ಚಿತ್ರದುರ್ಗ ಗೋಶಾಲೆಗೆ 80 ಪೆಂಡೆ ರಾಗಿ ಹೊಲ್ಲು ದಾನ: ರೈತ ಸಂಘದ ಸೇವೆಗೆ ಮೆಚ್ಚುಗೆ.

ಭೀಮಸಮುದ್ರ:

ರೈತ ಸಂಘದ ವತಿಯಿಂದ ಚಿತ್ರದುರ್ಗದ ಆದಿಚುಂಚನಗಿರಿ ಮಠದ ಗೋಶಾಲೆಗೆ 80 ಪಂಡಿ ರಾಗಿ ಉಲ್ಲನ್ನು ಉಚಿತವಾಗಿ ನೀಡಲಾಯಿತು.

ಈ ಸಂದರ್ಭದಲ್ಲಿ ರಾಗಿ ಹೊಲನ್ನು ಸ್ವೀಕರಿಸಿ ಮಾತನಾಡಿದ ಕಬೀರಾನಂದ ಆಶ್ರಮ ಶಿವಲಿಂಗಾನಂದ ಸ್ವಾಮೀಜಿ ಗೋಮಾತೆಗೆ ಆಹಾರ ನೀಡಿದರೆ ರೈತರ ಬಾಳು ಸಮೃದ್ಧಿಯಾಗಿರುತ್ತದೆ ರೈತನಿಗೆ ಹೊಲಕ್ಕೆ ಬೇಕಾದ ಸಾವಯವ ಗೊಬ್ಬರ ಹಾಗೂ ರೈತರ ಜೀವನಕ್ಕೆ ಬೆನ್ನೆಲುಬಾಗಿ ನಿಂತಿರುವುದೇ ಗೋಮಾತೆ ಮನುಷ್ಯನಿಗೆ ಎಷ್ಟು ಆಹಾರ ಕೊಟ್ಟರೂ ಸಾಕಾಗುವುದಿಲ್ಲ ಆದರೆ ಗೋಮಾತೆಗೆ ನೀಡಿದರೆ ತನ್ನ ಹೊಲಕ್ಕೆ ಬೇಕಾದ ಎಲ್ಲಾ ರೀತಿಯ ಸಲಕರಣೆಗಳನ್ನು ಮಾಡಿಕೊಡುತ್ತದೆ.ಆಹಾರವಿಲ್ಲದಿದ್ದರೆ ಯಾವ ಮನುಷ್ಯನು ಯಾವ ರಾಜಕಾರಣಿಗಳಿಗೂ ಬದುಕಲು ಸಾಧ್ಯವಿಲ್ಲ ನಮಗೂ ಶಾಲೆಗೆ ದಾವಣಗೆರೆ ಚಿತ್ರದುರ್ಗ ಇತರ ಜಿಲ್ಲೆಗಳಿಂದ ರಾಗಿ ಹುಲ್ಲು ಭತ್ತದಲ್ಲೂ ನೀಡುತ್ತಾ ಬಂದಿದ್ದಾರೆ.

ನಮ್ಮ ಗೋಶಾಲೆಯಲ್ಲಿ ಹಸುಗಳು ಮಲ್ನಾಡ್ ಗಿಡ್ಡ ಹಳ್ಳಿ ಕಾರು ಸುಮಾರು 175 ಹಸುಗಳಿವೆ.ಉತ್ತರ ಪ್ರದೇಶದಲ್ಲಿ ನೀಡುವ ಗೋಮಾತೆಗೆ ಮಾನ್ಯತೆ ನಮ್ಮ ರಾಜ್ಯದಲ್ಲಿ ಇಲ್ಲ ನಮ್ಮ ಸರ್ಕಾರ ತಲಾ ಒಂದು ಹಸುಗೆ ಇಪ್ಪತ್ತು ರೂಪಾಯಿ ನೀಡಿದರೆ ರೂ.20 ನೀಡಿದರೆ ಹಸುವನ್ನು ಸಾಕಬಹುದು.ಹಸುಗಳನ್ನು ಸಾಕಲು ಆದಿಚುಂಚನಗಿರಿ ಮಠದಿಂದ ಸಹಕಾರ ಬಹಳ ಇದೆ ಮಠದೊಡ್ಡದಾಗಿದ್ದು ಬಹಳಷ್ಟು ಸಹಕಾರ ನೀಡುತ್ತದೆ ಆರು ತಿಂಗಳಿಗೆ ಆಗುವಷ್ಟು ಮೇವನ್ನು ಸಂಗ್ರಹಣೆ ಮಾಡುತ್ತಿರುತ್ತೇವೆ ಬಿ ಜಿ ಎಸ್ ಬಾಲಗಂಗಾಧರನಾಥ ಸ್ವಾಮೀಜಿಗಳ ಸಂಕಲ್ಪದಂತೆ ಬರದ ನಾಡಿಗೆ ಗೋಶಾಲೆ ಮಾಡಬೇಕೆಂಬುವ ಮಹದಾಯಿ ಇತ್ತು ಆ ಕಾರಣದಿಂದ ಗೋಶಾಲೆ ತೆರೆಯಲಾಗಿದೆ ಗೋಶಾಲೆ ಇಲ್ಲದಿದ್ದರೆ ಹಸುಗಳು ಕಸಾಯಿಖಾನೆಗೆ ಹೋಗುವುದನ್ನು ತಪ್ಪಿಸಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಡಿ ಎಂ ಲಿಂಗರಾಜು ಪ್ರಸನ್ನ ಕುಮಾರ್ ಭೀಮಸಮುದ್ರ ಗ್ರಾಮದ ರೈತ ಸಂಘದ ಅಧ್ಯಕ್ಷರಾದ ಆರ್ ಶಂಕರ್ ಮೂರ್ತಿ ರೈತ ಕಾರ್ಯದರ್ಶಿಯಾದ ರಘುಸಂಘದ ಸದಸ್ಯರುಗಳಾದ ನಿರಂಜನ್ ಬಸಪ್ಪ ತಿಪ್ಪೇಶ್ ನಾಯಕ ಗಿರೀಶ್ ನಾಯ್ಕ ಮಾರುತಿ ಕೆಂಚವಿರಪ್ಪ ಹಾಗೂ ಪಾಳ್ಯ ನಲ್ಲಿ ಕಟ್ಟೆ ಭೀಮಸಮುದ್ರ ರೈತರುಗಳು ಇದ್ದರು.

Leave a Reply

Your email address will not be published. Required fields are marked *