ಚಿತ್ರದುರ್ಗ: ಎಸ್.ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್‌ನ ನೂತನ ಅಧ್ಯಕ್ಷರಾಗಿ ಜಿ.ಎಸ್.ಮಂಜುನಾಥ್ ಆಯ್ಕೆ.

ಚಿತ್ರದುರ್ಗ ಆ. 8

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817


ನಗರದ ಹೊರ ವಲಯದ ಸಿಬಾರದ ಬಳಿ ಇರುವ ಎಸ್.ನಿಜಲಿಂಗಪ್ಪ ಮೇಮೋರಿಯಲ್ ಟ್ರಸ್ಟ ಈ ಹಿಂದೆ ಅಧ್ಯಕ್ಷರಾಗಿದ್ದ ಹೆಚ್.ಹನುಮಂತಪ್ಪರವರು ನಿಧನರಾದ ಹಿನ್ನಲೆಯಲ್ಲಿ ಅವರ ಸ್ಥಾನಕ್ಕೆ ನಿಜಲಿಂಗಪ್ಪ ರವರ ಅನುಯಾಯಿ ಭೀಮಸಮುದ್ರದ ವರ್ತಕರಾದ ಜಿ.ಎಸ್.ಮಂಜುನಾಥ್‍ರವರನ್ನು ಅಧ್ಯಕ್ಷರನ್ನಾಗಿ ಟ್ರಸ್ಟಿಗಳು ಆಯ್ಕೆ ಮಾಡಿದ್ದಾರೆ.


ಇಂದು ಸೀಬಾರದ ಎಸ್.ನಿಜಲಿಂಗಪ್ಪರವರ 27ನೇ ಪುಣ್ಯ ಸ್ಮರಣೆ ಕಾರ್ಯಕ್ರಮ ನಂತರ ಸಭೆಯನ್ನು ನಡೆಸಿದ ಟ್ರಸ್ಟಿಗಳು ಹೆಚ್,ಹನುಮಂತಪ್ಪರವರ ತೆರವಾದ ಅಧ್ಯಕ್ಷ ಸ್ಥಾನಕ್ಕೆ ನಿಜಲಿಂಗಪ್ಪರವರ ಅನುಯಾಯಿ ವರ್ತಕರು ಆದ ಜಿ.ಎಸ್.ಮಂಜುನಾಥ್‍ರವರ ಹೆಸರನ್ನು ಅಧ್ಯಕ್ಷ ಸ್ಥಾನಕ್ಕೆ ಟ್ರಸ್ಟಿಗಳ ಅಭಿಪ್ರಾಯದಂತೆ ಟ್ರಸ್ಟಿನ ಕಾರ್ಯದರ್ಶಿಗಳಾದ ಎಸ್.ಎನ್.ಕಿರಣ ಶಂಕರ್ ಘೋಷಿಸಿದರು.


ಈ ಸಮಯದಲ್ಲಿ ಆಯ್ಕೆಯಾದ ಅಧ್ಯಕ್ಷರಿಗೆ ಟ್ರಸ್ಟನ ಆವರಣದಲ್ಲಿ ನೂತನ ಅಧ್ಯಕ್ಷರಿಗೆ ಶಾಲು ಹಾರವನ್ನು ಹಾಕಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಎಸ್.ನಿಜಲಿಂಗಪ್ಪ ಮೇಮೋರಿಯಲ್ ಟ್ರಸ್ಟ್‍ನ ಕಾರ್ಯದರ್ಶಿ ಎಸ.ಎನ್.ಕಿರಣ ಶಂಕರ್ ವಿಧಾನ ಪರಿಷತ್ಸ ದಸ್ಯರಾದ ಕೆ.ಎಸ್.ನವೀನ್, ಮಾಜಿ ಶಾಸಕರಾದ ಮೋಹನ್ ಕೊಂಡಜ್ಜಿ ಡಿ.ಎಂ.ಶ್ರೀಧರ್ ಡಾ, ಎಸ್.ಟಿ.ಶಿವಪ್ರಸಾದ್, ಶಿ.ಉದಯಶಂಕರ್, ನಗರಾಭೀವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ತಾಜ್‍ಪೀರ್, ನರೆಂದ್ರಬಾಬು, ಕೆಇಬಿ ಷಣ್ಮುಖಪ್ಪ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *