನೀಡಿದರೆ ಇದು ವಿದ್ಯುತ್ ವಲಯದ ಖಾಸಗೀಕರಣಕ್ಕೆ ನಾಂದಿಯಾಗಲಿದ್ದು ಭವಿಷ್ಯದಲ್ಲಿ ಸಾರ್ವಜನಿಕರ ಮೇಲೆ ಹಾಗೂ ರೈತರ ಮೇಲೆ ಉಚಿತ ವಿದ್ಯುತ್ ಯೋಜನೆಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ.ಖಾಸಗಿ ಕಂಪನಿಗೆ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ನೀಡಿದರೆ ವಿದ್ಯುತ್ ಎನ್ನುವುದು ಖಾಸಗೀಕರಣ ವಾದಂತೆ ಇದರಿಂದ ಬಡಜನರಿಗೆ ಸಿಗುತ್ತಿರುವ ಉಚಿತ ಗೃಹ ಜ್ಯೋತಿ ಯೋಜನೆಗಳು ರದ್ದಾಗುವ ಸಂಭವವಿರುತ್ತದೆ ಎಂದಿದ್ದಾರೆ.
ಕರೆಂಟ್ ವಿದ್ಯುತ್ ಬಿಲ್ ಏರಿಕೆಯಾಗಿ ಉಚಿತ ವಿದ್ಯುತ್ ಯೋಜನೆಗಳು ರದ್ದಾಗುವ ಸಂಭವವಿರುತ್ತದೆ. ಸರ್ಕಾರಿ ಕಂಪೆನಿಗಳಾದ ಬೆಸ್ಕಾಂ, ಎಸ್ಕಾಂ, ಮೆಸ್ಕಾಂ ಸಿ.ಇ.ಎಸ್.ಸಿ ಕಂಪನಿಗಳಲ್ಲಿರುವ ನೌಕರರಿಗೆ ಮತ್ತು ಅಪರ ಕುಟುಂಬಗಳಿಗೆ ಜೀವನ ನಿರ್ವಹಿಸಲು ತೊಂದರೆಯಾಗುತ್ತದೆ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗಿ ಯವರಿಗೆ ನೀಡಿದೆ ಆದರೆ ಕಾರ್ಪೊರೇಟರ್ ಕಂಪನಿಗಳಿಗೆ ಲೂಟಿ ಮಾಡಿಕೊಳ್ಳಲು ಅವಕಾಶ ಮಾಡಿ ಕೊಟ್ಟಂತಿರುತ್ತದೆ ಹಾಗೂ ರೈತರ ಬದುಕು ನಾಶವಾಗುವ ಸಂಭವವಿರುತ್ತದೆ. ಉಚಿತ ವಿದ್ಯುತ್ಯೋ ಜನೆಗಳು ಕೊನೆಯಾಗುವ ಸಂಭವವಿರುತ್ತದೆ. ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗೀಕರಣ ಮಾಡಿದರೆ ವಿದ್ಯುತ್ ಬೆಲೆ ದುಬಾರಿಯಾಗುತ್ತದೆ ಎಂದಿದ್ದಾರೆ.
ಸರ್ಕಾರಿ ವಿದ್ಯುತ್ ಕಂಪನಿಗಳಲ್ಲಿರುವ ಮೀಸಲಾತಿ ರದ್ದಾಗುತ್ತದೆ ಹಾಗೂ ಇದರಿಂದ ದಲಿತರು. ಕೆಳ ವರ್ಗದ ಜನತೆಗೆ ಹಾಗೂ ಉದ್ಯೋಗ ಆಕಾಂಕ್ಷೆಗಳಿಗೆ ಉದ್ಯೋಗ ಎನ್ನುವುದು ಮರೀಚಿಕೆಯಾಗುವ ಸಂಭವವಿರುತ್ತದೆ. ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗೀಕರಣ ಮಾಡಿದರೆ ಖಾಸಗಿ ಕಂಪನಿಗಳು ಗೃಹಬಳಕೆ ಹಾಗೂ ಇನ್ನಿತರ ಉದ್ದೇಶಕ್ಕೆ ವಿದ್ಯುತ್ ಪಡೆಯಲು ದುಬಾರಿ ವೆಚ್ಚವನ್ನುಪಾವತಿಸಲು ಒತ್ತಾಯಪಡಿಸಿ ಜನಸಾಮಾನ್ಯರು, ಹೊರೆಯಾಗುವ ಸಂಭವಿಸುತ್ತದೆ. ಉತ್ಪಷ್ಟವಾದ ಹಾಗೂ ಒಳ್ಳೆಯ ಸರ್ಕಾರಿ ಕಂಪನಿಗಳಿದ್ದರೂ ಖಾಸಗಿ ಕಂಪನಿಗಳಿಗೆ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ನೀಡುವುದಕ್ಕೆ ನಮ್ಮ ಸಂಪೂರ್ಣ ವಿರೋಧವಿರುತ್ತದೆ ಇದರಿಂದ ಸರ್ಕಾರ ಕಂಪನಿಗಳು ನಾಶವಾಗುವಗುವ ಸಂಭವವಿರುತ್ತದೆ.
ಯಾವುದೇ ಖಾಸಗೀ ಕಂಪನಿಗಳು ಲಾಭ ನೋಡುತ್ತವೆಯೇ ಹೊರತು ಸಾರ್ವಜನಿಕರು ಹಿತದೃಷ್ಟಿಯನ್ನು ನೋಡುವುದಿಲ್ಲ ಸೇವೆ ಎನ್ನುವುದು ಗೌಣವಾಗುತ್ತದೆ ವಿದ್ಯುತ್ ಖಾಸಗೀಕರಣ ಮಾಡಿದರೆ, ಕರೆಂಟ್ ದರ ಏರಿಕೆ ಖಚಿತ, ಗೃಹ ಜ್ಯೋತಿ ಯೋಜನೆಗಳು ಬಂದ್. ನೇಮಕಾತಿಯಲ್ಲಿ ಮೀಸಲಾತಿ ರದ್ದಾಗಲಿದ್ದು, ಗ್ರಾಮಗಳು ಪೂರ್ಣ ಪ್ರಮಾಣದಲ್ಲಿ ನಿರ್ಲಕ್ಷಕ್ಕೆ ಒಳಗಾಗಲಿವೆ, ಆದ್ದರಿಂದ, ಯಾವುದೇ ಕಾರಣಕ್ಕೂ ಇದನ್ನು ಖಾಸಗಿ ಕಂಪನಿಗಳಿಗೆ ನೀಡಬಾರದು. ಖಾಸಗಿ ಕಂಪನಿಗಳಿಗೆ ನೀಡಿದರೆ, ಸರ್ಕಾರದ ವಿರುದ್ಧ ಉಗ್ರವಾದ ಹೋರಾಟವನ್ನು ಮಾಡಲಾಗುವುದೆಂದ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.
ಈ ಪ್ರತಿಭಟನೆಯ ನೇತೃತ್ವವನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಚಿತ್ರದುರ್ಗ ಜಿಲ್ಲೆ. ಜಿಲ್ಲಾಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ವಹಿಸಿದ್ದರು, ಇದರಲ್ಲಿ ರೈತ ಮುಖಂಡರಾದ ಕೆ.ಪಿ.ಭೂತಯ್ಯ, ರೆಡ್ಡಿಹಳ್ಳಿ ವೀರಣ್ಣ, ಪ್ರವೀಣ ಕುಮಾರ್, ಬೇಡರೆಡ್ಡಿ ಹಳ್ಳಿ ಬಸವರೆಡ್ಡಿ, ಹಂಪಣ್ಣ, ಮರ್ಲಹಳ್ಳಿ ರವಿಕುಮಾರ್, ವೆಂಕಟೇಶ್, ಮಹೇಶ್ , ರಾಜಣ್ಣ, ತಿಪ್ಪೇಸ್ವಾಮಿ, ಚಂದ್ರಣ್ಣ, ಈರಣ್ಣ, ಕಾಂತರಾಜು, ನಾಗರಾಜು, ಚಂದ್ರಶೇಖರಪ್ಪ, ನಾರಾಯಣ್ಣಪ್ಪ, ಗಂಗಾಧರ ಮಹೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.