ಚಿತ್ರದುರ್ಗ ಮೇ 26
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಸರ್ಕಾರ, ಕೃಷಿ ಇಲಾಖೆ ಹಾಗೂ ಬಿತ್ತನೆ ಬೀಜ ಕೀಟನಾಶಕ ಮತ್ತು ರಸಗೊಬ್ಬರ ಮಾರಾಟಗಾರರ ಸಂಘಗಳು ಜಂಟಿಯಾಗಿ ಕೆಲಸವನ್ನು ಮಾಡಿದಲ್ಲಿ ರೈತನ ಆದಾಯವನ್ನು ದ್ವಿಗುಣವಾಗುವುದರಲ್ಲಿ ಸಂದೇಹ ಇಲ್ಲ ಎಂದು ಚಿತ್ರದುರ್ಗ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಾದ ಮಂಜುನಾಥ್ ಬಿ. ತಿಳಿಸಿದರು.

ನಗರದ ಪಟೇಲ್ ವೀರನಾಗಪ್ಪ ವೀರ ನಾಗಮ್ಮ ಸಮುದಾಯ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕೋಟೆನಾಡು ಚಿತ್ರದುರ್ಗ ಜಿಲ್ಲಾ ಬಿತ್ತನೆ ಬೀಜ ಕೀಟನಾಶಕ ಮತ್ತು ರಸಗೊಬ್ಬರ ಮಾರಾಟಗಾರರ ಸಂಘದ ಉದ್ಘಾಟನೆಯನ್ನು ನೇರವೇರಿಸಿ ಮಾತನಾಡಿದ ಅವರು, ಚಿತ್ರದುರ್ಗ ಜಿಲ್ಲೆ ಭೌಗೋಳಿಕವಾಗಿ ವಿಭೀನ್ನವಾಗಿದೆ ಇಲ್ಲಿ ಮಳೆಯ ಪ್ರಮಾಣ ಕಡಿಮೆ ಇದೆ, ಬರುವಂತ ಮಳೆಯನ್ನು ನಂಬಿ ರೈತರು ಬೆಳೆಯನ್ನು ಬಿತ್ತನೆ ಮಾಡಬೇಕಿದೆ ಈ ಸಮಯದಲ್ಲಿ ಉತ್ತಮವಾದ ಮಳೆ ಬಂದರು ಬೆಳೆ ಬಂದರೆ ರೈತ ಖುಷಿಯಾಗಿರುತ್ತಾನೆ, ಮಳೆ ಕೈಕೊಟ್ಟರೆ ಬಿತ್ತಿದ ಬೀಜವು ಸಹಾ ಬೆಳೆಯದೆ ನಷ್ಠವನ್ನು ಹೊಂದುತ್ತಾನೆ. ನಮ್ಮಲ್ಲಿ ಹಲವಾರು ವರ್ಷಗಳ ಕಾಲ ಭೂಮಿಗೆ ರಸಗೊಬ್ಬರವನ್ನು ನೀಡಿದ ಪರಿಣಾಮ ಭೂಮಿ ಬರಡಾಗುತ್ತಿದೆ ಇದ್ದಲ್ಲದೆ ಬಹುತೇಕ ಜನತೆ ಒಂದೇ ರೀತಿಯ ಬೆಳೆಯನ್ನು ಬೆಳೆಯುವುದರ ಮೂಲಕ ಭೂಮಿಯ ಫಲವತ್ತತೆ ನಾಶವಾಗುತ್ತದೆ ಎಂದರು.
ಚಿತ್ರದುರ್ಗದಲ್ಲಿ ನಾವುಗಳು ಪ್ರಕೃತಿಯೊಂದಿಗೆ ಹೊಂದಾಣಿಕೆಯನ್ನು ಮಾಡಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ ಇಲ್ಲಿ ಪ್ರಕೃತಿಯ ವಿರುದ್ದ ಹೋರಾಟ ಮಾಡುವ ಹಾಗಿಲ್ಲ, ಇದರಿಂದ ನಮ್ಮ ಜಿಲ್ಲೆ ಹಿಂದುಳಿಯಲು ಕಾರಣವಾಗಿದೆ, ನಮ್ಮ ರಾಜ್ಯದಲ್ಲಿ ಕೃಷಿಯನ್ನು ಹೆಚ್ಚಾಗಿ ಅವಲಂಭಿತರಾಗಿದ್ದಾರೆ, 100 ರಲ್ಲಿ ಶೇ.75 ರಷ್ಟು ಜನತೆ ಕೃಷಿಯ ಮೇಲೆ ನಮ್ಮ ಬದುಕನ್ನು ನಡೆಸುತ್ತಿದ್ದಾರೆ, ಇವರ ಆದಾಯವನ್ನು ದ್ವಿಗುಣ ಮಾಡುವಲ್ಲಿ ನಮ್ಮಲ್ಲರ ಶ್ರಮ ಹೆಚ್ಚಾಗಿದೆ, ಸರ್ಕಾರ, ಕೃಷಿ ಇಲಾಖೆ ಹಾಗೂ ಸಂಘಗಳು ರೈತರೊಂದಿಗೆ ಕೈಜೋಡಿಸುವುದರ ಮೂಲಕ ಅವರ ಆತನನ್ನು ಮುಖ್ಯವಾಹಿನಿಗೆ ತರುವಂತ ಕಾರ್ಯವನ್ನು ಮಾಡಬೇಕಿದೆ. ಇಂದಿನ ದಿನಮಾನದಲ್ಲಿ ಕೃಷಿ ಸಂಕಷ್ಟದಲ್ಲಿ ಇದೆ ಸಮಯಕ್ಕೆ ಸರಿಯಾಗಿ ಮಳೆ ಬಾರದೆ ರೈತನನ್ನು ಕಷ್ಟಕ್ಕೆ ದೂಡುತ್ತಿದೆ ಮಳೆಯನ್ನು ನಂಬಿ ಬಿತ್ತನೆಯನ್ನು ಮಾಡುವ ರೈತ ಮಳೆ ಬಾರದೆ ನಷ್ಠಕ್ಕೆ ಒಳಗಾಗುತ್ತಿದ್ದಾನೆ. ಇದರಿಂದ ರೈತ ಹೈನುಗಾರಿಕೆ, ತೋಟಗಾರಿಕೆಯಂತಹ ವಿವಿಧ ಬೆಳೆಗಳನ್ನು ಬೆಳೆಯಲು ಮುಂದಾಗಿದ್ದಾನೆ ಎಂದರು.
ಕೃಷಿಯಲ್ಲಿ ವಿವಿಧ ರೀತಿಯ ಅವಿಷ್ಕಾರಗಳು ನಡೆಯುತ್ತಿವೆ ಇವುಗಳನ್ನು ಇಲಾಖೆಯ ಮೂಲಕ ರೈತರಿಗೆ ತಲುಪಿಸಲಾಗುತ್ತಿದೆ, ಇದನ್ನು ಬಳಕೆ ಮಾಡುವುದರ ಮೂಲಕ ತಮ್ಮ ಆದಾಯವನ್ನು ದ್ವಿಗುಣ ಮಾಡಿಕೊಳ್ಳಬೇಕಿದೆ, ಇದಕ್ಕೆ ನಾವುಗಳು ಸಹಕಾರವನ್ನು ನೀಡಬೇಕಿದೆ. ಸಂಘದವರು ಸಹಾ ಇದರ ಬಗ್ಗೆ ಆಲೋಚಿಸಿ ರೈತರಿಗೆ ತಿಳಿಸುವಂತ ಕಾರ್ಯವನ್ನು ಮಾಡಿದಾಗ ರೈತನು ಸಹಾ ಸುಖವಾಗಿ ಇರುತ್ತಾನೆ ಎಂದ ಅವರು, ಕೇಂದ್ರ ಸರ್ಕಾರ ರಸಗೊಬ್ಬರಗಳಿಗೆ ನೀಡುವ ಸಹಾಯಧನದ ಪ್ರಮಾಣ ಹೆಚ್ಚಳವಾಗಿದೆ, 35,000 ಕೋಟಿ ರೂಗಳ ನೇರವಾಗಿ ಕಂಪನಿಗಳಿಗೆ ಹೋಗುತ್ತವೆ, ಇದರಿಂದ ರೈತರಿಗೆ ನೆರವಾಗುತ್ತಿದೆ. ಬೆಳೆಗಳಲ್ಲಿ ರಸಗೊಬ್ಬರ ಹೆಚ್ಚಾಗಿ ಬಳಕೆಯನ್ನು ಮಾಡುವುದರಿಂದ ಭೂಮಿಯಲ್ಲಿನ ಫಲವತ್ತತೆ ನಾಶವಾಗುತ್ತಿದ್ದರೆ. ಇದರೊಂದಿಗೆ ಮಾನವ ದೇಹದಲ್ಲಿನ ಆರೋಗ್ಯವೂ ಸಹಾ ನಷ್ಠವಾಗುತ್ತಿದೆ ಎಂದು ಮಂಜುನಾಥ್ ನುಡಿದರು.
ಚಿತ್ರದುರ್ಗ ಕೃಷಿ ಇಲಾಖೆಯ ಉಪ ಕೃಷಿ ನಿರ್ದೇಶರಾದ ಡಾ|| ಕೆ.ಎಸ್. ಶಿವಕುಮಾರ್ ಮಾತನಾಡಿ, ದೇಶದ ಎಲ್ಲಾ ಸರ್ಕಾರಗಳು ಸಹಾ ಕೃಷಿಗೆ ಒತ್ತನ್ನು ನೀಡುತ್ತಿವೆ ಇದರಿಂದ ರೈತರಿಗೆ ವಿವಿಧ ರೀತಿಯ ಸಹಾಯಧನ ದಲ್ಲಿ ವಸ್ತುಗಳು ಸಿಗುತ್ತಿವೆ. ಕೃಷಿಗೆ ಪೂರಕವಾದ ನರವನ್ನು ನಿಮ್ಮ ಸಂಘದ ಮೂಲಕ ನೀಡಬೇಕಿದೆ. ರೈತರಿಗೆ ಅಗತ್ಯವಾದ ಸಮಯದಲ್ಲಿ ರಸಗೊಬ್ಬರ, ಬಿತ್ತನೆ ಬೀಜ ಕ್ರೀಮಿನಾಶಕಗಳನ್ನು ಉತ್ತಮ ಗುಣಮಟ್ಟದಲ್ಲಿ ನೀಡುವುದರ ಮೂಲಕ ಅವರ ಶ್ರಮಕ್ಕೆ ನೆರವಾಗಬೇಕಿದೆ ಎಂದರು.
ಚಳ್ಳಕೆರೆ ಕೃಷಿ ಇಲಾಖೆಯ ಉಪ ಕೃಷಿ ನಿರ್ದೇಶಕರಾದ ಡಾ|| ಡಿ. ಉಮೇಶ್ ಮಾತನಾಡಿ ಸರ್ಕಾರ ರೈತರಿಗಾಗಿ ಆಪ್ನ್ನು ಸಿದ್ದಗೊಳ್ಳಿಸುತ್ತಿದೆ ಇದನ್ನು ಬಳಕೆ ಮಾಡಿಕೊಂಡು ನಿಮ್ಮ ಹೊಲದಲ್ಲಿ ಯಾವ ಬೆಳೆಯನ್ನು ಬೆಳೆಯಬಹುದು ಅದಕ್ಕೆ ಯಾವ ಯಾವ ಗೊಬ್ಬರವನ್ನು ಹಾಕಬೇಕು, ಅದು ಎಲ್ಲಿ ಸಿಗುತ್ತದೆ, ಎಂಬ ಮಾಹಿತಿಯನ್ನು ನೀಡುವುದರೊಂದಿಗೆ ನಿಮಗೆ ಅಗತ್ಯವಾದ ಗೊಬ್ಬರವನ್ನು ಯಾವ ಅಂಗಡಿಯಿಂದ ಖರೀಧಿ ಮಾಡಬೇಕು ಎಂದು ತಿಳಿಸಿ ನಿಮಗೆ ಅಗತ್ಯವಾದಷ್ಟು ಗೊಬ್ಬರವನ್ನು ಕಾಯ್ದಿರಿಸಿಕೊಳ್ಳಬಹುದಾಗಿದೆ ಇದನ್ನು ಪಡೆಯಲು ಮೂರು ದಿನಗಳ ಕಾಲಾವಕಾಶವನ್ನು ನೀಡಲಾಗುತ್ತದೆ ಈ ಆಪ್ ಮುಂದಿನ ದಿನಗಳಲ್ಲಿ ಜಾರಿಯಾಗಲಿದೆ ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೋಟೆನಾಡು ಚಿತ್ರದುರ್ಗ ಜಿಲ್ಲಾ ಬಿತ್ತನೆ ಬೀಜ ಕೀಟನಾಶಕ ಮತ್ತು ರಸಗೊಬ್ಬರ ಮಾರಾಟಗಾರರ ಸಂಘದ ಅಧ್ಯಕ್ಷರಾದ ಬಿ.ಟಿ.ನಿರಂಜನ್ ಮೂರ್ತಿ ಮಾತನಾಡಿ, ರೈತರಿಗೆ ನಮ್ಮ ಸಂಘದವತಿಯಿಂದ ಗುಣಮಟ್ಟದ ಬಿತ್ತನೆ ಬೀಜ ರಸಗೊಬ್ಬರ ಹಾಗೂ ಕ್ರಮೀನಾಶಕಗಳನ್ನು ನೀಡಲಾಗುವುದು, ವ್ಯವಹಾರವನ್ನು ಮಾಡುತ್ತೇನೆ ಮೋಸವನ್ನು ಮಾಡುವುದಿಲ್ಲ, ಇಂದಿನ ದಿನದಲ್ಲಿ ನಮಗೆ ಹೆಚ್ಚುವರಿಯಾಗಿ ಹೊರೆ ಬೀಳುತ್ತಿದ ಇದನ್ನು ಕಡಿಮೆ ಮಾಡಿದರೆ ನಾವುಗಳು ಸಹಾ ರೈತರಿಗೆ ಎಂ.ಆರ್.ಪಿ. ದರದಲ್ಲಿ ವಸ್ತುಗಳನ್ನು ನೀಡಬಹುದಾಗಿದೆ. ಇದರ ಬಗ್ಗೆ ಜಂಟಿ ಕೃಷಿ ನಿರ್ದೆಶಕರು ಆಲೋಚನೆಯನ್ನು ಮಾಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ (ಜಾರಿದಳ-2)ರ ಸಹಾಯಕ ಕೃಷಿ ನಿರ್ದೇಶಕರಾದ ಉಲ್ತಾತ್ ಜೈಬಾ, ಚಿತ್ರದುರ್ಗ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶರಾದ ರಾಮಕೃಷ್ಣ ಹೆಚ್.ಕೆ. ಹೊಳಲ್ಕರೆ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶರಾದ ಚಂದ್ರಕುಮಾರ್ ಎನ್. ಚಳ್ಳಕೆರೆ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶರಾದ ರಮೇಶ್ ಎಸ್.ಟಿ. ಮೊಳಕಾಲ್ಮೂರು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶರಾದ ಮಂಜುನಾಥ ಎಂ.ವಿ. ಹಿರಿಯೂರು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಾದ ಅಶೋಕ್ ಜೆ. ಭಾಗವಹಿಸಿದ್ದರು. ಮಂಜನಾಥ್ ಪ್ರಾರ್ಥಿಸಿದರೆ ರಘು ಸ್ವಾಗತಿಸಿದರು, ಮಂಜನಗೌಡ ವಂದಿಸಿದರು.