ಚಿತ್ರದುರ್ಗ: ಜೂನ್ 13.
ವರದಿ ಮತ್ತು ಫೋಟೋ ಕೃಪೆ,ರವಿ ಕೆ ಅಂಬೇಕರ್
ಇದೇ ಜೂನ್ ಬರುವ ದಿನಾಂಕ 21ರ ಭಾನುವಾರ ಆಚರಿಸಲಾಗುವ 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಚಿತ್ರದುರ್ಗ ಇವರು ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳಿಗಾಗಿ ಉಚಿತ ಯೋಗ ಮತ್ತು ಪ್ರಾಣಾಯಾಮ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ದಿನಾಂಕ 13/6/2026ರ ಶನಿವಾರ ಚಿತ್ರದುರ್ಗ ತಾಲ್ಲೂಕಿನ ಮದಕರಿಪುರ, ನರೇನಹಾಳ್ ಹಾಗೂ ಸಜ್ಜನಕೆರೆ ಗ್ರಾಮಗಳ ಸರ್ಕಾರಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳ ವಿಧ್ಯಾರ್ಥಿಗಳಿಗೆ ಭಾರತೀಯ ಯೋಗ ಶಿಕ್ಷಣ ಸಂಸ್ಥೆಯ ಯೋಗ ಶಿಕ್ಷಕಿಯರಾದ ಶ್ರೀಮತಿ ನಾಗಲತ,ಅನಿತ, ಅರುಣ ಹಾಗೂ ರವಿ ಕೆ ಅಂಬೇಕರ್ ತರಬೇತಿ ನೀಡಿದರು.

ಮದಕರಿಪುರ ಗ್ರಾಮದ ಶಾಲಾ ಮಕ್ಕಳಿಗೆ ಯೋಗ ತರಬೇತಿ ನೀಡಿ ಮಾತನಾಡಿದ ಯೋಗ ಶಿಕ್ಷಕಿ ಶ್ರೀಮತಿ ನಾಗಲತಮ್ಮ ಯೋಗ ಎಂಬುದು ಕೇವಲ ಜೂನ್ 21ಕ್ಕೆ ಮಾತ್ರ ಸೀಮಿತವಲ್ಲ. ಇದನ್ನು ನಮ್ಮ ದಿನಚರಿಯ ಒಂದು ಭಾಗವಾಗಿಸಿಕೊಳ್ಳೋಣ. ಈ ಯೋಗ ದಿನದಂದು ನಾವೆಲ್ಲರೂ ಒಟ್ಟಾಗಿ ಯೋಗ ಮಾಡಿ, ಆರೋಗ್ಯವಂತ ಭಾರತವನ್ನು ನಿರ್ಮಿಸೋಣ ಎಂದು ಮಕ್ಕಳಿಗೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ರೇಖಾ, ಕಮಲಾಕ್ಷಿ, ವೀಣಾ, ಉಷಾ, ಶಾಹೀರಾಬಾನು, ಚೆನ್ನಾಶ್ರೀ ಇನ್ನಿತರರು ಪಾಲ್ಗೊಂಡಿದ್ದರು.