ಯೋಗದಿಂದ ರೋಗಮುಕ್ತ ಸಮಾಜ ನಿರ್ಮಾಣ ಸಾಧ್ಯ: ಚಿತ್ರದುರ್ಗದಲ್ಲಿ ಬಿಜೆಪಿ ಯೋಗ ದಿನಾಚರಣೆ ಕಾರ್ಯಕ್ರಮ.

ಚಿತ್ರದುರ್ಗ ಜೂ. 21

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಭಾರತೀಯ ಜನತಾ ಪಾರ್ಟಿ, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದವತಿಯಿಂದ ಭಾನುವಾರ ಬೆಳಗ್ಗೆ ನಗರದ ಚಂದ್ರವಳ್ಳಿ ಆವರಣದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಚಿತ್ರದುರ್ಗ ಬಿಜೆಪಿ ನಗರ ಹಾಗೂ ಗ್ರಾಮಾಂತರ ಮಂಡಲ ವತಿಯಿಂದ 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ-2026 ಯೋಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್ ನವೀನ್, ಯೋಗದಿಂದ ವೈಯಕ್ತಿಕ ಆರೋಗ್ಯ ಜೊತೆಗೆ, ರೋಗ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಯೋಗವು ಭಾರತದ ನೆಲ ಜಗತ್ತಿಗೆ ನೀಡಿದ ಅತ್ಯಂತ ಅವಿಸ್ಮರಣೀಯ ಕೊಡುಗೆಯಾಗಿದೆ. ಪ್ರಸ್ತುತ 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು `ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾ ಗುತ್ತಿದೆ. ಅತ್ಯಂತ ಅರ್ಥಪೂರ್ಣವಾಗಿದೆ. ಯೌವ್ವನ ಹಾಗೂ ಮಧ್ಯ ವಯಸ್ಸಿನಲ್ಲಿ ಇರುವಾಗ ನಾವು ದೈಹಿಕ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವುದಿಲ್ಲ. ಆದರೆ ವಯಸ್ಸಾದ ನಂತರ ಎದುರಾಗುವ ಹತ್ತು ಹಲವು ಆರೋಗ್ಯ ಸಮಸ್ಯೆಗಳಿಂದಾಗಿ ನೆಮ್ಮದಿ ಕಳೆದುಕೊಳ್ಳುತ್ತೇವೆ. ವೃದ್ಧಾಪ್ಯದಲ್ಲಿ ಬರುವ ರೋಗಗಳಿ ಗಾಗಿ ಇಡೀ ಜೀವನದ ಗಳಿಕೆಯನ್ನು ಆಸ್ಪತ್ರೆಗಳಿಗೆ ವ್ಯಯಿಸುವ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಇದರ ಬದಲು ಆರಂಭದಲ್ಲಿ ಪ್ರತಿನಿತ್ಯ ಯೋಗ ಹಾಗೂ ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಂಡರೇ, ವೃದ್ಧಾಪ್ಯ ಸಂತಸಕರವಾಗಿರಲಿದೆ ಎಂದು ತಿಳಿಸಿದರು.

ಕೇವಲ ಜೂನ್ 21ರಂದು ಮಾತ್ರ ಯೋಗ ಮಾಡುವುದಕ್ಕೆ ಸೀಮಿತವಾಗದೆ, ವರ್ಷದ 365 ದಿನಗಳೂ ಯೋಗವನ್ನು ಜೀವನದ ಭಾಗವಾಗಿಸಿಕೊಳ್ಳಬೇಕು. ಬದಲಾಗುತ್ತಿರುವ ಇಂದಿನ ಜೀವನ ಶೈಲಿಯಲ್ಲಿ ಜೀವನ ವೇಗವಾಗಿಬಿಟ್ಟಿದೆ. ಹಿಂದೆ ನೂರು ವರ್ಷ ಬದುಕುತ್ತಿದ್ದ ನಮಗೆ, ಈಗ 50-60 ವರ್ಷ ಬದುಕುವುದು ಕಷ್ಟವಾಗುತ್ತಿದೆ. ಇನ್ನು 30 ವರ್ಷದ ಯುವಕರಿಗೆ ಹೃದಯಾಘಾತ ಹಾಗೂ ಇತರ ಕಾಯಿಲೆಗಳು ಬಲಿಯಾಗುತ್ತಿರುವುದು ಆತಂಕಕಾರಿಯಾಗಿದೆ. ಯುವಜನತೆ ಯೋಗದ ಕಡೆಗೆ ತಮ್ಮ ಮನಸ್ಸು ಹಾಗೂ ಧ್ಯಾನವನ್ನು ಹರಿಸಬೇಕು. ಯೋಗದ ಮೂಲಕ ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಸಾಧ್ಯ ವಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷರಾದ ಕೆ.ಟಿ ಕುಮಾರಸ್ವಾಮಿ ಮಾತನಾಡಿ, ಯೋಗವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಚಯವನ್ನು ಮೋದಿಯವರ ಮಾಡಿಕೊಟ್ಟರು, ಇಂದಿನ ದಿನಮಾನದಲ್ಲಿ ಅಸ್ಪತ್ರೆಗಳಿಗಿಂತ ಯೋಗ ಕೇಂದ್ರÀಗಳು ಹೆಚ್ಚಾಗಬೇಕಿದೆ ಎಂದರು.

ಈ ಸಂದರ್ಭದಲ್ಲಿ ದಾವಣಗೆರೆ ಸಹಪ್ರಭಾರಿಗಳಾದ ಮುರಳಿ, ನಗರಾಧ್ಯಕ್ಷರಾದ ಹೆಚ್.ಎನ್ ಲೋಕೇಶ್ ಕುಮಾರ್, ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ನಾಗರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವೆಂಕಟೇಶ್ ಯಾದವ್, ಮೋಹನ್‍ಕುಮಾರ್, ಮಾಧುರಿ ಗಿರೀಶ್, ಜಿಲ್ಲಾ ಉಪಾಧ್ಯಕ್ಷರಾದ ಲಿಂಗರಾಜು, ಜಿಲ್ಲಾ ಕಾರ್ಯದರ್ಶಿಗಳಾದ ರೇಖಾ, ಜಿಲ್ಲಾ ವಕ್ತಾರರಾದ ನಾಗರಾಜ್ ಬೇದ್ರೆ, ಜಿಲ್ಲಾ ಎಸ್.ಸಿ ಮೋರ್ಚಾ ಜಿಲ್ಲಾಧ್ಯಕ್ಷರಾದ ಪರಶುರಾಮ್, ನಗರ ಪ್ರಧಾನ ಕಾರ್ಯದರ್ಶಿಗಳಾದ ಲೀಲಾವತಿ, ಶಶಿಧರ್, ಬಸವೇಶ್, ಯುವ ಮೋರ್ಚಾ ನಗರಧ್ಯಕ್ಷರಾದ ವಸಂತ್‍ಆಚಾರ್, ನಗರ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರಾದ ಮೊಹಮ್ಮದ್ ದಸ್ತಗಿರ್, ಗ್ರಾಮಾಂತರ ಯುವ ಮೋರ್ಚಾ ಅಧ್ಯಕ್ಷರಾದ ಸಿದ್ದೇಶ್ ಯಾದವ್, ಯಶೋಧ, ಸುಮಾ, ಕಮಲ ಹಾಗೂ ಯೋಗ ಗುರುಗಳಾದ ಪರಶುರಾಮ್, ಓಬಣ್ಣ ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು ಭಾಗವಹಿಸಿದ್ದರು.

Follow the ಸಮಗ್ರ ಸುದ್ದಿ Telegram Channel: https://t.me/SamagraSuddi

ಸಮಗ್ರ ಸುದ್ದಿ channel on WhatsApp:

https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *