ಮಹಿಳಾ ಮೀಸಲಾತಿಗೆ ಕಾಂಗ್ರೆಸ್ ವಿರೋಧವಿಲ್ಲ: ಬಿಜೆಪಿ ಷಡ್ಯಂತ್ರದ ವಿರುದ್ಧ ಪೂರ್ಣಿಮಾ ಶ್ರೀನಿವಾಸ್ ವಾಗ್ದಾಳಿ.

ಚಿತ್ರದುರ್ಗ ಮೇ. 07

ವರದಿ ಮತ್ತು ಪೋಟೋ ಕೃಪೆ ಸುರೇಶ್ ಪಟ್ಟಣ್

ಇತ್ತೀಚೆಗೆ ಲೋಕಸಭೆಯಲ್ಲಿ ಮಂಡನೆಯಾದ ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ನಾರಿಶಕ್ತಿ ವಂದನ್ ವಿಧೇಯಕವನ್ನು ನಾವು ವಿರೋಧಿಸುತ್ತಿಲ್ಲ. ಅದರ ಹಿಂದಿನ ಷಡ್ಯಂತ್ರವನ್ನಷ್ಟೇ ವಿರೋಧಿಸುತ್ತಿದ್ದೇವೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಹಿರಿಯೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀಮತಿ ಕೆ ಪೂರ್ಣಿಮಾ ಶ್ರೀನಿವಾಸ್ ಸ್ಪಷ್ಟಪಡಿಸಿದರು.

ಚಿತ್ರದುರ್ಗ ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಮೀಸಲಾತಿ ಶೇ.33 ವಿಚಾರವಾಗಿ ಆಡಳಿತ ಪಕ್ಷಕ್ಕೆ ಬಹುಮತವಿದ್ದರೂ ಲೋಪದೋಷ ದಿಂದ ಕೂಡಿದ ಕಾರಣ ಬೆಂಬಲ ಸಿಗಲಿಲ್ಲ ಬಿಜೆಪಿಯವರು ದೂರದೃಷ್ಟಿಯಿಲ್ಲದೆ ಮಹಿಳಾ ಮೀಸಲಾತಿ ಮಂಡನೆ ಮಾಡಿರುವುದು ಸರಿಯಲ್ಲ. ಇದರಲ್ಲಿನ ಲೋಪದೋಷದ ಬಗ್ಗೆ ಜನಜಾಗೃತಿ ಅಗತ್ಯವಾಗಿದೆ. ವಿರೋಧ ಪಕ್ಷದವರಿಗೆ ಚರ್ಚೆಗೆ ಅವಕಾಶ ನೀಡದೆ ಏಕಾಏಕಿ ಮಂಡನೆ ಮಾಡಿದ್ದು ಯಾವ ನ್ಯಾಯ ? ಶೇ.33 ಮೀಸಲಾತಿ ಬಿಲ್ ಮಾತ್ರವೇ ಪಾಸ್ ಮಾಡಬೇಕಾಗಿತ್ತು. ಅದನ್ನು ಬಿಟ್ಟು ಕ್ಷೇತ್ರ ಪುನರ್ ವಿಂಗಡಣೆ ಅಗತ್ಯವಿರಲಿಲ್ಲ. ಈಗ ಇರುವ 534 ಸ್ಥಾನಗಳಲ್ಲೇ ಮೊದಲು ಶೇ.33ರಷ್ಟು ಮೀಸಲಾತಿಯ ಅವಕಾಶ ನೀಡಲಿ. ಅದನ್ನು ಬಿಟ್ಟು ಸಂಖ್ಯೆ ಏರಿಕೆಯ ಅಗತ್ಯವಿಲ್ಲ ಎಂದು ಮಾಜಿ ಶಾಸಕರು ಹೇಳಿದರು.

ಮಹಿಳಾ ಮೀಸಲಾತಿ ಮಸೂದೆಗೆ ಕಾಂಗ್ರೆಸ್ ಮಹಿಳೆಯರ ವಿರೋಧಿ ಕಾಂಗ್ರೆಸ್ ಪಕ್ಷವೆಂದು ಹೇಳುತ್ತಿರುವ ಬಿಜೆಪಿಯು ಮಹಿಳೆಯರ ಭಾವನೆ ಚೆಲ್ಲಾಟವಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಅವರು ಪ್ರಶ್ನಿಸಿ. ಜೊತೆ ಪ್ರತಿಪಕ್ಷಗಳು ಡಿಲಿಮಿಟೇಶನ್ ಮಸೂದೆಗೆ ವಿರೋಧ ವ್ಯಕ್ತಪಡಿಸಿವೆಯೇ ಹೊರತು ಮಹಿಳಾ ಮೀಸಲಾತಿ ಮಸೂದೆಗಲ್ಲ. ಕೇಂದ್ರವು ಪ್ರಾಮಾಣಿಕವಾಗಿದ್ದರೆ 2023ರ ಕಾನೂನನ್ನು ಜಾರಿಗೆ ತರಲಿ. ನಾರಿ ಶಕ್ತಿ ವಂದನ ಚೌಕಟ್ಟು ಎಂದು ವ್ಯಾಪಕವಾಗಿ 2023 ಕರೆಯಲ್ಪಡುವ ಕಾನೂನು, ಶಾಸಕಾಂಗಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಯ ಅನುಷ್ಟಾನವನ್ನು ಹೊಸ ಜನಗಣತಿ ಪೂರ್ಣಗೊಳಿಸಿ ನಂತರ ಡಿಲಿಮಿಟೇಶನ್ ಬಗ್ಗೆ ಚರ್ಚಿಸಿ, ಅನುಷ್ಟಾನಗೊಳಿಸಲಿ. ಅದನ್ನು ಬಿಟ್ಟು ವಿನಾಕಾರಣ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಕ್ಷೇತ್ರ ವಿಂಗಡಣೆ ಮಸೂದೆ ಜಾರಿಗೊಳಿಸುವ ಕೇಂದ್ರ ಸರ್ಕಾರದ ಹುನ್ನಾರ ದೇಶದ ಜನರ ಮುಂದೆ ಬಯಲಾಗಿದೆ. ಬಿಜೆಪಿಯು ಪಂಚ ರಾಜ್ಯಗಳ ಚುನಾವಣೆ ಗಮನದಲ್ಲಿಟ್ಟು ಕೊಂಡು ತರಾತುರಿಯಲ್ಲಿ ಮಸೂದೆ ಮಂಡನೆ ಮಾಡಲು ಹೋಗಿ ಮುಖಭಂಗಕ್ಕೀಡಾಗಿದೆ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮಹಿಳಾ ಮೀಸಲಾತಿ ಮಸೂದೆಯನ್ನು ಕಾಂಗ್ರೆಸ್ ವಿರೋಧಿಸುತ್ತಿದೆ. ಮಹಿಳೆಯರ ವಿರೋಧಿ ಕಾಂಗ್ರೆಸ್ ಎಂದು ಹೇಳುತ್ತಿರುವ ಬಿಜೆಪಿಯು ಮಹಿಳೆಯರ ಭಾವನೆ ಜೊತೆ ಚೆಲ್ಲಾಟ ಆಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿ ಭಾರತದ ಒಕ್ಕೂಟ ರಚನೆ ಬದಲಾಯಿಸಲ-ಮುಂದಾಗಿದ್ದಕ್ಕೆ ತಕ್ಕ ಶಾಸ್ತಿಯಾಗಿದೆ. ಪ್ರಜಾಪ್ರಭುತ್ವ ದುರ್ಬಲಗೊಳಿಸುವ ಕೇಂದ್ರ ಸರ್ಕಾರದ ಪಿತೂರಿಗೆ ತಕ್ಕ ಉತ್ತರ ನೀಡಲಾಗಿದೆ ಇದು ಸಂವಿಧಾನಕ್ಕೆ ಸಿಕ್ಕ ಗೆಲುವು, ದೇಶಕ್ಕೆ, ವಿರೋ ಪಕ್ಷದ ಒಗ್ಗಟ್ಟಿಗೆ ಸಿಕ್ಕ ಗೆಲುವು ಎಂದು ಪೂರ್ಣಿಮಾ ಶ್ರೀನಿವಾಸ್ ತಿಳಿಸಿದ ಅವರು. ಸದನ ನಡೆಯುವ ಮೊದಲೇ ಪ್ರತಿ ಗ್ರಾಮದಿಂದ ಪ್ರಧಾನಿಯವರಿಗೆ ಪೋಸ್ಟ್ ಕಾರ್ಡ್‍ಗಳನ್ನು ಮಹಿಳೆಯರಿಂದ ಕಳುಹಿಸಲಾಗುವುದು ಎಂದರು.

“ಈಗಾಗಲೇ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡ 33 ರಷ್ಟು ಮೀಸಲಾತಿ ಮಸೂದೆಯೂ ಡಾಕ್ಟರ್ ಮನಮೋಹನ್‍ಸಿಂಗ್‍ರವರು ಪ್ರಧಾನಮಂತ್ರಿಯಾಗಿದ್ದಾಗ 2010ರಲ್ಲಿ ಮಂಡನೆಯಾಗಿ ರಾಜ್ಯಸಭೆ ಯಲ್ಲಿ ಇದಕ್ಕೆ ಅನುಮೋದನೆ ದೊರಕಿದ್ದು ಲೋಕಸಭೆಯಲ್ಲಿ ಒಮ್ಮತದ ಕೊರತೆ ಮತ್ತು ಮತದಾನವಾಗದ ಕಾರಣ, ಈ ಮಸೂದೆ ಅಂಗೀಕಾರವಾಗದೆ ಉಳಿಯಿತು ಇದು ಎಲ್ಲರಿಗೂ ಗೊತ್ತಿರುವ ಸತ್ಯವೆ. 2023ರ ಸೆಪ್ಟೆಂಬರ್ 19ರಂದು ಮತ್ತೊಮ್ಮೆ ಸಂವಿಧಾನದ ಆರ್ಟಿಕಲ್ 334ಎ ತಿದ್ದುಪಡಿ ತಂದು ಈ ಮಸೂದೆ ಮಂಡನೆ ಆಯಿತು ಅಂದು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಚರ್ಚೆಯಾಗಿ ಸೆಪ್ಟೆಂಬರ್ 20ರಂದು ಎಲ್ಲ ಪಕ್ಷದವರು ಸೇರಿ ಸರ್ವಾನುಮತದಿಂದ ಲೋಕಸಭೆ ಮತ್ತು ರಾಜ್ಯಸಭೆಯಲ್ಲೂ ಮತ್ತೊಮ್ಮೆ ಈ ಮಸೂದೆಯನ್ನು ಅನುಮೋದಿಸಿ ಕೊಟ್ಟಿದ್ದಾರೆ. ಆದರೇ ಮಸೂದೆ ಅನುಮೋದನೆಯಾದ ನಂತರ 2024ರ ಲೋಕಸಭಾ ಚುನಾವಣೆಗೆ ಇದನ್ನು ಕೇಂದ್ರ ಬಿಜೆಪಿ ಸರ್ಕಾರ ಪರಿಗಣಿಸಲಿಲ್ಲ! ಇದ್ದಕ್ಕಿದ್ದ ಹಾಗೆ ವಿಶೇಷ ಅಧಿವೇಶನವನ್ನು ಕರೆದು ಈಗಾಗಲೇ ಪಾಸ್ ಆಗಿರುವ ಮಹಿಳಾ ಬಿಲ್ ಜೊತೆಗೆ ಸೇರಿಸಿ ಕ್ಷೇತ್ರಗಳ ಪುನರ್ ವಿಂಗಡನೆ ಮತ್ತು ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸುವ ಮಸೂದೆಯನ್ನು ಮಂಡಿಸಿರುತ್ತಾರೆ! ಮೇಲ್ನೋಟಕ್ಕೆ ಇದೊಂದು ಪೊಲಿಟಿಕಲ್ ಗಿಮಿಕ್ ಎನ್ನುವುದು ಈಗಾಗಲೇ ಸಾಬೀತಾಗಿದೆ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ಭಾರತೀಯ ಯುವ ಕಾಂಗ್ರೆಸ್ ಸಮಿತಿಯ ಮುಖಂಡರಾದ ಶ್ರೀಮತಿ ಸುಮಯ್ಯ ತಬ್ರಿಜ್, ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಎಂ.P.É ತಾಜ್‍ಪೀರ್ ಕಾರ್ಯಧ್ಯಕ್ಷರಾದ ಕೆ.ಎಂ. ಹಾಲಸ್ವಾಮಿ ಡಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಂಪತ್‍ಕುಮಾರ್, ಮೈಲಾರಪ್ಪ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷರಾದ ಆರ್. ಶಿವಣ್ಣ, ಚಿತ್ರದುರ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಗೀತಾನಂದಿನಿ ಗೌಡ ನಗರಸಭೇಯ ಮಾಜಿ ಸದಸಗ್ಯೆ ಮೀನಾಕ್ಷಿ, ನಿ.ಪಂ. ಮಾಜಿ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು, ಸದಸ್ಯೆ, ಸವಿತಾ ರಘು, ಮೋಕ್ಷಾ ರುದ್ರುಸ್ವಾಮಿ, ಮೆಹಬೂಬು ಖಾತೂನ್, ರುದ್ರಾಣಿ ಗಂಗಾಧರ್, ವೆಂಕಟೇಶ್ ಲಕ್ಷ್ಮೀಕಾಂತ್ ಉಪಸ್ಥಿತರಿರುತ್ತಾರೆ.

Leave a Reply

Your email address will not be published. Required fields are marked *