Horoscope Today 07 May 2026: ಇಂದು ಈ ರಾಶಿಯವರಿಗೆ ಹೊಸ ಅವಕಾಶ, ಕೆಲವರಿಗೆ ಮಾನಸಿಕ ಒತ್ತಡ.

ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸದ ಕೃಷ್ಣ ಪಕ್ಷದ ಷಷ್ಠೀ ತಿಥಿಯ ಗುರುವಾರವಾದ ಇಂದು, ಅನ್ಯರ ವಿಚಾರಗಳ ಕಡೆ ಹೆಚ್ಚು ಗಮನ, ಸಮಯದ ಹೊಂದಾಣಿಕೆ, ವಿಶ್ರಾಂತಿಯ ಅಗತ್ಯ, ಹಣದ ಆಸೆಯಿಂದ ದೂರವಿರುವ ಮನೋಭಾವ ಹಾಗೂ ಭೋಗಗಳಲ್ಲಿ ಮಿತಿಯನ್ನು ಪಾಲಿಸುವ ಸೂಚನೆಗಳು ಕಂಡುಬರುತ್ತವೆ.

ಇಂದಿನ ಪಂಚಾಂಗ

ಶಾಲಿವಾಹನ ಶಕೆ : 1949

ಸಂವತ್ಸರ : ಪರಾಭವ

ಉತ್ತರಾಯಣ

ಋತು : ವಸಂತ

ಚಾಂದ್ರಮಾಸ : ವೈಶಾಖ

ಸೌರ ಮಾಸ : ಮೇಷ

ಪಕ್ಷ : ಕೃಷ್ಣ

ತಿಥಿ : ಷಷ್ಠೀ

ವಾರ : ಗುರುವಾರ

ನಕ್ಷತ್ರ : ಉತ್ತರಾಷಾಢ

ಯೋಗ : ಸಾಧ್ಯ

ಕರಣ : ಗರಜ

ಸೂರ್ಯೋದಯ : ಬೆಳಿಗ್ಗೆ 06:01

ಸೂರ್ಯಾಸ್ತ : ಸಂಜೆ 06:41

ರಾಹುಕಾಲ : ಮಧ್ಯಾಹ್ನ 01:56 ರಿಂದ 03:31

ಯಮಗಂಡ ಕಾಲ : ಬೆಳಿಗ್ಗೆ 06:01 ರಿಂದ 07:36

ಗುಳಿಕ ಕಾಲ : ಬೆಳಿಗ್ಗೆ 09:11 ರಿಂದ 10:46

ಹಾಗಾದರೆ ಮೇಷದಿಂದ ಮೀನ ರಾಶಿವರೆಗೆ ಇಂದಿನ ದಿನ ಹೇಗಿರಲಿದೆ ಎಂಬುದನ್ನು ತಿಳಿಯೋಣ.

ಮೇಷ ರಾಶಿ

ಇಂದು ನಿಮ್ಮ ನಿರ್ಧಾರ ಸಾಮರ್ಥ್ಯ ಹೆಚ್ಚಾಗಿರಲಿದೆ. ಸಂಗಾತಿಗೆ ಸಂಬಂಧಿಸಿದ ಪ್ರಮುಖ ಆಯ್ಕೆಯನ್ನು ಸ್ವತಃ ನೀವು ಮಾಡುವ ಸಾಧ್ಯತೆ ಇದೆ. ಫಲಾಪೇಕ್ಷೆಯಿಲ್ಲದೆ ಕೆಲಸ ಮಾಡುವ ಮನಸ್ಥಿತಿ ಬೆಳೆಯುತ್ತದೆ. ಹಳೆಯ ಸಾಲದ ಸಮಸ್ಯೆಯಿಂದ ಹೊರಬರುವ ಅವಕಾಶಗಳು ಕಂಡುಬರುತ್ತವೆ. ಸ್ನೇಹಿತರ ಜೊತೆ ಸಂಜೆ ಸಮಯ ಕಳೆಯುವಿರಿ. ಕಾರ್ಯಕ್ಷೇತ್ರದಲ್ಲಿ ಚುರುಕು ಹೆಚ್ಚಾಗಿದ್ದು ಯೋಜನೆಗಳು ಯಶಸ್ಸಿನ ದಿಕ್ಕಿನಲ್ಲಿ ಸಾಗಲಿವೆ. ಆದರೆ ದೇಹಕ್ಕೆ ವಿಶ್ರಾಂತಿ ಅಗತ್ಯವಿದ್ದರೂ ಸಮಯದ ಕೊರತೆ ಕಾಡಬಹುದು.

ವೃಷಭ ರಾಶಿ

ಒತ್ತಡದಿಂದ ಮುಕ್ತರಾಗುವ ದಿನ. ಮನಸ್ಸಿಗೆ ನೆಮ್ಮದಿ ಸಿಗಲಿದೆ. ಕೆಲಸದಲ್ಲಿ ನಿಮ್ಮ ನಿಪುಣತೆ ಗಮನ ಸೆಳೆಯಬಹುದು. ಖರ್ಚುಗಳನ್ನು ನಿಯಂತ್ರಿಸುವ ಮೂಲಕ ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ. ವೃತ್ತಿಯಲ್ಲಿ ಸಣ್ಣ ಮಟ್ಟಿನ ಗೊಂದಲಗಳು ಎದುರಾಗಬಹುದು. ಸಂಗಾತಿಯ ಮನಸ್ಸು ಬೇಸರಗೊಳ್ಳದಂತೆ ಮಾತುಗಳಲ್ಲಿ ಎಚ್ಚರಿಕೆ ಅಗತ್ಯ. ವಿನಯಶೀಲತೆ ನಿಮ್ಮ ಜನಪ್ರಿಯತೆಯನ್ನು ಹೆಚ್ಚಿಸಲಿದೆ.

ಮಿಥುನ ರಾಶಿ

ಪ್ರತಿಷ್ಠೆ ಮತ್ತು ಗುರುತಿನ ಬಯಕೆ ಹೆಚ್ಚಾಗುವ ಸಾಧ್ಯತೆ ಇದೆ. ಹೊಸ ಅವಕಾಶಗಳನ್ನು ಹುಡುಕಲು ಧೈರ್ಯ ಮತ್ತು ತಾಳ್ಮೆ ಎರಡೂ ಅಗತ್ಯವಾಗುತ್ತದೆ. ಹಳೆಯ ಯೋಜನೆಗಳನ್ನು ಮರುಪ್ರಾರಂಭಿಸುವ ಅವಕಾಶ ದೊರೆಯಬಹುದು. ದಾಂಪತ್ಯ ಜೀವನದ ಸಣ್ಣ ವಿರಸ ಮನಸ್ಸಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಉದ್ಯೋಗ ಸಂಬಂಧಿತ ಬದಲಾವಣೆಗಳಿಂದ ಓಡಾಟ ಹೆಚ್ಚಾಗಬಹುದು. ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸಿದರೆ ಪ್ರಶಂಸೆ ಸಿಗಲಿದೆ.

ಕಟಕ ರಾಶಿ

ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ವಿಧಾನ ಇತರರಿಗೆ ವಿಭಿನ್ನವಾಗಿ ಕಾಣಬಹುದು. ದೇಹದ ಆರೋಗ್ಯದ ಕಡೆ ನಿರ್ಲಕ್ಷ್ಯ ತೋರಿಸಬೇಡಿ. ನಿಮ್ಮ ಸಹಾಯಕ್ಕಾಗಿ ಯಾರಾದರೂ ಸಂಪರ್ಕಿಸಬಹುದು. ಕುಟುಂಬದ ಜವಾಬ್ದಿಗಳು ಹೆಚ್ಚಾಗುವ ಸಾಧ್ಯತೆ ಇದೆ. ಕೆಲಸಗಳಲ್ಲಿ ನಿಧಾನವಾದರೂ ಸ್ಥಿರ ಪ್ರಗತಿ ಕಂಡುಬರುತ್ತದೆ.

ಸಿಂಹ ರಾಶಿ

ಅತಿಯಾಗಿ ಮಾತನಾಡುವುದರಿಂದ ನಿಮ್ಮದೇ ಗೌರವಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಿ. ಕೆಲಸದ ಒತ್ತಡ ಹೆಚ್ಚಾಗಬಹುದು ಮತ್ತು ಸ್ವಲ್ಪ ಆಲಸ್ಯವೂ ಕಾಡಬಹುದು. ಕುಟುಂಬದ ಬೆಂಬಲ ನಿಮಗೆ ಧೈರ್ಯ ನೀಡಲಿದೆ. ಪ್ರಯಾಣದ ಅವಕಾಶಗಳು ಎದುರಾಗಬಹುದು. ಮಾನಸಿಕ ಒತ್ತಡವನ್ನು ನಿಯಂತ್ರಿಸುವುದು ಮುಖ್ಯ. ಕೆಲವರು ನಿಮ್ಮ ಮೆಚ್ಚುಗೆಯನ್ನು ಬಳಸಿಕೊಂಡು ಕೆಲಸ ಮಾಡಿಸಿಕೊಳ್ಳುವ ಸಾಧ್ಯತೆ ಇದೆ.

ಕನ್ಯಾ ರಾಶಿ

ಕುಟುಂಬದ ಹಿರಿಯರ ಜೊತೆ ಮಾತಿನ ಚಕಮಕಿ ಸಂಭವಿಸಬಹುದು. ಮನೆಯೊಳಗಿನ ಸಣ್ಣ ಕಲಹಗಳು ಮನಸ್ಸಿಗೆ ಬೇಸರ ತರಬಹುದು. ಆದರೂ ಹಣದ ಹರಿವು ಸಮತೋಲನದಲ್ಲಿರುತ್ತದೆ. ಆಕಸ್ಮಿಕವಾಗಿ ಒಳ್ಳೆಯ ಸುದ್ದಿ ಕೇಳಿಬರಬಹುದು. ಹೊಸ ಮನೆ ಅಥವಾ ಕಟ್ಟಡ ನಿರ್ಮಾಣದ ಕುರಿತು ತಜ್ಞರ ಜೊತೆ ಚರ್ಚೆ ಮಾಡುವ ಯೋಚನೆ ಮೂಡಬಹುದು. ವಾಹನ ಚಾಲನೆಯಲ್ಲಿ ಜಾಗ್ರತೆ ಅಗತ್ಯ.

ತುಲಾ ರಾಶಿ

ಇತರರ ಕೆಲಸಕ್ಕಾಗಿ ಅನಗತ್ಯ ಓಡಾಟ ಮಾಡುವ ಪರಿಸ್ಥಿತಿ ಎದುರಾಗಬಹುದು. ದಿನವಿಡೀ ಶ್ರಮ ಹೆಚ್ಚಾಗುವ ಸಾಧ್ಯತೆ ಇದೆ. ತಾಳ್ಮೆ ಮತ್ತು ಸಮಾಧಾನದಿಂದ ವರ್ತಿಸುವುದು ಉತ್ತಮ. ಆರೋಗ್ಯದ ಕಡೆ ನಿರ್ಲಕ್ಷ್ಯ ಬೇಡ, ವಿಶೇಷವಾಗಿ ಆಹಾರದಲ್ಲಿ ಮಿತಿಯನ್ನು ಪಾಲಿಸಿ. ವ್ಯಾಪಾರದಲ್ಲಿ ಕೆಲವು ಅಡಚಣೆಗಳು ಕಂಡುಬರಬಹುದು. ಚಂಚಲ ಮನಸ್ಸಿನಿಂದ ನಕಾರಾತ್ಮಕ ಯೋಚನೆಗಳು ಹೆಚ್ಚಾಗದಂತೆ ಎಚ್ಚರಿಕೆ ವಹಿಸಿ.

ವೃಶ್ಚಿಕ ರಾಶಿ

ನಿಮ್ಮ ಪ್ರತಿಭೆ ಇಂದು ಹೊರಹೊಮ್ಮುವ ದಿನ. ಸ್ನೇಹಿತರ ಜೊತೆ ಸಮಯ ಕಳೆಯುವುದರಿಂದ ಮನಸ್ಸಿಗೆ ಹಗುರವಾಗಬಹುದು. ಹಳೆಯ ವಿವಾದಗಳು ಬಗೆಹರಿಯುವ ಸಾಧ್ಯತೆ ಇದೆ. ಕುಟುಂಬದಲ್ಲಿ ಶಾಂತಿ ನೆಲೆಸಬಹುದು. ಆದರೆ ಇತರರ ಜೊತೆ ನಿಮ್ಮನ್ನು ಹೋಲಿಕೆ ಮಾಡಿಕೊಂಡು ಬೇಸರ ಪಡುವ ಸಾಧ್ಯತೆ ಇದೆ. ಸಾಲ ಸಂಬಂಧಿತ ಒತ್ತಡಗಳು ಹೆಚ್ಚಾಗಬಹುದು.

ಧನು ರಾಶಿ

ಅನಗತ್ಯ ವಿಷಯಗಳಲ್ಲಿ ತಲೆಹಾಕದೇ ನಿಮ್ಮ ಕೆಲಸದ ಕಡೆ ಗಮನ ಹರಿಸುವುದು ಉತ್ತಮ. ಗುರಿಯನ್ನು ಬದಲಿಸದೆ ಮುಂದುವರಿದರೆ ಯಶಸ್ಸು ಸಿಗಲಿದೆ. ಮಕ್ಕಳಿಗೆ ಪ್ರೋತ್ಸಾಹ ನೀಡುವಿರಿ. ಹಣಕಾಸಿನ ವಿಚಾರಗಳಲ್ಲಿ ಎಚ್ಚರಿಕೆ ಅಗತ್ಯ. ಸರ್ಕಾರಿ ಕೆಲಸಗಳಲ್ಲಿ ವಿಳಂಬ ಅಥವಾ ಒತ್ತಡ ಕಂಡುಬರಬಹುದು.

ಮಕರ ರಾಶಿ

ನಕಾರಾತ್ಮಕ ಯೋಚನೆಗಳಿಂದ ದೂರವಿರಿ. ಆರ್ಥಿಕ ಲಾಭದ ಸೂಚನೆಗಳು ಕಂಡುಬರುತ್ತವೆ. ಗೌರವ ಮತ್ತು ಪ್ರಭಾವ ಹೆಚ್ಚಾಗಲಿದೆ. ಹೊಸ ಆದಾಯದ ಮೂಲಗಳು ತೆರೆಯುವ ಸಾಧ್ಯತೆ ಇದೆ. ಬಾಕಿ ಹಣ ವಾಪಸ್ ಸಿಗಬಹುದು. ಆದರೆ ಕುಟುಂಬದವರ ಜೊತೆ ಕೋಪದಿಂದ ವರ್ತಿಸಿದರೆ ಸಮಸ್ಯೆ ಉಂಟಾಗಬಹುದು.

ಕುಂಭ ರಾಶಿ

ಆಸ್ತಿ ಖರೀದಿ ಅಥವಾ ಮಾರಾಟದ ಯೋಜನೆಗಳು ಮುಂದುವರಿಯಬಹುದು. ಉತ್ತಮ ಪುಸ್ತಕಗಳನ್ನು ಓದುವುದರಿಂದ ಮನಸ್ಸಿಗೆ ಶಾಂತಿ ಸಿಗಲಿದೆ. ಅಜಾಗರೂಕತೆಯಿಂದ ನಷ್ಟ ಸಂಭವಿಸುವ ಸಾಧ್ಯತೆ ಇದೆ. ಪ್ರಮುಖ ವಾದವಿವಾದಗಳಿಂದ ದೂರವಿರುವುದು ಒಳಿತು. ಹೊಸ ವಿಚಾರಗಳತ್ತ ಆಸಕ್ತಿ ಹೆಚ್ಚಾದರೂ ಅದು ತಾತ್ಕಾಲಿಕವಾಗಿರಬಹುದು. ಭೂಮಿ ಖರೀದಿಸುವವರು ದಾಖಲೆಗಳನ್ನು ಸಂಪೂರ್ಣವಾಗಿ ಪರಿಶೀಲಿಸಬೇಕು.

ಮೀನ ರಾಶಿ

ವಿವಾದಗಳನ್ನು ಅನಗತ್ಯವಾಗಿ ಮುಂದುವರಿಸಬೇಡಿ. ಗುರಿಯ ಮೇಲೆ ಏಕಾಗ್ರತೆ ಇಟ್ಟರೆ ಉತ್ತಮ ಫಲ ಸಿಗಲಿದೆ. ಖರ್ಚು ಹೆಚ್ಚಾದರೆ ಆರ್ಥಿಕ ಒತ್ತಡ ಎದುರಾಗಬಹುದು. ಕೋಪದಿಂದ ಮಾಡಿದ ಕೆಲಸ ಹಾಳಾಗುವ ಸಾಧ್ಯತೆ ಇದೆ. ಇಂದಿನ ಕೆಲಸವನ್ನು ಮುಂದೂಡುವುದು ಸರಿಯಲ್ಲ. ನಿಮ್ಮ ಉತ್ತಮ ಗುಣಗಳನ್ನು ಕೆಲವರು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ

Leave a Reply

Your email address will not be published. Required fields are marked *