Daily Horoscope, 14 May : ಈ 5 ರಾಶಿಗಳಿಗೆ ಇಂದು ರಾಜಯೋಗ! ಉಳಿದ ರಾಶಿಗಳ ಭವಿಷ್ಯವೇನು?

ಇಂದಿನ ದಿನವು ಕೆಲವರಿಗೆ ಯಶಸ್ಸಿನ ಮೆಟ್ಟಿಲಾಗಲಿದ್ದರೆ, ಇನ್ನು ಕೆಲವರಿಗೆ ತಾಳ್ಮೆಯ ಪರೀಕ್ಷೆಯಾಗಲಿದೆ. ಹೆಸರಾಂತ ವ್ಯಕ್ತಿಗಳ ಭೇಟಿ, ಸಹಾನುಭೂತಿ ಹಾಗೂ ಕೆಲವು ಅನಿರೀಕ್ಷಿತ ಸವಾಲುಗಳೊಂದಿಗೆ ಗುರುವಾರದ ಈ ದಿನವು ದ್ವಾದಶ ರಾಶಿಗಳ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಎಂಬ ಸಂಪೂರ್ಣ ಭವಿಷ್ಯ ಇಲ್ಲಿದೆ.

ಇಂದಿನ ಪಂಚಾಂಗ

  • ಸಂವತ್ಸರ: ಶಾಲಿವಾಹನ ಶಕೆ 1949, ಪರಾಭವ ಸಂವತ್ಸರ
  • ಆಯನ / ಋತು: ಉತ್ತರಾಯಣ / ವಸಂತ ಋತು
  • ಮಾಸ / ಪಕ್ಷ: ವೈಶಾಖ ಮಾಸ (ಸೌರ ಮಾಸ: ಮೇಷ) / ಕೃಷ್ಣ ಪಕ್ಷ
  • ತಿಥಿ / ವಾರ: ತ್ರಯೋದಶೀ ತಿಥಿ / ಗುರುವಾರ
  • ನಕ್ಷತ್ರ: ರೇವತೀ (ಮಹಾನಕ್ಷತ್ರ: ಕೃತ್ತಿಕಾ)
  • ಯೋಗ / ಕರಣ: ಪ್ರೀತಿ / ಗರಜ
  • ಸೂರ್ಯೋದಯ: ಬೆಳಿಗ್ಗೆ 05:58
  • ಸೂರ್ಯಾಸ್ತ: ಸಂಜೆ 06:42

ಇಂದಿನ ಶುಭಾಶುಭ ಕಾಲಗಳು:

  • ರಾಹು ಕಾಲ: ಮಧ್ಯಾಹ್ನ 01:56 ರಿಂದ 03:32 ರವರೆಗೆ
  • ಯಮಗಂಡ ಕಾಲ: ಬೆಳಿಗ್ಗೆ 05:59 ರಿಂದ 07:34 ರವರೆಗೆ
  • ಗುಳಿಕ ಕಾಲ: ಬೆಳಿಗ್ಗೆ 09:10 ರಿಂದ 10:45 ರವರೆಗೆ

ರಾಶಿ ಭವಿಷ್ಯ

ಮೇಷ ರಾಶಿ: ಇತರರು ಪ್ರೀತಿಯಿಂದ ನೀಡುವ ವಿಚಾರಗಳನ್ನು ಗೌರವದಿಂದ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಿ. ಅನಗತ್ಯ ಟೀಕೆಗಳ ಮೂಲಕ ಇತರರ ಭಾವನೆಗಳಿಗೆ ನೋವುಂಟು ಮಾಡದಿರಿ. ಉದ್ಯೋಗ ಕ್ಷೇತ್ರದಲ್ಲಿ ಧನಾತ್ಮಕ ಬದಲಾವಣೆಗಳು ಕಂಡುಬರಲಿವೆ. ಬಹಳ ದಿನಗಳ ಶೀತಲ ಸಮರಕ್ಕೆ ಇಂದು ಅಂತ್ಯ ಸಿಗಲಿದೆ. ಆರ್ಥಿಕವಾಗಿ ಉತ್ತಮ ಲಾಭದ ನಿರೀಕ್ಷೆ ಇದೆ. ದಂಪತಿಗಳ ನಡುವೆ ಅನ್ಯೋನ್ಯತೆ ಹೆಚ್ಚಲಿದೆ. ಹಿರಿಯರ ಆಶೀರ್ವಾದ ಪಡೆಯಿರಿ. ಆರೋಗ್ಯದಲ್ಲಿ ಕೊಂಚ ಏರುಪೇರಾಗುವ ಸಾಧ್ಯತೆ ಇದೆ.

ವೃಷಭ ರಾಶಿ: ನಿಮ್ಮಲ್ಲಿನ ಆತ್ಮವಿಶ್ವಾಸವು ನಿರ್ಧಾರಗಳನ್ನು ಸ್ಪಷ್ಟವಾಗಿ ತೆಗೆದುಕೊಳ್ಳಲು ನೆರವಾಗಲಿದೆ. ನಿಮ್ಮ ಬುದ್ಧಿವಂತಿಕೆಯಿಂದ ಎದುರಾಗುವ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಕಂಡುಕೊಳ್ಳುವಿರಿ. ವ್ಯಾಪಾರ-ವ್ಯವಹಾರಗಳಲ್ಲಿ ಹೊಸ ಅವಕಾಶಗಳು ಒದಗಿಬರಲಿವೆ. ಹಣಕಾಸಿನ ವಿಚಾರದಲ್ಲಿ ಕೊಂಚ ಎಚ್ಚರಿಕೆ ವಹಿಸಿ. ಮನಸ್ಸಿನ ಗೊಂದಲಗಳನ್ನು ಬದಿಗೊತ್ತಿ, ತಾಳ್ಮೆಯಿಂದ ಹೆಜ್ಜೆ ಇಡಿ. ದಾಂಪತ್ಯದಲ್ಲಿ ಎದುರಾಗುವ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬೆಳೆಸದಿರುವುದು ಒಳಿತು.

ಮಿಥುನ ರಾಶಿ: ಪ್ರೇಮಿಗಳಿಗೆ ಹಾಗೂ ದಂಪತಿಗಳಿಗೆ ಇಂದು ಅತ್ಯುತ್ತಮ ದಿನ. ವೃತ್ತಿರಂಗದಲ್ಲಿ ನೀವು ನಿರೀಕ್ಷಿಸಿದ ಪ್ರಗತಿಯ ಮಾರ್ಗಗಳು ತೆರೆದುಕೊಳ್ಳಲಿವೆ. ಆರ್ಥಿಕ ಲೆಕ್ಕಾಚಾರಗಳು ನಿಖರವಾಗಿರುವುದು ಅಗತ್ಯ. ಸಾಲ ಮರುಪಾವತಿಸಲು ಸೂಕ್ತ ದಾರಿ ಸಿಗಲಿದೆ. ವಿವಾಹ ಆಕಾಂಕ್ಷಿಗಳಿಗೆ ಶುಭ ಕಾಲ. ಎಲ್ಲವೂ ತಿಳಿದಿದ್ದರೂ ಮೌನವಾಗಿರುವುದೇ ಜಾಣತನ. ಸರ್ಕಾರಿ ಕೆಲಸ-ಕಾರ್ಯಗಳಲ್ಲಿ ಕೊಂಚ ವಿಳಂಬವಾಗಬಹುದು.

ಕರ್ಕಾಟಕ ರಾಶಿ: ನಿಮ್ಮ ಭವಿಷ್ಯದ ಪ್ರಯಾಣದ ಯೋಜನೆಗಳು ಯಶಸ್ವಿಯಾಗಲಿವೆ. ಉದ್ಯೋಗದಲ್ಲಿ ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಕಳೆದುಹೋಗಿದ್ದ ವಸ್ತುಗಳು ಮರಳಿ ಕೈಸೇರುವ ಸಾಧ್ಯತೆ ಇದೆ. ಖರ್ಚಿನ ಮೇಲೆ ಹಿಡಿತವಿರಲಿ. ಕೌಟುಂಬಿಕ ಶಾಂತಿಗೆ ಹೆಚ್ಚಿನ ಆದ್ಯತೆ ನೀಡಿ. ಭೂಮಿ ಅಥವಾ ಆಸ್ತಿ ಖರೀದಿಯಲ್ಲಿ ಆತುರ ಬೇಡ. ನಿರಂತರ ಕೆಲಸದ ನಡುವೆ ದೇಹಕ್ಕೆ ಕೊಂಚ ವಿಶ್ರಾಂತಿ ನೀಡುವುದು ಅತ್ಯಗತ್ಯ.

ಸಿಂಹ ರಾಶಿ: ಆಪ್ತರೊಂದಿಗೆ ಸಣ್ಣ ಮನಸ್ತಾಪ ಸಂಭವಿಸುವ ಸಾಧ್ಯತೆ ಇದೆ. ಸಂಗಾತಿಯು ನಿಮ್ಮ ಕೆಲವು ನಡವಳಿಕೆಗಳಲ್ಲಿ ಬದಲಾವಣೆಗಳನ್ನು ಬಯಸಬಹುದು. ನಿರ್ಧಾರಗಳಲ್ಲಿನ ಸ್ಪಷ್ಟತೆಯಿಂದ ಮುನ್ನಡೆಯುವುದು ಸುಲಭವಾಗಲಿದೆ. ಕೌಟುಂಬಿಕ ಜವಾಬ್ದಾರಿಗಳನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸುವಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಜವಾಬ್ದಾರಿಯುತ ಸ್ಥಾನದಲ್ಲಿರುವವರಿಗೆ ಕೊಂಚ ಕೆಲಸದ ಒತ್ತಡವಿರಲಿದೆ.

ಕನ್ಯಾ ರಾಶಿ: ಆರ್ಥಿಕ ವಿಚಾರಗಳಲ್ಲಿ ನಿಮಗೆ ಸ್ಪಷ್ಟತೆ ಇರಲೇಬೇಕು, ಗೊಂದಲಗಳಿಗೆ ಎಡೆಮಾಡಿಕೊಡದಿರಿ. ಕಲಾ ಕ್ಷೇತ್ರದವರಿಗೆ ಹೊಸ ಅವಕಾಶಗಳು ಒಲಿಯಲಿವೆ. ಇಂದಿನ ಮಟ್ಟಿಗೆ ನಿಮ್ಮ ಆದಾಯ ಮತ್ತು ಖರ್ಚು ಸಮನಾಗಿರಲಿದೆ. ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳುವಿರಿ. ಜವಾಬ್ದಾರಿಗಳು ಹೆಚ್ಚಾದರೂ ಯಶಸ್ಸು ಖಚಿತ. ಸಹೋದ್ಯೋಗಿಗಳಿಗೆ ನೆರವಾಗುವ ಸನ್ನಿವೇಶ ನಿರ್ಮಾಣವಾಗಬಹುದು.

ತುಲಾ ರಾಶಿ: ಅಚ್ಚರಿ ಮೂಡಿಸುವಂತಹ ಕೆಲವು ವಿಚಾರಗಳು ಇಂದು ನಿಮ್ಮ ಗಮನಕ್ಕೆ ಬರಲಿವೆ. ಸಂಧಾನಕ್ಕಾಗಿ ಆಪ್ತರು ನಿಮ್ಮನ್ನು ಭೇಟಿಯಾಗಬಹುದು. ಕಾರ್ಯಕ್ಷೇತ್ರದಲ್ಲಿ ನೀವು ಅಂದುಕೊಂಡಂತೆ ಎಲ್ಲವೂ ಸುಗಮವಾಗಿ ನಡೆಯಲಿದೆ. ಧ್ಯಾನದಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ದೂರ ಪ್ರಯಾಣದ ಯೋಗವಿದೆ. ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಿರಿ. ಅನಿರೀಕ್ಷಿತವಾಗಿ ಒಲಿದುಬರುವ ಅದೃಷ್ಟದಿಂದ ಮನಸ್ಸಿಗೆ ಅತೀವ ಸಂತೋಷವಾಗಲಿದೆ.

ವೃಶ್ಚಿಕ ರಾಶಿ: ಉದ್ಯೋಗಕ್ಕೆ ಸಂಬಂಧಿಸಿದಂತೆ ಮಹತ್ವದ ಮತ್ತು ಉಪಯುಕ್ತ ಮಾಹಿತಿಯನ್ನು ಪಡೆದುಕೊಳ್ಳುವಿರಿ. ಇಂದು ಪ್ರಶಾಂತವಾಗಿ ದಿನ ಕಳೆಯಲು ಇಚ್ಛಿಸುವಿರಿ. ಆರ್ಥಿಕ ಲೆಕ್ಕಾಚಾರಗಳು ತಪ್ಪದಂತೆ ಎಚ್ಚರಿಕೆ ವಹಿಸಿ. ವಿರೋಧಿಗಳಿಗೆ ತಕ್ಕ ಉತ್ತರ ನೀಡುವಿರಿ. ಆಸ್ತಿ ವಿಚಾರಗಳಲ್ಲಿ ಮುಂದಾಲೋಚನೆ ಇರಲಿ. ಅನಿರೀಕ್ಷಿತ ಆರೋಗ್ಯ ಸಮಸ್ಯೆಗಳಿಂದ ಕೊಂಚ ಹಣ ಖರ್ಚಾಗುವ ಸಾಧ್ಯತೆ ಇದೆ.

ಧನು ರಾಶಿ: ಭಾವನಾತ್ಮಕವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ವಾಸ್ತವವನ್ನು ಅರಿತುಕೊಳ್ಳಿ. ಕುಟುಂಬದ ಬೆಂಬಲದಿಂದ ಎಂತಹ ಜವಾಬ್ದಾರಿಗಳನ್ನಾದರೂ ಸಮರ್ಥವಾಗಿ ನಿಭಾಯಿಸುವಿರಿ. ವೃತ್ತಿಜೀವನದಲ್ಲಿ ವಿಶೇಷ ಮನ್ನಣೆ ಸಿಗುವ ಅವಕಾಶವಿದೆ. ಸ್ನೇಹಿತರೊಂದಿಗೆ ಸಮಯ ಕಳೆಯಿರಿ. ಪೋಷಕರ ಸಲಹೆಗಳನ್ನು ಚಾಚೂತಪ್ಪದೆ ಪಾಲಿಸುವುದು ನಿಮ್ಮ ಮುಂದಿನ ಏಳಿಗೆಗೆ ಉತ್ತಮ.

ಮಕರ ರಾಶಿ: ಕಡಿಮೆ ಶ್ರಮದಿಂದ ಉತ್ತಮ ಆರ್ಥಿಕ ಲಾಭ ಪಡೆಯುವ ಯೋಗವಿದೆ. ಯುವಕರೊಂದಿಗೆ ಬೆರೆಯುವ ಅವಕಾಶ ಸಿಗಲಿದೆ. ನಿಮ್ಮೊಳಗಿನ ಅಥವಾ ಸುತ್ತಮುತ್ತಲಿನ ವಿರೋಧಿಗಳ ಬಗ್ಗೆ ಎಚ್ಚರಿಕೆ ಇರಲಿ. ಉತ್ತಮ ಸಂವಹನ ಕೌಶಲ್ಯದಿಂದ ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಾಧಿಸುವಿರಿ. ಉದ್ಯಮದಲ್ಲಿ ಹೊಸ ಪ್ರಯತ್ನಗಳಿಗೆ ತಕ್ಕ ಫಲ ಸಿಗಲಿದೆ. ದಾಂಪತ್ಯದ ವಿರಸಗಳು ದೂರವಾಗಿ, ಅನ್ಯೋನ್ಯತೆ ಮೂಡಲಿದೆ. ಆರೋಗ್ಯ ಉತ್ತಮವಾಗಿರಲಿದೆ.

ಕುಂಭ ರಾಶಿ: ಭೂಮಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಲಾಭ ಪಡೆಯುವಿರಿ. ಕುಟುಂಬದವರೊಂದಿಗೆ ಸಂತಸದ ಕ್ಷಣಗಳನ್ನು ಹಂಚಿಕೊಳ್ಳಲು ಬಿಡುವು ಮಾಡಿಕೊಳ್ಳಿ. ಹೊಸ ಯೋಜನೆಗಳ ಆರಂಭಕ್ಕೆ ಇದು ಸಕಾಲ. ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ ವ್ಯಕ್ತವಾಗಲಿದೆ. ಬಂಧು-ಮಿತ್ರರ ಭೇಟಿಯಿಂದ ಮನಸ್ಸಿಗೆ ಸಂತೋಷವಾಗಲಿದೆ. ದೇವಾಲಯ ದರ್ಶನ ಅಥವಾ ಆಧ್ಯಾತ್ಮಿಕ ಚಿಂತನೆಯಿಂದ ನೆಮ್ಮದಿ ಸಿಗಲಿದೆ.

ಮೀನ ರಾಶಿ: ಪ್ರಮುಖ ಆರ್ಥಿಕ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ. ಸಣ್ಣ ವಿಚಾರಗಳ ಬಗ್ಗೆಯೂ ಆಳವಾಗಿ ಚಿಂತನೆ ನಡೆಸುವಿರಿ. ಹೊಸ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಉತ್ಸಾಹ ಮೂಡಲಿದೆ. ಉದ್ಯೋಗದಲ್ಲಿ ಪ್ರಗತಿಯ ಲಕ್ಷಣಗಳಿವೆ. ಆರ್ಥಿಕ ವಿಚಾರದಲ್ಲಿ ಎಚ್ಚರಿಕೆ ಇರಲಿ. ಅಜಾಗರೂಕತೆಯಿಂದ ನಿಮ್ಮ ಬೆಲೆಬಾಳುವ ವಸ್ತುಗಳನ್ನು ಕಳೆದುಕೊಳ್ಳುವ ಭೀತಿ ಇದೆ, ಎಚ್ಚರ.

Leave a Reply

Your email address will not be published. Required fields are marked *