Daily Horoscope,31 May 2026:ಇಂದಿನ ದಿನ ಭವಿಷ್ಯ ಮತ್ತು ಪಂಚಾಂಗ;ದ್ವಾದಶ ರಾಶಿಗಳ ಸಂಪೂರ್ಣ ಫಲಾಫಲ ಇಲ್ಲಿದೆ.

ನಮಸ್ಕಾರ ಓದುಗರೆ, ಇಂದಿನ ದಿನದ ಪಂಚಾಂಗ ವಿವರಗಳು ಹಾಗೂ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ. ದಿನದ ಆಗುಹೋಗುಗಳನ್ನು ಅರಿತು ನಿಮ್ಮ ಕೆಲಸಗಳನ್ನು ಯೋಜಿಸಲು ಇದು ಸಹಕಾರಿಯಾಗಿದೆ.

ಇಂದಿನ ಪಂಚಾಂಗ ವಿವರಗಳು

  • ಸಂವತ್ಸರ ಹಾಗೂ ಶಕೆ: ಪರಾಭವ ಸಂವತ್ಸರ, ಶಾಲಿವಾಹನ ಶಕೆ ೧೯೪೯
  • ಆಯನ ಹಾಗೂ ಋತು: ಉತ್ತರಾಯಣ, ಗ್ರೀಷ್ಮ ಋತು
  • ಮಾಸ: ಅಧಿಕ ಜ್ಯೇಷ್ಠ (ಚಾಂದ್ರಮಾನ), ವೃಷಭ (ಸೌರಮಾನ)
  • ಪಕ್ಷ ಹಾಗೂ ತಿಥಿ: ಶುಕ್ಲ ಪಕ್ಷ, ಪೂರ್ಣಿಮಾ ತಿಥಿ
  • ನಕ್ಷತ್ರ: ಮಹಾನಕ್ಷತ್ರ ರೋಹಿಣೀ, ನಿತ್ಯನಕ್ಷತ್ರ ಜ್ಯೇಷ್ಠಾ
  • ಯೋಗ ಹಾಗೂ ಕರಣ: ಪರಿಘ ಯೋಗ, ಬವ ಕರಣ
  • ಸೂರ್ಯೋದಯ – ಸೂರ್ಯಾಸ್ತ: ಬೆಳಿಗ್ಗೆ 05:56 ರಿಂದ ಸಂಜೆ 06:48 ರವರೆಗೆ
  • ಶುಭಾಶುಭ ಸಮಯಗಳು:
    • ರಾಹು ಕಾಲ: ಸಂಜೆ 17:12 ರಿಂದ 18:48 ರವರೆಗೆ
    • ಯಮಗಂಡ ಕಾಲ: ಮಧ್ಯಾಹ್ನ 12:22 ರಿಂದ 13:59 ರವರೆಗೆ
    • ಗುಳಿಕ ಕಾಲ: ಮಧ್ಯಾಹ್ನ 15:35 ರಿಂದ 17:12 ರವರೆಗೆ

ದ್ವಾದಶ ರಾಶಿಗಳ ಇಂದಿನ ಭವಿಷ್ಯ

ಮೇಷ ರಾಶಿ ಇಂದು ನಿಮ್ಮ ಗಮನವನ್ನು ಕೇಂದ್ರೀಕರಿಸಲು ಹಲವು ಸವಾಲುಗಳು ಎದುರಾಗಬಹುದು. ನಿಮ್ಮನ್ನು ಹುಡುಕಿಕೊಂಡು ಬರುವವರಿಗಾಗಿ ಸ್ವಲ್ಪ ಸಮಯ ಮೀಸಲಿಡಿ. ಆರ್ಥಿಕ ಪ್ರಗತಿ ಉತ್ತಮವಾಗಿದ್ದರೂ ಖರ್ಚಿನ ಮೇಲೆ ಹಿಡಿತವಿರಲಿ. ಪ್ರೇಮ ವಿಚಾರಗಳಲ್ಲಿ ಗೊಂದಲದ ಬದಲು ಸ್ಪಷ್ಟತೆ ಇಟ್ಟುಕೊಳ್ಳಿ. ಕಾನೂನು ತೊಡಕುಗಳ ಬಗ್ಗೆ ಎಚ್ಚರವಿರಲಿ. ಅನಿರೀಕ್ಷಿತ ಧನಲಾಭವನ್ನು ಇತರರಿಗೆ ದಾನ ಮಾಡುವಿರಿ. ಕೈತುಂಬಾ ಕೆಲಸವಿದ್ದರೂ ವಿರಾಮ ತೆಗೆದುಕೊಳ್ಳಲು ಬಯಸುವಿರಿ.

ವೃಷಭ ರಾಶಿ ದೂರದ ಊರುಗಳಿಗೆ ಮಾಡುವ ಪ್ರಯಾಣವು ಆನಂದದಾಯಕವಾಗಿರುತ್ತದೆ. ದೈವಭಕ್ತಿ ಹೆಚ್ಚಾಗಲಿದ್ದು, ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವ ಯೋಗವಿದೆ. ಇತರರು ಮಾಡುವ ಹೊಗಳಿಕೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸಿ. ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಮನ್ನಣೆ ದೊರೆತು ಮನಸ್ಸಿಗೆ ಮುದ ನೀಡಲಿದೆ. ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರ ಅಗತ್ಯ. ಕುಟುಂಬದಲ್ಲಿ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳು ಮೂಡಬಹುದು. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಲಭ್ಯವಾಗಲಿದೆ.

ಮಿಥುನ ರಾಶಿ ಸೋಮಾರಿತನ ಬಿಟ್ಟು ನಿಮ್ಮ ಕೈಲಾದ ಕೆಲಸಗಳನ್ನು ಮುಗಿಸಲು ಪ್ರಯತ್ನಿಸಿ. ಸ್ವಂತ ಜಾಗ ಅಥವಾ ಭೂಮಿಯನ್ನು ಮಾರಾಟ ಮಾಡುವ ಸನ್ನಿವೇಶ ಒದಗಿಬರಬಹುದು. ನಿಮ್ಮ ಕಹಿ ಅನುಭವಗಳನ್ನು ಆಪ್ತರೊಂದಿಗೆ ಹಂಚಿಕೊಂಡು ಹಗುರಾಗುವಿರಿ. ಗತಕಾಲದ ವಿಚಾರಗಳನ್ನು ಬಿಟ್ಟು ಪ್ರಸ್ತುತದ ಬಗ್ಗೆ ಗಮನಹರಿಸಿ. ಹೂಡಿಕೆಗಳು ಲಾಭ ತಂದುಕೊಡಲಿವೆ. ಜವಾಬ್ದಾರಿಯುತ ಹುದ್ದೆಯಲ್ಲಿರುವವರು ಕೆಲಸದಲ್ಲಿ ಶಿಸ್ತು ಕಾಯ್ದುಕೊಳ್ಳುವುದು ಒಳಿತು.

ಕರ್ಕಾಟಕ ರಾಶಿ ಪತಿ-ಪತ್ನಿಯರ ನಡುವಿನ ಭಿನ್ನಾಭಿಪ್ರಾಯಗಳನ್ನು ನಾಲ್ಕು ಗೋಡೆಯ ನಡುವೆಯೇ ಬಗೆಹರಿಸಿಕೊಳ್ಳಿ. ಮನೆಗೆ ಅನಿರೀಕ್ಷಿತವಾಗಿ ಹೆಚ್ಚು ನೆಂಟರು ಬರುವುದರಿಂದ ಕೊಂಚ ಆತಂಕ ಉಂಟಾಗಬಹುದು. ನಿಮ್ಮ ಸಂವಹನ ಕೌಶಲ್ಯ ಹೊಸ ಅವಕಾಶಗಳನ್ನು ತಂದುಕೊಡಲಿದೆ. ಕಾನೂನು ಪ್ರಕ್ರಿಯೆಗಳಲ್ಲಿ ಜಾಗರೂಕರಾಗಿರಿ. ಆರ್ಥಿಕತೆಯಲ್ಲಿ ಸಣ್ಣ-ಪುಟ್ಟ ಏರಿಳಿತಗಳಾಗಬಹುದು. ವಿನಾಕಾರಣ ಇತರರೊಂದಿಗೆ ವಾದಕ್ಕಿಳಿಯುವ ಪ್ರವೃತ್ತಿ ಹೆಚ್ಚಾಗಲಿದೆ. ಆಸ್ತಿ ವಿಚಾರದಲ್ಲಿ ದುರಾಸೆ ಮೂಡುವ ಸಾಧ್ಯತೆ ಇದೆ.

ಸಿಂಹ ರಾಶಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಳ್ಳುವ ಆಸಕ್ತಿ ಮೂಡಲಿದೆ. ಹಣಕಾಸಿನ ನಿರ್ವಹಣೆಯಲ್ಲಿ ಬುದ್ಧಿವಂತಿಕೆ ತೋರಿ. ನೀವು ಬಾಯ್ಮಾತಿನಲ್ಲಿ ಹೇಳುವ ವಿಚಾರಗಳನ್ನು ಇತರರು ಗಂಭೀರವಾಗಿ ಪರಿಗಣಿಸದಿರಬಹುದು. ಸಣ್ಣ ಖರ್ಚುಗಳು ಮಿತಿಮೀರಿ ದೊಡ್ಡದಾಗುವ ಸಂಭವವಿದೆ. ಕುಟುಂಬದ ಸದಸ್ಯರ ಭಾವನೆಗಳಿಗೆ ಬೆಲೆ ಕೊಡಿ. ದೂರದ ಬಂಧುಗಳ ನಡುವಿನ ಬಾಂಧವ್ಯದಲ್ಲಿ ಬದಲಾವಣೆಯಾಗಲಿದೆ. ವ್ಯಾಮೋಹದಿಂದಾಗಿ ಸರಿ-ತಪ್ಪಿನ ಅರಿವು ಮರೆಯಾಗಬಹುದು. ಟೀಕೆಗಳನ್ನು ಧನಾತ್ಮಕವಾಗಿ ತೆಗೆದುಕೊಳ್ಳಿ.

ಕನ್ಯಾ ರಾಶಿ ಅತಿಯಾದ ಚಂಚಲ ಮನಸ್ಸಿನಿಂದಾಗಿ ಕೈಹಾಕಿದ ಕೆಲಸಗಳು ಹಾಳಾಗಬಹುದು ಎಚ್ಚರ. ಹಣ ಖರ್ಚಾಗದಂತೆ ಓಡಾಟಗಳನ್ನು ಮಾಡುವ ಯೋಜನೆ ರೂಪಿಸುವಿರಿ. ಉದ್ಯೋಗದ ಸ್ಥಳದಲ್ಲಿ ನಿಮ್ಮ ಚಾಣಾಕ್ಷತೆಗೆ ಪ್ರಶಂಸೆ ವ್ಯಕ್ತವಾಗಲಿದೆ. ಹಿಂದಿನ ಹೂಡಿಕೆಗಳು ಉತ್ತಮ ಲಾಭ ತಂದುಕೊಡಲಿವೆ. ಮನೆ-ಕುಟುಂಬದ ಕಡೆಗೆ ಹೆಚ್ಚು ಗಮನ ಹರಿಸಬೇಕಾಗುತ್ತದೆ. ಕೋಪವನ್ನು ತಗ್ಗಿಸಿಕೊಳ್ಳಲು ಪ್ರಯತ್ನಿಸುವಿರಿ. ಬಂಧು-ಮಿತ್ರರೊಂದಿಗೆ ಉತ್ತಮ ಒಡನಾಟ ಇರಲಿದೆ.

ತುಲಾ ರಾಶಿ ಅಕ್ಕಪಕ್ಕದವರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಿ. ಮೇಲಧಿಕಾರಿಗಳ ಕಣ್ಣಿನಿಂದ ತಪ್ಪಿಸಿಕೊಂಡರೆ ಸಾಕು ಎನಿಸಲಿದೆ. ವಿದೇಶದಿಂದ ಕೆಲಸದ ಕರೆಗಳು ಬರುವ ಸಾಧ್ಯತೆಯಿದೆ. ಯಾವುದೇ ಹೂಡಿಕೆ ಮಾಡುವ ಮುನ್ನ ಸಂಪೂರ್ಣವಾಗಿ ಪರಿಶೀಲಿಸಿ. ಕುಟುಂಬದ ಜೊತೆ ಕಾಲ ಕಳೆಯುವುದು ನೆಮ್ಮದಿ ನೀಡಲಿದೆ. ನಿಮ್ಮ ತಪ್ಪುಗಳನ್ನು ಇತರರ ಮುಂದೆ ಒಪ್ಪಿಕೊಳ್ಳಲು ಅಹಂಕಾರ ಅಡ್ಡಿಯಾಗಬಹುದು. ಹೆಚ್ಚು ಆಸ್ತಿ ಹೊಂದುವ ಆಸೆಯೇ ತೊಂದರೆಗೆ ಕಾರಣವಾಗಬಹುದು.

ವೃಶ್ಚಿಕ ರಾಶಿ ಸಾಲದ ಬಾಧೆ ಹೆಚ್ಚಾಗಲಿದ್ದು, ಸಂಕಷ್ಟಗಳನ್ನು ಎದುರಿಸಬೇಕಾಗಬಹುದು. ಹಠಮಾರಿತನ ಬಿಡುವುದು ಒಳಿತು. ಏಕಾಂತದಲ್ಲಿ ಇರಲು ಹೆಚ್ಚು ಬಯಸುವಿರಿ. ಉದ್ಯೋಗದಲ್ಲಿ ಹೊಸ ಅವಕಾಶಗಳು ಒದಗಿಬಂದರೂ, ನಿರ್ಧಾರ ತೆಗೆದುಕೊಳ್ಳುವಲ್ಲಿ ತಾಳ್ಮೆ ಇರಲಿ. ಖರ್ಚು-ವೆಚ್ಚಗಳು ಮಾನಸಿಕ ಒತ್ತಡವನ್ನು ಹೆಚ್ಚಿಸಲಿವೆ. ಮನೆಯನ್ನು ಅಲಂಕರಿಸುವ ಯೋಜನೆ ಸದ್ಯಕ್ಕೆ ಮುಂದೂಡುವುದು ಉತ್ತಮ. ಮಕ್ಕಳ ಬಗ್ಗೆ ಅತಿಯಾದ ನಿರೀಕ್ಷೆ ಮತ್ತು ಆಸೆ ಮೂಡಲಿದೆ.

ಧನು ರಾಶಿ ನಿಮ್ಮೊಂದಿಗೆ ಸ್ನೇಹ ಬೆಳೆಸಲು ಬರುವವರನ್ನು ನಿರಾಸೆಗೊಳಿಸಬೇಡಿ. ಧೈರ್ಯದಿಂದ ಮುನ್ನುಗ್ಗಿದರೆ ಕೆಲಸ-ಕಾರ್ಯಗಳಲ್ಲಿ ಯಶಸ್ಸು ಖಂಡಿತ. ನುಡಿದಂತೆ ನಡೆಯುವ ಅಭ್ಯಾಸ ರೂಢಿಸಿಕೊಳ್ಳಿ. ಆರ್ಥಿಕ ಸ್ಥಿತಿಗತಿ ಸ್ಥಿರವಾಗಿರಲಿದೆ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ಕುಟುಂಬದವರು ನಿಮ್ಮ ಪ್ರೀತಿ ಮತ್ತು ಸಮಯಕ್ಕಾಗಿ ಕಾಯುತ್ತಿದ್ದಾರೆ. ನಿಮ್ಮ ವೈಯಕ್ತಿಕ ವಿಚಾರಗಳಲ್ಲಿ ಮೂರನೇ ವ್ಯಕ್ತಿಗಳ ಪ್ರವೇಶವನ್ನು ನೀವು ಸಹಿಸುವುದಿಲ್ಲ.

ಮಕರ ರಾಶಿ ಕೆಲಸದ ಒತ್ತಡ ಇಂದು ನಿಮ್ಮನ್ನು ಹೈರಾಣಾಗಿಸಬಹುದು. ಹೊಸ ಬಟ್ಟೆಗಳನ್ನು ಖರೀದಿಸುವ ಯೋಗವಿದೆ. ಕಚೇರಿಯ ಕೆಲಸದಲ್ಲಿ ಮಗ್ನರಾಗಿದ್ದರೂ ಮನಸ್ಸು ಬೇರೆಲ್ಲೋ ವಿಹರಿಸುತ್ತಿರುತ್ತದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯ ನಿರ್ವಹಣೆ ಅಗತ್ಯ. ಆರೋಗ್ಯದಲ್ಲಿ ಏರುಪೇರಾಗಲಿದ್ದು, ನಿಯಂತ್ರಣ ಕಷ್ಟವಾಗಬಹುದು. ಸಹೋದ್ಯೋಗಿಗಳೊಂದಿಗೆ ಪೈಪೋಟಿ ಏರ್ಪಡಲಿದೆ. ಬದಲಾಗುವ ಸನ್ನಿವೇಶಗಳಿಗೆ ಹೊಂದಿಕೊಳ್ಳುವುದು ಕಷ್ಟಕರವಾಗಬಹುದು.

ಕುಂಭ ರಾಶಿ ಆದಷ್ಟು ದೂರದ ಪ್ರಯಾಣಗಳನ್ನು ಮುಂದೂಡಿ. ಇತರರ ಮೇಲೆ ದ್ವೇಷ ಸಾಧಿಸುವುದರಿಂದ ಸಮಯ ವ್ಯರ್ಥವಾಗುವುದೇ ಹೊರತು ಬೇರೆ ಪ್ರಯೋಜನವಿಲ್ಲ. ಕೆಲಸದಲ್ಲಿ ಚುರುಕುತನ ಮತ್ತು ಸೂಕ್ತ ಯೋಜನೆ ಅತಿ ಮುಖ್ಯ. ಆರ್ಥಿಕ ಸ್ಥಿತಿ ಸಾಧಾರಣವಾಗಿದ್ದರೂ, ಸಾಲ ಕೊಡುವುದು ಅಥವಾ ಪಡೆಯುವುದನ್ನು ಮಾಡಬೇಡಿ. ಪ್ರೇಮ ವ್ಯವಹಾರಗಳಲ್ಲಿ ತಾಳ್ಮೆ ಇರಲಿ, ಅತಿಯಾದ ಯೋಚನೆ ಬೇಡ. ತಂದೆಯವರೊಡನೆ ಉತ್ತಮ ಬಾಂಧವ್ಯ ವೃದ್ಧಿಯಾಗಲಿದೆ. ನೀವು ಕೇಳಿದ ಕಡೆಗಳಿಂದ ಸಾಲ ಲಭ್ಯವಾಗಲಿದೆ.

ಮೀನ ರಾಶಿ ಹೊಸ ಉದ್ಯೋಗ ಅಥವಾ ವ್ಯವಹಾರ ಶುರುಮಾಡಲು ಬೇಕಾದ ಬಂಡವಾಳ ಒದಗಿಬರಲಿದೆ. ಈ ಹಿಂದೆ ನೀವು ನೀಡಿದ್ದ ಸಾಲ ವಾಪಸ್ ಕೈಸೇರಲಿದೆ. ಹಣಕಾಸಿನ ವ್ಯವಹಾರಗಳ ಕಡೆಗೆ ಹೆಚ್ಚು ಗಮನ ಹರಿಸುವಿರಿ. ನೀವು ತೆಗೆದುಕೊಳ್ಳುವ ಔಷಧಿಗಳಿಂದ ಅಡ್ಡಪರಿಣಾಮಗಳಾಗುವ ಸಾಧ್ಯತೆ ಇದೆ, ವೈದ್ಯರನ್ನು ಸಂಪರ್ಕಿಸಿ. ನಿಮ್ಮಿಂದ ತಪ್ಪಾದಾಗ ನಿಮ್ಮ ಪರವಾಗಿ ನಿಲ್ಲುವವರು ವಿರಳ. ಸಾಲ ಪಡೆಯಲು ಬೆಲೆಬಾಳುವ ವಸ್ತುಗಳನ್ನು ಅಡಮಾನ ಇಡಬೇಕಾದ ಪರಿಸ್ಥಿತಿ ಬರಬಹುದು. ವಾಹನ ರಿಪೇರಿಗಾಗಿ ಖರ್ಚಾಗಲಿದೆ. ನಿಮ್ಮ ಅತಿಯಾದ ಓಡಾಟದಿಂದಾಗಿ ಮನೆಯವರು ಬೇಸರಗೊಳ್ಳಬಹುದು.

Leave a Reply

Your email address will not be published. Required fields are marked *